ಕುಮಟಾ: ಪಟ್ಟಣದ ಎಲ್ಲಡೆ ಸಂಭ್ರಮದಿoದ ಗಣೇಶ ಚತುರ್ಥಿಯನ್ನು ಆಚರಿಸಲಾಗಿದ್ದು ಕುಮಟಾ ಪೊಲೀಸ್ ಠಾಣೆಯ ಆರಾಧ್ಯ ದೇವರು ಶ್ರೀ ಗೊಂಬೆ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹಾ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. 59 ನೇ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ಇಂದು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀದೇವರ ಸನ್ನಿಧಿಯಲ್ಲಿ ಪೋಲೀಸ್ ಸಿಬ್ಬಂದಿಗಳು ಹಾಗೂ ಖ್ಯಾತಕಲಾವಿದರಿಂದ ಭಕ್ತಿ ಭಜನೆ ಕಾರ್ಯಕ್ರಮ ನಡೆದವು.
ಕುಮಟಾ ಪೊಲೀಸ್ ಠಾಣೆಯ ಆರಾಧ್ಯ ದೇವರು ಶ್ರೀ ಗೊಂಬೆ ಗಣಪತಿ
ಗಣೇಶ ಮಂಟಪವನ್ನು ಸುಂದರವಾಗಿ ಅಲಂಕೃತಗೊಳಿಸಲಾಗಿತ್ತು. ವಿವಿಧ ಹೂವುಗಳಿಂದ ಮೂರ್ತಿಯನ್ನು ಶೃಂಗರಿಸಲಾಗಿತ್ತು. ಪೋಲೀಸ್ ಸಿಬ್ಬಂದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಗಣೇಶನಿಗೆ ಹಣ್ಣುಕಾಯಿ ಸೇವೆ, ಪಂಚಗಜ್ಜಾಯ ಸೇವೆ ಸಲ್ಲಿಸಿ ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿಕೊಂಡರು.
ಕುಮಟಾ ಪೊಲೀಸ್ ಗಣಪತಿ ಪ್ರಸಾದ ಭೋಜನ
ನoತರ ದೇವರಿಗೆ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವಿತರಣೆ ನಡೆಯಿತು. ನಂತರ ಕುಮಟಾ ಪೋಲೀಸ್ ಠಾಣೆಯ ವತಿಯಿಂದ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಆಗಮಿಸಿ ಪ್ರಸಾದ ಭೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ, ಖ್ಯಾತ ವೈದ್ಯರಾದ ಡಾ. ಜಿ.ಜಿ. ಹೆಗಡೆ, ಕಾಂಗ್ರೆಸ್ ಮುಖಂಡರಾದ ಭುವನ್ ಭಾಗ್ವತ್, ಹೊನ್ನಪ್ಪ ನಾಯ್ಕ, ಕುಮಟಾ ವೃತ್ತ ನಿರೀಕ್ಷಕರಾದ ಯೋಗೇಶ ಕೆ.ಎಂ. ಪಿ.ಎಸ್.ಐಗಳಾದ ರವಿ ಗುಡ್ಡಿ, ಮಂಜುನಾಥ ಗೌಡರ್, ಮಯೂರ ಪಟ್ಟಣ ಶೆಟ್ಟಿ, ಸಾವಿತ್ರಿ ನಾಯಕ್ ಸೇರಿದಂತೆ ಪೋಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಇದನ್ನೂ ಓದಿ: KEB ಗಣಪನಿಗೆ 48 ನೇ ವಾರ್ಷಿಕ ಸಂಭ್ರಮ
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ