ಅಂಕೋಲಾ: ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ, ಹಾಗೂ ಸಮಾಜದಲ್ಲಿ ಹಲವು ವಿದಾಯಕ ಕೆಲಸಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಸಂತ ನಾಯಕ ಜಮಗೋಡ ಅವರು ತಮ್ಮ ಮಗಳು ಪ್ರಥ್ವಿ ಜನ್ಮದಿನದ ಪ್ರಯುಕ್ತ ಅಜ್ಜಿಕಟ್ಟಾದ ಕ್ರಿಸ್ತಮಿತ್ರ ಸೇವಾಶ್ರಮದ ಅಸಹಾಯಕರು,ವೃದ್ಧರು ಮತ್ತಿತರ ವಾಸಿಗಳಿಗೆ ಊಟ, ಸಿಹಿ ತಿಂಡಿ, ಬೆಡ್ ಶೀಟ್, ಟವಲ್ ವಿತರಿಸಿ ಪ್ರೀತಿ ಹಾಗೂ ಮಾನವೀಯತೆ ತೋರಿದ್ದಾರೆ.
ಸಮಾಜ ಸೇವೆಗೆ ಮಾದರಿಯಾಗಿರುವ ವಸಂತ ನಾಯಕ ಕುಟುಂಬ
ಅಸಾಹಯಕರನ್ನು ಸದಾ ಪ್ರೀತಿ ವಾತ್ಸಲ್ಯದಿಂದ ಕಾಣುವ ವಸಂತ ನಾಯಕ ಅವರು ತಮ್ಮ ಕುಟುಂಬದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆದರೂ ಸೇವಾಶ್ರಮ ವಾಸಿಗಳಿಗೆ ಮರೆಯದೇ ಊಟೋಪಚಾರ ನೀಡುವ ಪರಿಪಾಠ ರೂಡಿಸಿಕೊಂಡಿದ್ದು,ತಮ್ಮ ಮಗಳ ಹುಟ್ಟುಹಬ್ಬದ ದಿನದಂದು ಸಹ ಆಶ್ರಮವಾಸಿಗಳಿಗೆ ಸ್ವತಃ ತಾವೇ ಊಟ ಬಡಿಸಿದ ವಸಂತ ನಾಯಕ,ಆಶ್ರಮ ವಾಸಿಗಳ ಆಶೀರ್ವಾದ ಬೇಡಿಕೊಂಡರು.
ಈ ವೇಳೆ ಮಾತನಾಡಿದ ವಸಂತ ನಾಯಕ ಅವರು, ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಬಿಟ್ಟು ಎಲ್ಲರೂ ಒಂದಾಗಿ ಬದುಕಬೇಕು, ತಂದೆ ತಾಯಿ ಗುರು ಹಿರಿಯರು ನಮ್ಮ ಬದುಕಿನ ಮೂಲ ಆಧಾರ ಸ್ತಂಬವಾಗಿದ್ದು ಅವರನ್ನು ಮರೆಯುವ ಕೆಲಸವನ್ನು ಎಂದಿಗೂ ಮಾಡಬಾರದು ಎಂದು ಹೇಳಿ ಅಸಹಾಯಕರಿಗೆ ಆಶ್ರಯ ನೀಡಿ ಪೋಷಿಸುತ್ತ ಬಂದಿರುವ ಕ್ರಿಸ್ತಮಿತ್ರ ಆಶ್ರಮದ ಕೆಲಸ ಶ್ಲಾಘನೀಯ ಎಂದರು.
ಆಶ್ರಮ ವಾಸಿಗಳಿಂದ ಕೃತಜ್ಞತೆ
ವಸಂತ ನಾಯಕ ಅವರ ಪುತ್ರ ಪರಿಸರ ನಾಯಕ, ಬ್ಯಾಂಕ್ ಸಿಬ್ಬಂದಿಗಳಾದ ನಿಲೇಶ ಹನುಮಟ್ಟಾ, ರಾಜನ್ ನಾಯಕ ಮೊದಲಾದವರು ಉಪಸ್ಥಿತರಿದ್ದು ಸೇವಾ ಕಾರ್ಯಕ್ಕೆ ಸಹಕರಿಸಿದರು.ಹತ್ತಾರು ಬಾರಿ ತಾವಿರುವ ಸೇವಾ ಶ್ರಮಕ್ಕೆ ಬಂದು ಊಟ ಬಟ್ಟೆ ಮತ್ತಿತರ ರೀತಿಯ ನೆರವು ನೀಡುತ್ತಾ ಪ್ರೀತಿಯಿಂದ ತಮ್ಮನ್ನು ಕಾಣುವ ವಸಂತ ನಾಯಕ ಕುಟುಂಬದ ಬಗ್ಗೆ ಆಶ್ರಮದ ಕೆಲ ನಿವಾಸಿಗಳು ಪ್ರೀತಿಯಿಂದ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಸೆಪ್ಟೆಂಬರ್ 6ರ ವರೆಗೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ