ಅಂಕೋಲಾ: ಸಾರಿಗೆ ಸಂಸ್ಥೆಯ ಬಸ್ ಒಂದು ಪಲ್ಟಿಯಾಗಿ ಚಾಲಕ , ನಿರ್ವಾಹಕ, ಪುಟ್ಟ ಮಗು ಹಾಗೂ ಇತರೆ ಪ್ರಯಾಣಿಕರೂ ಸೇರಿ ಸುಮಾರು 26ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಸುಂಕಸಾಳ – ವಜ್ರಳ್ಳಿ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಭವಿಸಿದ್ದು, ಇದರಲ್ಲಿ ಸುಮಾರು ಆರು ಪ್ರಯಾಣಿಕರಿಗೆ ತಲೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಪುಟಾಣಿ ಮಗು ಸೇರಿದಂತೆ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದು ಮೂರನಾಲ್ಕು ಆಂಬ್ಯುಲೆನ್ಸ್ ಮತ್ತು ಅರಣ್ಯ ಇಲಾಖೆ ಜೀಪ್ ಮತ್ತಿತರ ಖಾಸಗಿ ವಾಹನಗಳಲ್ಲಿಯೂ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರಾಯಚೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ಬಸ್ಸಿನ, ಸ್ಟಿಯರಿಂಗ್ ಎಕ್ಸಲ್ ತುಂಡಾಗಿ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ತಲೆ ಕೆಳಗಾಗಿ ಉರುಳಿದ್ದು, ಮುಂಬದಿ ಚಕ್ರ ಬೇರ್ಪಟ್ಟು, ಬಸ್ ಪಲ್ಟಿಯಾಗಿರುವುದು ನೋಡಿದರೆ, ಅದೃಷ್ಟವಶಾತ್ ದೇವರ ದಯೆ ಇಂದನೇ ಹೆಚ್ಚಿನ ಅಪಾಯದಿಂದ ನಾವೆಲ್ಲ ಪಾರಾಗಿ ಬಂದೆವು ಎಂದು ಅಪಘಾತಗೊಂಡ ಕೆಲ ಪ್ರಯಾಣಿಕರು ಹೇಳಿಕೊಂಡು ,ಸಮಾಧಾನ ಪಟ್ಟಿಕೊಂಡಂತಿತ್ತು.
ಹೊಂಡ ಗುಂಡಿಗಳಿಂದ ತುಂಬಿರುವ ರಾಷ್ಟ್ರೀಯ ಹೆದ್ದಾರಿಯನ್ನು ಈ ವರೆಗೂ ದುರಸ್ತಿಗೊಳಿಸದಿರುವುದೇ ಅಪಘಾತ ಹೆಚ್ಚಲು ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾದವ ನಾಯಕ ,ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು,ಮತ್ತೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸ ಬೇಕೆ ಎಂದು ಎಚ್ಚರಿಸಿದ್ದು,ನಾಳೆಯಿಂದಲೇ ಹೆದ್ದಾರಿ ಹೊಂಡ ಮುಚ್ಚುವ ಕಾರ್ಯ ನಡೆಸಲಾಗುವುದು ಎಂದು ಹೇಳಿ ಅಧಿಕಾರಿಗಳು ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಮಾರಿಕೆ ಉತ್ತರ ನೀಡಿದಂತಿತ್ತು.
ಈ ಭೀಕರ ರಸ್ತೆ ಅಪಘಾತಕ್ಕೆ ನಿಖರ ಕಾರಣ ಮತ್ತು ಅಪಘಾತದ ಘಟನೆಗೆ ಸಂಬಂಧಿಸಿದಂತೆ ಹಾಗೂ ಗಾಯಾಳುಗಳ ಬಗ್ಗೆ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












