- ಆಳಾಗಿ ದುಡಿದು ಅರಸನಾದ ಕಥೆ
- ಸೂರ್ಯ ಸಹಕಾರಿಯ ಹಿಂದಿದೆ ಶ್ರಮದ ಶಕ್ತಿ
- ಗ್ರಾಹಕರ ವಿಶ್ವಾಸದಲ್ಲಿ ಬೆಳಗುತ್ತಿದೆ ಸೂರ್ಯ ಸಹಕಾರಿ
ಅಂಕೋಲಾ: ಅಂಕೋಲೆ ಎಂದಾಗ ಕರಿ ಇಸಾಡು ಮಾವಿನಹಣ್ಣು ನೆನಪಾದರೆ, “ಸೂರ್ಯ” ಸಹಕಾರಿ ಎಂದಾಗ ನಾಗರಾಜ ನಾಯಕ ಅರೆಗದ್ದೆ ನೆನಪಾಗುತ್ತಾರೆ. ಅದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮ, ಆಯ್ಸಪ್ಲಾಂಟ್. ಸಹನಾ ಪ್ಯಾಲೇಸ್ ಲಾಡ್ಜ್, ಹೊಟೇಲ್ ಅಂಕೋಲಾ ಇಂಟರ್ ನ್ಯಾಷನಲ್, ಮಂತ್ರಿ ಸ್ಟೇ ರಿಸಾರ್ಟ್‌ಗಳು ಕಣ್ಮುಂದೆ ಹಾದು ಹೋಗುತ್ತಲೇ ಉತ್ತಮ ಕೃಷಿಕನಾಗಿ ಗುರುತಿಸಿಕೊಂಡ ಪ್ರಗತಿ ಪುರುಷನಾಗಿ ಪ್ರತಿಬಿಂಬಿಸುತ್ತಾರೆ.
500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಭಾಗ್ಯ
“ಸೂರ್ಯ” ಸಹಕಾರಿಯ ಬಹುತೇಕ ಶಾಖೆಗಳು ಸ್ವಂತ ಕಟ್ಟಡದ ಶಾಖೆಗಳಾಗಿದ್ದು, ಅದನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆದು, ತಮ್ಮ 46 ನೇ ವಯಸ್ಸಿಗೆ 500 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಭಾಗ್ಯ ಕರುಣಿಸಿದ ಭಾಗ್ಯವಂತ ನಾಗರಾಜ ನಾಯಕ, ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ದಿನದ ಹೆಚ್ಚು ಸಮಯ ಮೀಸಲಿಟ್ಟು, ಸಾಲ ಮರುಪಾವತಿ ಜೊತೆಗೆ ಗ್ರಾಹಕರು ಕಟ್ಟು ಬಾಕಿದಾರರಾಗದಂತೆ ನೋಡಿಕೊಳ್ಳುತ್ತಾ ತಮ್ಮ ಸಹಕಾರಿಯ ಸೇವೆಯಲ್ಲಿ ಸತತ 14 ವರ್ಷ ಪೂರೈಸಿ 15 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಸಹಕಾರಿಯ ಅಭಿವೃದ್ಧಿ ಕನಸನ್ನು ಹೊತ್ತು, ಹೊನ್ನಾವರ, ಚಂದಾವರ, ಶಿರ್ಸಿ, ಯಲ್ಲಾಪುರ, ಭಟ್ಕಳ ಹೀಗೆ ಇನ್ನೂ ಐದಾರು ಕಡೆ ಸ್ವಂತ ನಿವೇಶನ ಖರೀದಿಸಿ, ಜಿಲ್ಲಾ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಗುರಿಯೊಂದಿಗೆ ಪ್ರಗತಿ ಸಾಧಿಸುತ್ತಿದ್ದಾರೆ.
ಗ್ರಾಹಕರ ವಿಶ್ವಾಸಕ್ಕೆ ಪಾರದರ್ಶಕವಾದ ಸೇವೆಯನ್ನು ನೀಡುವ ದಿಶೆಯಲ್ಲಿ, ಸೂರ್ಯ ಸಹಕಾರಿ ಪ್ರತಿವರ್ಷ ತನ್ನ ಬ್ಯಾಂಕಿನ ವ್ಯವಹಾರವನ್ನು ‘ಅಢಾವೆ ಪತ್ರಿಕೆ” ಮೂಲಕ ಕೈಗನ್ನಡಿಯಂತೆ ಪ್ರತಿಯೊಬ್ಬ ಗ್ರಾಹಕರ ಕೈ ಸೇರುತ್ತಿದೆ. ನಾಗರಾಜ ನಾಯಕರ ಸಾಧನೆ ಹಿಂದೆ ಅವರ ಅಜ್ಜ ವಂದಿಗೆಯ ಹೊನ್ನಪ್ಪ ಹಮ್ಮಣ್ಣ ನಾಯಕ ನೂರಾರು ವರ್ಷಗಳ ಹಿಂದೆಯೇ ಛಲಗಾರನಾಗಿ, ಅರೆಗದ್ದೆಗೆ ಬಂದು ನೂರಾರು ಎಕರೆ ಹೊಲವನ್ನು ಸಾಗುವಳಿ ಮಾಡಿ, ಕಲ್ಲು ಬೆಳೆದು ಸಾವಿರಾರು ಕೊಡ ಬೆಲ್ಲ ಮಾಡಿ ಮಾರಿದಂತೆ, ರೈಸ್‌ಮಿಲ್‌ನ್ನು ಹೊಂದಿದಲ್ಲದೇ ರಾಟೆಯಲ್ಲಿ ನೀರನ್ನು ಹೊಲಕ್ಕೆ ಹನಿಸಿದವ.
ಇವರ ಮಗ ಹಮ್ಮಣ್ಣ ನಾಯಕ ಕೂಡಾ ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟುತ್ತದೆ ಎನ್ನುವಂತೆ ಕೃಷಿಯ ಜೊತೆಗೆ ಹತ್ತಾರು ಲಾರಿಗಳ ಮಾಲೀಕನಾಗಿ, ಕೃಷರ್, ಕಾಂಟ್ರ್ಯಾಕ್ಟರ್ ಗುತ್ತಿಗೆದಾರನಾಗಿ ಅನೇಕ ಉದ್ದಿಮೆಗಳನ್ನು ಮಾಡಿ, ಬಾಳೆಗುಳಿಯಲ್ಲಿ ನೂರಾರು ಮ್ಯಾಂಗನೀಸ್ ಲಾರಿ ಚಾಲಕರ ಕಷ್ಟ ಸುಖಕ್ಕೆ ಬೆಳಕಾಗಿ ಅರೆಗದ್ದೆ ಸಾಹುಕಾರನಾದವರು. ಗೋವಾದ ಪರ್ತಗಾಳಿ ಮಠದ 90 ಎಕರೆ ಪ್ರದೇಶದ ಕಟ್ಟಡ ಕಾಮಗಾರಿಗೆ 35 ಸಾವಿರ ಚಿರೆ ಕಲ್ಲುಗಳನ್ನು ಅಂಕೋಲಾದಿಂದ ಸರಬರಾಜು ಮಾಡಿದವರು.
ಇಂತಹವರ (ಹಮ್ಮಣ್ಣ ಮತ್ತು ವೆಂಕಮ್ಮ) ಮಗನಾಗಿ ನಾಗರಾಜ ನಾಯಕ ಅರೆಗದ್ದೆಯವರು ಕರ್ತವ್ಯವೇ ದೇವರೆಂದು ನಂಬಿ ‘ಆಳಾಗಿ ದುಡಿದು ಅರಸನಾಗಿ ಬದುಕನ್ನು ಕಾಣುವ ಹಂತಕ್ಕೆ ಬೆಳೆದು ಇಂದು ತನ್ನ 9 ನೇ “ಸೂರ್ಯ” ಸಹಕಾರಿ ಶಾಖೆಯನ್ನು ಕುಮಟಾದ ಹೊಲನಗದ್ದೆಯಲ್ಲಿ (ಬಾಡ) ಲೋಕಾರ್ಪಣೆಗೆ ಅಣಿಗೊಳಿಸಿದ್ದಾರೆ.
ಈ ಶುಭ ಸಮಾರಂಭಕ್ಕೆ ಉದ್ಘಾಟಕರಾಗಿ, ಶ್ರೀ ಎಸ್. ಎಸ್. ನಾಯಕ, ಭಾ.ಪು.ಸ. ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ಮುಖ್ಯ ಅತಿಥಿಗಳಾಗಿ, ಶ್ರೀ ಸುಬ್ರಮಣ್ಯ ಜಿ. ಹೆಗಡೆ ಲೆಕ್ಕಪರಿಶೋಧಕರು, ಶಿರಸಿ, ಶ್ರೀ ಹೊನ್ನಪ್ಪ ಎನ್. ನಾಯಕ, ಜಿ.ಪಂ. ಮಾಜಿ ಸದಸ್ಯರು, ಹಿರೇಗುತ್ತಿ ಶ್ರೀ ಎಂ.ಎಂ. ಹೆಗಡೆ ಅಧ್ಯಕ್ಷರು ಹೊನಲಗದ್ದೆ ಪಂಚಾಯತ, ಶ್ರೀ ರತ್ನಾಕರ ನಾಯ್ಕ, ಜಿ.ಪಂ. ಮಾಜಿ ಸದಸ್ಯರವರ ಅಮೃತ ಹಸ್ತದಲ್ಲಿ ಸಮಯ 11.00 ಘಂ. ಲೋಕಾರ್ಪಣೆಗೊಳ್ಳಲಿದೆ.
ವಿ.ಸೂ. ‘ಸೂರ್ಯ’ ಸಂಸ್ಥಾಪಕ ನಾಗರಾಜ ನಾಯಕರಿಗೆ ದಶಬಾಹುವಿನ ಸ್ಥಾನದಲ್ಲಿ ಕಂಗೊಳಿಸಲು ಅಂಕೋಲಾ ತಾಲೂಕಿನ ಹಿಲ್ಲೂರಿನಲ್ಲಿ ಹತ್ತನೇ ನೂತನ ಶಾಖೆ ದಿನಾಂಕ: 18-12-2025 ರಂದು ಮುಂಜಾನೆ 11-00 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಈ ಶುಭ ಕಾರ್ಯದಲ್ಲಿ ತಾವು ಬಂದು ಶುಭ ಹಾರೈಸಲು ಆದರದ ಸ್ವಾಗತ ಕೋರುವವರು. ನಾಗರಾಜ ಹಮ್ಮಣ್ಣ ನಾಯಕ ಅರೆಗದ್ದೆ
ಸಂಸ್ಥಾಪಕರು ಸೂರ್ಯ ಕ್ರೆಡಿಟ್ ಸೌಹಾರ್ದ ಸಂಘ ನಿಯಮಿತ ಅಲಗೇರಿ. ಮಾಲಕರು: ಅಂಕೋಲಾ ಇಂಟರ್ ನ್ಯಾಷನಲ್, ಸಹನಾ ಪ್ಯಾಲೇಸ “ಮಂತ್ರಿ ಸ್ಟೇ” ರೆಸಾರ್ಟ ಗೋಕರ್ಣ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆದಾರರು
ಮಾಹಿತಿಗಾಗಿ: 8660205501

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ











