ಸಿದ್ದಾಪುರ: 2025ನೇ ಸಾಲಿನ ಸಿದ್ದಾಪುರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿoದ ನೀಡುವ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಆರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಆರು ಶಿಕ್ಷಕರು 2025ನೇ ಸಾಲಿನ ಪ್ರಶಸ್ತಿಗೆ ಭಾಜನ
ಪದೋನ್ನತ ಮುಖ್ಯಾಧ್ಯಾಪಕರಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಕೇರಿಯ ಮಾಯಾ ಭಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆ ಕವಂಚೂರು ಇದರ ಮುಖ್ಯಾಧ್ಯಾಪಕರಾದ ಪೂರ್ಣಿಮಾ ನಾಯ್ಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚೆನ್ಮಾಂವ್ ಇದರ ಮುಖ್ಯಾಧ್ಯಾಪಕರಾದ ಶಾಂತಿ ನಾಯ್ಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಂಜಗಿಯ ಸಹ ಶಿಕ್ಷಕ ಅನ್ವರಲಿ ಅಬ್ದುಲ್ ಕರೀಂ ಶೇಖ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳಗೋಡ ಮುಖ್ಯಾಧ್ಯಾಪಕರಾದ ಶ್ರೀಧರ ಸುಬ್ರಾಯ ಭಟ್ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾನ್ಕುಳಿಯ ಮುಖ್ಯಾಧ್ಯಾಪಕರಾದ ಸುರೇಶ ಪಟಗಾರ ಇವರು ಆಯ್ಕೆಯಾಗಿದ್ದಾರೆ.
ಶಿಕ್ಷಕರ ದಿನಾಚರಣೆಯಂದು ಶೃಂಗೇರಿ ಶಂಕರ ಮಠದಲ್ಲಿ ಪ್ರಶಸ್ತಿ ಪ್ರದಾನ
ಆಯ್ಕೆಯಾದ ಈ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ದಿನದಂದು ಸಿದ್ದಾಪುರದ ಶೃಂಗೇರಿ ಶಂಕರ ಮಠದಲ್ಲಿ ನಡೆಯುವ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಭೀಮಣ್ಣ ನಾಯ್ಕ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸಿದ್ದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅಭಿನಂದನೆ ಸಲ್ಲಿಸಿದೆ.
ಇದನ್ನೂ ಓದಿ: ಸೆಪ್ಟೆಂಬರ್ 6ರ ವರೆಗೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?
ವಿಸ್ಮಯ ನ್ಯೂಸ್, ಸಿದ್ದಾಪುರ