ಅಂಕೋಲಾ : ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಗೆ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಅರ್ಪಿತಾ ಬೆಲ್ಲದ್ ಅವರು ಭೇಟಿ ನೀಡಿ ಕಾನೂನು ಸೇವೆಗಳ ಪ್ರಾಧಿಕಾರದ ವಿವಿಧ ಕಾರ್ಯಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.
ಜುಲೈ 1 ರಿಂದ ಅಕ್ಟೋಬರ್ 7 ರ ವರೆಗೆ
ಉತ್ತರ ಕನ್ನಡ ಜಿಲ್ಲೆಯ ಜನರ ಅನುಕೂಲಕ್ಕಾಗಿ ಧಾರವಾಡದಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದ್ದು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬoಧಿಸಿದoತ ವಿವಾ ದಗಳನ್ನು ಶುಲ್ಕ ರಹಿತವಾಗಿ ಜನತಾ ನ್ಯಾಯಾಲಯದಲ್ಲಿ ದಾಖಲಿಸಬಹುದಾಗಿದೆ ಎಂದ ಅವರು ಜುಲೈ 1 ರಿಂದ ಅಕ್ಟೋಬರ್ 7 ರ ವರೆಗೆ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 90 ಎಂಬ ವಿಶೇಷ ಅಭಿಯಾನ ರಾಜ್ಯಾದ್ಯಂತ ನಡೆಸಲಾಗುತ್ತಿದೆ.
ಅಂಗನವಾಡಿ ಹಾಗೂ ಸ್ಥಳೀಯ ಗ್ರಾಪಂ ಬಗ್ಗೆ ವಿಶೇಷ ಮೆಚ್ಚುಗೆ
ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ರಾಜಿ ಮಾಡಿಕೊಳ್ಳಲು ಬಯಸಿದರೆ ನ್ಯಾಯಾಲಯಗಳ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು. ಎಸ್. ಸಿ ಕಾಲನಿ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಮೂಲಭೂತ ಸೌಕರ್ಯಗಳ ನಿರ್ವಹಣೆ ಕುರಿತು ಅಂಗನವಾಡಿ ಹಾಗೂ ಸ್ಥಳೀಯ ಗ್ರಾಪಂ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ವಂದಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ನಾಯಕ ಮಾತನಾಡಿ ನ್ಯಾಯಾಧೀಶರ ಭೇಟಿಯಿಂದಾಗಿ ಲೋಕ ಅದಾಲತ್ ಮತ್ತು ಇತರ ಕಾನೂನು ಸವಲತ್ತುಗಳ ಕುರಿತು ಜನರಿಗೆ ಉಪಯುಕ್ತ ಮಾಹಿತಿ ದೊರಕಿದಂತಾಗಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ನಾಯಕ , ತಾಲೂಕಾ ವಕೀಲರ ಸಂಘದ ಅಧ್ಯಕ್ಷೆ ಪ್ರತಿಭಾ ನಾಯ್ಕ, ಕಾರ್ಯದರ್ಶಿ ಮಮತಾ ಕೆರೆಮನೆ, ಗ್ರಾಪಂ ಸದಸ್ಯೆ ಕುಸುಮಾ, ಅಂಗನವಾಡಿ ಕಾರ್ಯಕರ್ತೆಯರು,ಅಂಗನವಾಡಿಯ ಮಕ್ಕಳು ಮತ್ತು ಅವರ ಪಾಲಕರು,ಊರ ನಾಗರಿಕರು, ಉಪಸ್ಥಿತರಿದ್ದರು. ನ್ಯಾಯಾಲಯ ಹಾಗೂ ಗ್ರಾಪಂ ಸಿಬ್ಬಂದಿಗಳು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ













