ಅಂಕೋಲಾ: ತಾಲೂಕಿನ ಹೆಸ್ಕಾಂ ಇಲಾಖೆ ವತಿಯಿಂದ 48 ನೇ ವರ್ಷದ ಗಣೇಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು ಸೆ.2 ರ ಮಂಗಳವಾರ, ಮಂಗಲ ಮೂರ್ತಿಯ ಸನ್ನಿಧಿಯಲ್ಲಿ, ಗಣಹವನ ಮತ್ತಿತರ ಧಾರ್ಮಿಕ ಕಾರ್ಯ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಿತು.
ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು,ಸಿಬ್ಬಂದಿಗಳು ಮತ್ತು ಕುಟುಂಬಸ್ಥರು ಪಾಲ್ಗೊಂಡು,ಶ್ರೀ ದೇವರಲ್ಲಿ ಸಕಲರ ಇಷ್ಟಾರ್ಥಸಿದ್ದಿಗೆ ಮತ್ತು ಮಳೆಗಾಲ ಮತ್ತು ಇತರ ಸಂದರ್ಭಗಳಲ್ಲಿ ತಾಲೂಕಿನ ಜನತೆಗೆ ಸೇವೆ ನೀಡುವಾಗ ಯಾವುದೇ ವಿಘ್ನ ಭಾರದಂತೆ ಕಾಪಾಡುವಂತೆ ವಿಘ್ನ ವಿನಾಶಕನಲ್ಲಿ ಪ್ರಾರ್ಥಿಸಿದರು.
ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮ – ನೂರಾರು ಭಕ್ತರ ದರ್ಶನ
ಅಂಕೋಲಾ ಸುತ್ತ ಮುತ್ತ ಕೆ.ಇ.ಬಿ ಗಣಪತಿ ಎಂದೇ ಪ್ರಸಿದ್ದಿ ಪಡೆದಿರುವ ಇಲ್ಲಿನ ಗಣೇಶೋತ್ಸವ ಸಂಸ್ಥೆಯ,ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಕುಟುಂಬ ವರ್ಗದವರು,ನಿವೃತ್ತರು ಸೇರಿ ಹಲವು ಭಕ್ತರ ಸಹಯೋಗದಲ್ಲಿ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಹತ್ತು ದಿನಗಳ ಕಾಲ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿದಿನ ನೂರಾರು ಭಕ್ತರು ಆಗಮಿಸಿ ಗಣೇಶನ ದರ್ಶನ ಪಡೆಯುತ್ತಾರೆ.
ಈ ಬಾರಿ ಸೆಪ್ಟೆಂಬರ್ 4 ರಂದು ಗುರುವಾರ ಸಂಜೆ 7 ಗಂಟೆಯಿಂದ ದೇವರ ಮಹಾಪೂಜೆ ನಡೆಯಲಿದ್ದು, ಸೆಪ್ಟೆಂಬರ್ 5 ರಂದು ಸಂಜೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಹೆಸ್ಕಾಂ ಹಿರಿಯ ಅಧಿಕಾರಿ ಪ್ರವೀಣ್ ನಾಯ್ಕ್, ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ