Focus News

ಅಂಕೋಲಾದಲ್ಲಿ ಇಂದು ಪಂಚದೇವರ ದೊಡ್ಡ ಕಾರ್ತಿಕೋತ್ಸವ : ಶಿರ ಕುಳಿ ಕಾನದೇವಿ ದೇವಸ್ಥಾನದ ಹತ್ತಿರ ವನಭೋಜನಕ್ಕೆ ನಡೆಯುತ್ತಿದೆ ಸಿದ್ದತೆ

Share

ಅಂಕೋಲಾ: ತಾಲೂಕಿನ ಸಂಸ್ಕೃತಿಯ ಆರಾಧನಾ ಪದ್ಧತಿಯಾಗಿ ಹಲವು ತಲೆಮಾರುಗಳಿಂದ ಆಚರಿಸಲ್ಪಡುತ್ತ
ಬಂದಿರುವ ಪಂಚ ದೇವರುಗಳ ದೊಡ್ಡ ಕಾರ್ತಿಕೋತ್ಸವ ಮತ್ತು ವನಭೋಜನ ಮಹೋತ್ಸವ ಈ ಬಾರಿ ನವೆಂಬರ್ 7ರ ಶುಕ್ರವಾರ (ಇಂದು), ಮತ್ತು 8 ರ ಶನಿವಾರ ನಡೆಯಲಿದ್ದು ಅನಾದಿಕಾಲದಿಂದ ಬಾಳೆಗುಳಿಯ ಹಳ್ಳದ ಸಮೀಪ ನಡೆಯುತ್ತ ಬಂದಿರುವ ವನಭೋಜನ ಈ ಬಾರಿ ಶಿರಕುಳಿಯ ಶ್ರೀಶಾಂತಾದುರ್ಗಾ ದೇವಿಯ ಮೂಲ ಸ್ಥಾನ ಕಾನದೇವಿ ದೇವಾಲಯದ ಸಮೀಪ ಇರುವ ವಿಶಾಲ ಬಯಲು ಪ್ರದೇಶದಲ್ಲಿ ನಡೆಯಲಿದೆ.

ಅಂಕೋಲೆಯ ದೊಡ್ಡ ಕಾರ್ತಿಕ ಉತ್ಸವದ ಪ್ರಯುಕ್ತ ತಾಲೂಕಿನ ದೊಡ್ಡ ದೇವರು ಖ್ಯಾತಿಯ ವೆಂಕಟರಮಣ, ಶಕ್ತಿದೇವತೆ ಶ್ರೀಶಾಂತಾದುರ್ಗಾ, ಹನುಮಟ್ಟದ ಶಕ್ತಿ ದೇವತೆ ಶ್ರೀ ಆರ್ಯಾದುರ್ಗಾ, ಅಂಬಾರಕೊಡ್ಲ ಮುಖ್ಯ ರಸ್ತೆ ಅಂಚಿಗೆ ಇರುವ ಶ್ರೀ ನಾರಾಯಣ ದೇವರು ಮತ್ತು ಹೊನ್ನಿಕೇರಿಯ ಶ್ರಿಮಹಾದೇವರ ಪಲ್ಲಕಿಗಳು ಬಾಳೆಗುಳಿಯ ವನ ಪ್ರದೇಶಕ್ಕೆ ತೆರಳಿ ಅಲ್ಲಿ ವನಭೋಜನ ನಡೆಸಿ ರಾತ್ರಿ ವನ ಪ್ರದೇಶದಿಂದ ಮರಳಿ ಬರುತ್ತಿದ್ದವು.

ಇದೀಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮತ್ತಿತರ ಕಾರಣದಿಂದ ವನ ಭೋಜನ ನಡೆಯುವ ಸ್ಥಳದಂಚಿಗೆ ಕಲ್ಲು ಮಣ್ಣುಗಳು ತುಂಬಿ ರುವದು, ಇಕ್ಕಟ್ಟಾದ ಸ್ಥಳ ಮತ್ತಿತರ ಕಾರಣ ದೇವರಲ್ಲಿ ಪ್ರಸಾದ ಹಚ್ಚಿ ಶಿರಕುಳಿಯ ಶ್ರೀಕಾನದೇವಿಯ ದೇವಾಲಯದ ಸಮೀಪ ಇರುವ ದೇವಾಲಯದ ಜಾಗದಲ್ಲಿ ವನಭೋಜನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಇತ್ತೀಚೆಗೆ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರಮುಖರು ,ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ, ಸರ್ವಭಕ್ತರ ಸಹಕಾರ ಕೋರಿದ್ದರು.

ನವಂಬರ 7 ರಂದು ಸಂಜೆ ಐದು ದೇವರ ಪಲ್ಲಕಿಗಳು ಸೇರಿ ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿರುವ ನಾರಾಯಣ ದೇವಾಲಯದ ಮೂಲಕ ಅಂಬಾರಕೊಡ್ಲ -ಶಿರಕುಳಿ ಮಾರ್ಗವಾಗಿ ವನಭೋಜನಕ್ಕೆ ನೂತನವಾಗಿ ಸಿದ್ಧಗೊಂಡ, ಶ್ರೀಕಾನ ದೇವಿ ದೇವಸ್ಥಾನದ ಹತ್ತಿರದ ವಿಶಾಲ ಬಯಲು ಪ್ರದೇಶಕ್ಕೆ ತೆರಳಲಿದ್ದು ,ಅಲ್ಲಿ ವಿರಾಜಮಾನವಾಗಿ ಕುಳಿತು, ಭಕ್ತರ ಆರತಿ ಸೇವೆ ಪೂಜೆ ಸ್ವೀಕರಿಸುವ ಮತ್ತು
ವನಭೋಜನ ವಿಧಿ ವಿಧಾನಗಳು ನಡೆಯಲಿವೆ.

ಮೊದಲ ಬಾರಿಗೆ ತಮ್ಮ ಊರಿಗೆ ಬರುವ ಪಂಚ ದೇವರುಗಳ ಸ್ವಾಗತಕ್ಕೆ ಶಿರಕುಳಿಯ ಜನರು ಕಾತುರರಾಗಿರುವುದು ಒಂದೆಡೆಯಾದರೆ, ವರ್ಷಂಪ್ರತಿಯಂತೆ ದಾರಿ ಉದ್ದಕ್ಕೂ ಆಕರ್ಷಕ ರಂಗೋಲಿ ಚಿತ್ತಾರ,ಸ್ವಾಗತ ಕಮಾನುಗಳು, ವಿದ್ಯುತ್ತ ದೀಪಾಲಂಕಾರ ಹಬ್ಬದ ಕಳೆಯನ್ನು ಹೆಚ್ಚಿಸಲಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ವನಭೋಜನ ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.

ರಾತ್ರಿ ಶಿರಕುಳಿಯಿಂದ ಮರಳುವ ದೇವರ ಪಲ್ಲಕಿಗಳು ಅಂಬಾರಕೊಡ್ಲದ ಬಳಿ ದಲಿತರ ಕೇರಿಯಲ್ಲಿ ಕಡಕಿ ಹಾಸೆಯ ಮೇಲಿಂದ ಹಾದು ಹೋಗುವ ವಿಶಿಷ್ಟ ಸಂಪ್ರದಾಯ ನಡೆಯಲಿದ್ದು,ನವಂಬರ 8 ರಂದು ನಸುಕಿನಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಸರ್ವಾಲಂಕಾರದ
ರಥದಲ್ಲಿ ಇರಿಸಿ ಶ್ರೀವೆಂಕಟರಮಣ ದೇವಾಲಯದಿಂದ ಶ್ರೀಶಾಂತಾದುರ್ಗಾ ದೇವಾಲಯದ ವರೆಗೆ ಐದು ರಥಗಳ ಮೆರವಣಿಗೆ
ನಡೆಯಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಕಾರ್ತಿಕೋತ್ಸವ ವಿದ್ಯುತ್ ದೀಪಾಲಂಕಾರ, ರಂಗೋಲಿ, ವಿವಿಧ ಬಗೆಯ ತೋರಣಗಳ ವೈಭವ ಕಣ್ತುಂಬಿಸಿಕೊಳ್ಳಲೆಂದೇ ,ತಾಲೂಕು ಹಾಗೂ ದೇಶ ವಿದೇಶಗಳಲ್ಲಿ ನೆಲೆಸಿರುವ ಹಲವು ಭಕ್ತರು ಈ ವಿಶೇಷ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆಯಲಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಕುಮಟಾದ ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಖ್ಯಾತ ಕಲಾವಿದರಿಂದ ಲೈವ್ ಮ್ಯೂಜಿಕ್ ನೋಡುತ್ತಾ ರುಚಿ-ಶುಚಿಯಾದ ಆಹಾರ ಸವಿಯುವ ಅವಕಾಶ

ಕುಮಟಾ: ಬ್ರೌನ್ಸ್ ವಿಲೇಜ್ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಕುಮಟಾ, ಇದು ಉತ್ತರಕನ್ನಡ ಜಿಲ್ಲೆಯ ಅತ್ಯುತ್ತಮ ಫ್ಯಾಮಿಲಿ ಗಾರ್ಡನ್ ರೆಸ್ಟೋರೆಂಟ್ ಆಗಿದ್ದು, ಇದೀಗ ಶನಿವಾರ ( ನವೆಂಬರ್ 8 ರಂದು ) ರಾತ್ರಿ...

ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಬೆಳಗಲು ಸಾಧ್ಯ:ಪಿ. ಆರ್. ನಾಯ್ಕ

ಭಟ್ಕಳ : ಒಂದು ಹಣತೆಯಿಂದ ಹಲವು ಹಣತೆಗಳು ಬೆಳಗುವಂತೆ, ಕಲಾಸಿರಿಯು ಬದುಕಿನ ಸಾರ್ಥಕತೆಯ ಜ್ಞಾನದ ಬೆಳಕು ಇತರರ ಬದುಕಿನಲ್ಲೂ ಸದಾ ಬೆಳಗಲು ಸಾಧ್ಯ ಎಂದು ಕಲಾಸಿರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಹೋರಾಟ ನಿರಂತರ : ಬಹಿರಂಗ ಸಭೆ ತಾತ್ಕಾಲಿಕವಾಗಿ ಮುಂದೂಡಿಕೆ : ಸಂಘಟಕ ಪ್ರಮುಖರು ಪ್ರಕಟಣೆಯಲ್ಲಿ ಹೇಳಿದ್ದೇನು ?

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ, ಸಾಮೂಹಿಕ ನಾಯಕತ್ವದಡಿ, ಅಂಕೋಲಾ...

ಚಿಪ್ಪಿ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ...

ಆಧುನಿಕ ಜಗತ್ತನ್ನಾಳಲಿರುವ AI ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಅಂಕೋಲಾ : ಕೃತಕ ಬುದ್ಧಿಮತ್ತೆಯು ( AI ತಂತ್ರಜ್ಞಾನ ) ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ...

ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ ವಿಶೇಷ ಅಭಿಯಾನ

ಅಂಕೋಲಾ : ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಗೆ...

ಅಂಕೋಲಾ ಕಲ್ಲೇಶ್ವರದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಅಂಕೋಲಾ : ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ಸಂಗಮ...

ಹೊನ್ನಾವರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಯ ವಿಸರ್ಜನೆ: ಅದ್ಧೂರಿ ಮೆರವಣಿಗೆ

ಹೊನ್ನಾವರ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚವತಿಯ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ವಿಜೃಂಭಣೆಯಿoದ ಆಚರಿಸಿ 7...

KEB ಗಣಪನಿಗೆ 48 ನೇ ವಾರ್ಷಿಕ ಸಂಭ್ರಮ: ಸೆ.4 ಮಹಾಪೂಜೆ – ಸೆ.5 ರಂದು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆ

ಅಂಕೋಲಾ: ತಾಲೂಕಿನ ಹೆಸ್ಕಾಂ ಇಲಾಖೆ ವತಿಯಿಂದ 48 ನೇ ವರ್ಷದ ಗಣೇಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ...

ವಿಶ್ರಾಂತ ಶಿಕ್ಷಕ ಉಮೇಶ ನಾಯ್ಕ ಅವರಿಗೆ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಸನ್ಮಾನ: “ಸದ್ಗುರು ಸಂಪನ್ನ” ಅಭಿದಾನ ಪ್ರದಾನ

ಕುಮಟಾ: ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಶಿಕ್ಷಕ ವೃತ್ತಿಯಿಂದ ವಯೋನಿವೃತ್ತಿಗೊಂಡ ಸ್ಥಳೀಯರಾದ ಉಮೇಶ ನಾಯ್ಕರವರನ್ನು...