ಅಂಕೋಲಾ : ಒನ್ ಲೈಟ್ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ಸಂಗಮ ಸೇವಾ ಸಂಸ್ಥೆ ಅಂಕೋಲಾ, ಗ್ರಾಂ ಪಂ ಡೊಂಗ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ಕಣ್ಣು ತಪಾಸಣಾ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದ ಅರ್ಹ ಫಲಾನುಭವಿಗಳಿಗೆ ಸೆ 4 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಕಲ್ಲೇಶ್ವರ ಶ್ರೀ ದೇವಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕನ್ನಡಕಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನೂರಾರು ಜನರಿಗೆ ಅನುಕೂಲ
ಡೋಂಗ್ರಿ ಗ್ರಾ ಪಂ ಅಧ್ಯಕ್ಷರಾದ ವಿನೋದ ಭಟ್ಟ ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಪಂಚಾಯತ ಬಾಗದಲ್ಲಿ ಇಂತಹ ಕಾರ್ಯಕ್ರಮ ಮಾಡಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದರು. ಸಂಘಟಕ ಪ್ರಮುಖ ವಿ ಎಸ್ ಭಟ್ಟ ಕಲ್ಲೇಶ್ವರ ಮಾತನಾಡಿ ನೂರಾರು ಜನರಿಗೆ ಈ ಕಣ್ಣು ತಪಾಸಣಾ ಶಿಬಿರದಿಂದ ಅನುಕೂಲವಾಗಿದೆ ಎಂದರು.
ಉಚಿತ ಕನ್ನಡಕ ವಿತರಣೆ
ನಮ್ಮ ಪಂಚಾಯತ ತಾಲೂಕು ಕೇಂದ್ರದಿಂದ ಬಹುದೂರದಲ್ಲಿದ್ದು, ಅಂಕೋಲಾ ಪಟ್ಟಣಕ್ಕೆ ಹೊಗಿ ಬರುವುದು ಕಷ್ಟವಾಗಿದ್ದು, ದೃಷ್ಟಿ ದೋಷ ಉಳ್ಳ ಹಲವರಿಗೆ ಶಿಬಿರದ ಪ್ರಯೋಜನ ನಮ್ಮ ಊರಲ್ಲೇ ಸಿಗುವಂತಾಗಿದ್ದು, ಸಂಘಟಕರಲ್ಲರಿಗೂ ಈ ಸೇವಾ ಕಾರ್ಯ ಸಮಾಧಾನ ತಂದಿದೆ ಎಂದರು ಪ್ರಮುಖರಾದ ಶೇಖರ ಗಾಂವ್ಕರ,ಜನಾರ್ದನ ಹೆಗಡೆ,ಮಂಜುನಾಥ ಗಾಂವ್ಕರ, ಇತರರಿದ್ದರು. ನೂರಾರು ಜನರಿಗೆ ಕನ್ನಡವನ್ನು ಉಚಿತವಾಗಿ ವಿತರಿಸಲಾಯಿತು.
ಇದನ್ನೂ ಓದಿ: ಅಂಕೋಲಾ ತಾಲೂಕಿಗೆ ಸಂಬoಧಿಸಿದ ಸುದ್ದಿಗಳು