ಮುಂಡಗೋಡ: ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದವರ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮುಂಡಗೋಡು ನಿವಾಸಿಯಾಗಿದ್ದ 29 ವರ್ಷದ ಆದಿತಿ ಆನಂದ ಬಸ್ತಾವಾಡ ಇವಳು ದಿನಾಂಕ 7-3-2025 ರಂದು ಮನೆಯಿಂದ ಹೋದವಳು ನಾಪತ್ತೆಯಾಗಿದ್ದಾಳೆ. ಸಂಜೆ 4 ಗಂಟೆಯಾದರೂ ಹೋಟೆಲಿಗೆ ಬಾರದೇ ಸಂಬoಧಿಕರ ಮನೆಗೂ ಹೋಗದೇ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ.
ಮಾಹಿತಿ ನೀಡುವಂತೆ ಮನವಿ
ಮಹಿಳೆಯ ಚಹರೆ: ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು, ಉದ್ದನೆಯ ಮುಖ, ಕಪ್ಪು ಬಿಳಿ ಮಿಶ್ರಿತ ಟೀ ಶರ್ಟ್ ಹಾಗೂ ನೈಟ್ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನೂ ಮುಂಡಗೋಡ ತಾಲೂಕಿನ ಹಿರೇಹಳ್ಳಿಯ 45 ವರ್ಷದ ಆಂಜಿನೇಯ ಜಟ್ಟಿಂಗಪ್ಪ ಕೃಷ್ಣಾಜಿ ಎಂಬಾತನು ಮಾನಸಿಕ ಅಸ್ತವ್ಯಸ್ಥರಾಗಿದ್ದು, ದಿನಾಂಕ 19-06-2025ರಂದು ಮನೆಯಿಂದ ಹೋದವನು ಮರಳಿ ಮನೆಗೆ ಬಾರದೇ ಸಂಬoಧಿಕರ ಮನೆಗೂ ಹೊಗದೇ ಎಲ್ಲೋ ಹೋಗಿ ಕಾಣೆಯಾಗಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಚಹರೆ: ಉದ್ದನೆಯ ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, 5.4 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಗುಲಾಬಿ ಬಣ್ಣದ ಅಂಗಿ ಚೆಕ್ಸ್ ಲುಂಗಿ ಧರಿಸಿರುತ್ತಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್