ಹೊನ್ನಾವರ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚವತಿಯ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ವಿಜೃಂಭಣೆಯಿoದ ಆಚರಿಸಿ 7 ನೇ ದಿನದಲ್ಲಿ ಮೆರವಣಿಗೆ ಮೂಲಕ ಶರಾವತಿ ನದಿಯಲ್ಲಿ ವಿಸರ್ಜಿಸಲಾಯಿತು.
ಹೊನ್ನಾವರದಲ್ಲಿ ಭವ್ಯ ಗಣೇಶೋತ್ಸವ ಮೆರವಣಿಗೆ
ಮೆರವಣಿಗೆಯುದ್ದಕ್ಕೂ ಗಣಪತಿ ಬಪ್ಪಾ ಮೊರಯಾ ಎನ್ನುವ ಘೋಷಣೆ ಜೋರಾಗಿತ್ತು. ಇನ್ನೂ ಮೆರವಣಿಗೆಯಲ್ಲಿ ಪಂಚವಾದ್ಯ, ಕೇರಳದ ಚಂಡೆ ವಾದ್ಯ, ಬ್ಯಾಂಡ್, ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಡಿ.ಜೆ ಸೌಂಡ್ ಹಾಡಿಗೆ ಯುವಕರು, ಯುವತಿಯರು ಸೇರಿದಂತೆ ಹೆಜ್ಜೆಹಾಕಿ ಕುಪ್ಪಳಿಸಿದರು. ಮೆರವಣಿಗೆ ಪ್ರಾರಂಭದಲ್ಲಿ ವರುಣ ಆರ್ಭಟಿಸಿದರೂ, ಚಲಬಿಡದೇ ಡಿ.ಜೆ ತಾಳಕ್ಕೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು, ಯುವತಿಯರು, ಮಹಿಳೆಯರು ಸಹ ಹೆಜ್ಜೆ ಹಾಕಿರುವುದು ಕಂಡುಬoತು.
ಮೆರವಣಿಗೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಮೆರವಣೀಗೆಯಲ್ಲಿ ದೇವತೆಗಳ ಟ್ಯಾಬ್ಲೋ ಗಳು ಗಮನ ಸೆಳೆದವು. ಪೋಲಿಸ್ ಸ್ಟೇಷನ್ ಗಣಪತಿ ಬಿಟ್ಟರೇ ಬೇರೆ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಪ್ರತಿಷ್ಠಾಪಿಸಿದ ಗಣಪನನ್ನು ವಿಸರ್ಜಿಸಲಾಯಿತು. ಪಟ್ಟಣ ಪಂಚಾಯತ ವತಿಯಿಂದ ಗಣಪತಿ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಪೋಲಿಸ್ ಇಲಾಖೆಯಿಂದ ಗಣಪತಿ ವಿಸರ್ಜನೆ ಕೊಂಡೊಯ್ಯುವ ದಾರಿಯುದ್ದಕ್ಕೂ ವಾಹನವನ್ನು ಎಲ್ಲಿಯೂ ನಿಲ್ಲಿಸದೇ ವ್ಯವಸ್ಥೆ ಮಾಡಲಾಗಿತ್ತು.ಸೂಕ್ತ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ದಟ್ಟಣೆಯಾಗಿತ್ತು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ