ಕಾರವಾರ: ದಿವಂಗತ ಕೃಷ್ಣ ಸೈಲ್ ಹಾಗೂ ಗಿರಿಜಾ ಕೃಷ್ಣ ಸೈಲ್ ರವರ ಆರ್ಶೀವಾದದೊಂದಿಗೆ ಈ ಕ್ಷೇತ್ರದ ಆತ್ಮೀಯನಾದ ನಾನು, ಸತೀಶ ಕೃಷ್ಣ ಸೈಲ್, ಶಾಸಕರು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ ವಿನಂತಿಸಿಕೊಳ್ಳುವುದೇನೆಂದರೆ, ಪ್ರತಿವರ್ಷದಂತೆ ನಾಳೆ ದಿನಾಂಕ: 14.12.2025ರಂದು ಭಾನುವಾರ ಮಧ್ಯಾಹ್ನ 1-20 ಗಂಟೆಗೆ ಸದಾಶಿವಗಡದಲ್ಲಿರುವ ನಮ್ಮ ಸ್ವಗೃಹದಲ್ಲಿ “ಶತರುದ್ರ ಮತ್ತು ಶತಚಂಡಿಕಾ ಯಾಗ” ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದೇವೆ. ತಾವುಗಳು ಸಹ ಕುಟುಂಬದೊಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರುಗಳ ಆರ್ಶೀವಾದವನ್ನು ಪಡೆದು. ಪ್ರಸಾದವನ್ನು ಸ್ವೀಕರಿಸಿ ನಮ್ಮನ್ನು ಸಹ ಆರ್ಶೀವ್ರದಿಸಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಅನಾರೋಗ್ಯ ಕಾರಣದಿಂದ ಖುದ್ದಾಗಿ ನಿಮ್ಮನ್ನು ಸಂಪರ್ಕಿಸಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ವಿಷಾದವನ್ನು ಸಹ ವ್ಯಕ್ತಪಡಿಸುತ್ತಿದ್ದೇನೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ , ಅಂಕೋಲಾ











