Big News

ಅಂಕೋಲಾ ಪುರಸಭೆಯಲ್ಲಿ ಕರ್ತವ್ಯ ಲೋಪ, ಅಧಿಕಾರ ದುರುಪಯೋಗಪಡಿಸಿದ ಅಧ್ಯಕ್ಷರು ಮತ್ತು ಅದಕ್ಕೆ ಸಹಕರಿಸಿದ ಸದಸ್ಯರ ಮೇಲೆ ಲೋಕಾಯುಕ್ತರಲ್ಲಿ ದೂರು ಸಲ್ಲಿಸಲಾಗುವುದು: ಮಂಜುನಾಥ ನಾಯ್ಕ

Share

ಅಂಕೋಲಾ: ಪುರಸಭೆಯಲ್ಲಿ ದಿನಾಂಕ 22 -4 – 2025 ರ ನಂತರದಲ್ಲಿ ಅಂದರೆ ಸುಮಾರು 6 ತಿಂಗಳು ಸಮೀಪಿಸುತ್ತಿದ್ದರು ಯಾವುದೇ ಸಭೆ ನಡೆದಿದ್ದು ಇರುವುದಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಈ ಬಗ್ಗೆ ವಿಚಾರಿಸಲಾಗಿ ಇವರು ಕೆಲವು ಇತರ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ ಅಭಿವೃದ್ಧಿ ಕೆಲಸಗಳನ್ನು ಕುಂಠಿತವಾಗುವಂತೆ ಮಾಡಿದ್ದಾರೆ.

ದಲಿತ ಮಹಿಳಾ ಮುಖ್ಯಾಧಿಕಾರಿಗಳು ಮತ್ತು ಮಹಿಳಾ ಇಂಜಿನಿಯರ್ ಮೇಲೆ ಆಪಾದನೆಗಳ ಮೇಲೆ ಆಪಾದನೆಗಳನ್ನು ಹೋರಿಸುತ್ತಾ ದೂರುಗಳನ್ನು ನೀಡುತ್ತಾ ಅನಗತ್ಯ ಕಾಲ ಹರಣ ಮಾಡಿದ್ದಾರೆ. ಅಧಿಕಾರಿಗಳು ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳೊಂದಿಗೆ ದೂರು ನೀಡಿ ಅದನ್ನು ಸಾಬೀತುಪಡಿಸಿ ಅವರನ್ನು ಶಿಕ್ಷೆಗೊಳಪಡಿಸಬೇಕಾಗಿದ್ದನ್ನು ಬಿಟ್ಟು, ಅನಗತ್ಯ ಕಿರುಕುಳ ತೊಂದರೆಗಳನ್ನು ನೀಡಿ, ಅಧ್ಯಕ್ಷ ಪದವಿಯ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದಾರೆ.

ಸೂಕ್ತ‌ ತನಿಖೆ ನಡೆಸಿ

ಸದ್ರಿ ಅಧಿಕಾರಿಗಳು ಅಮಾನತ್ತಿನ ಆದೇಶಕ್ಕೆ ಮಾನ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು, ಆದರೆ ಇವರು ಪತ್ರಿಕಾ ಪ್ರಕಟಣೆ ನೀಡಿ, ದಲಿತ ಮಹಿಳಾ ಮುಖ್ಯಾಧಿಕಾರಿಗಳಿಗೆ ಮತ್ತು ಮಹಿಳಾ ಇಂಜಿನಿಯರ್ ಅವರಿಗೆ ಕಿರುಕುಳ ನೀಡುತ್ತಿರುವುದು ಕಂಡುಬರುತ್ತದೆ. ಆದ್ದರಿಂದ ಈ ಬಗ್ಗೆ ಮಹಿಳಾ ಆಯೋಗ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಮತ್ತು ಕಾಂಗ್ರೆಸ್ ಮುಖಂಡರು ಆದ ಮಂಜುನಾಥ ನಾಯ್ಕ ಆಗ್ರಹಿಸಿದ್ದಾರೆ. ಅಲ್ಲದೆ ಮಹಿಳಾ ಆಯೋಗದ ಅಧ್ಯಕ್ಷರಲ್ಲೂ ಈ ಬಗ್ಗೆ ದೂರು ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಆರು ತಿಂಗಳಿಂದ ಯಾವುದೇ ಸಭೆ ನಡೆದಿಲ್ಲ

ಪುರಸಭೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನೇಕ ಸಮಸ್ಯೆಗಳಿದ್ದು ಆ ಬಗ್ಗೆ ಗಮನಕೊಡದೆ ತಮ್ಮ ವೈಯಕ್ತಿಕ ಹಿತಾಸಕ್ತಿಯ ಮುಖಾಂತರ ಆಡಳಿತ ನಡೆಸುತ್ತಿರುವುದು ಕಂಡು ಬರುತ್ತಿದೆ.
ಸುಮಾರು ಆರು ತಿಂಗಳಿಂದ ಯಾವುದೇ ಸಭೆಯನ್ನು ನಡೆಸದೇ ಎಸ್ಸಿ ಎಸ್ಟಿ ಅನುದಾನದ ವೈಯಕ್ತಿಕ ಕಾರ್ಯಕ್ರಮ ಹಾಗೂ ಕಾಮಗಾರಿಯನ್ನು ನಿರ್ವಹಿಸಿ ಅನುದಾನವನ್ನು ಬಳಕೆ ಮಾಡಿಕೊಳ್ಳದೆ ವಿಫಲರಾಗಿದ್ದಾರೆ. ಆಶ್ರಯ ಮನೆಗಳಿಗೆ ಕಟ್ಟಡ ಪೂರ್ಣಗೊಂಡರು ಇವರಿಗೆ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳದೆ ಅಂತ ಫಲಾನುಭವಿಗಳಿಗೆ ತೊಂದರೆಯನ್ನುಂಟು ಮಾಡಿದ್ದಾರೆ.


ಪುರಸಭೆಯ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸಗಳ ರಾಶಿ ಇದ್ದು ಅದನ್ನು ತ್ವರಿತವಾಗಿ ವಿಲೇವಾರಿಯಾಗದೆ ಪೂರ್ಣ ನಗರ ಕಸದಿಂದ ಕೂಡಿರುತ್ತದೆ. ಕಸದ ಗಾಡಿಗಳು ಕೆಟ್ಟು ಪುರಸಭೆ ಮುಂದೆ ನಿಂತಿದ್ದು ಅದನ್ನು ಈವರೆಗೂ ರಿಪೇರಿ ಮಾಡದೇ ಸಾರ್ವಜನಿಕ ಕಸ ವಿಲೆವಾರಿಗೆ ಬಳಕೆ ಆಗದ ರೀತಿಯಲ್ಲಿ ಇರುತ್ತದೆ ಇದರ ಬಗ್ಗೆ ಪುರಸಭೆ ಈವರೆಗೂ ರಿಪೇರಿ ಮಾಡಿರುವುದಿಲ್ಲ.

ಅಧ್ಯಕ್ಷರು ನಗರದ ಅಭಿವೃದ್ಧಿಗಾಗಿ ಸರಕಾರದ ಅನುದಾನ ತರುವ ಬದಲು ಇರುವ ಅನುದಾನವನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಮಾಡಿದ್ದಾರೆ.
ಅಂಕೋಲಾ ಪುರ ಸಭೆಯಲ್ಲಿ 3 ಇಂಜಿನಿಯರ್ ಗಳ ಹುದ್ದೆಯಿದ್ದು, ಕೇವಲ ಒಬ್ಬ ಮಹಿಳಾ ಇಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಖಾಲಿ ಇರುವ ಎರಡು ಇಂಜಿನಿಯರ್ ಹುದ್ದೆಗೆ ಭರ್ತಿ ಮಾಡಲು ಪ್ರಯತ್ನ ಪಡುವುದನ್ನು ಬಿಟ್ಟು, ಇರುವ ಒಬ್ಬ ಮಹಿಳಾ ಇಂಜಿನಿಯರ್ ನ್ನುಕಿರುಕುಳ ನೀಡಿ ಅವರ ಕರ್ತವ್ಯಕ್ಕೂ ಅಡ್ಡಪಡಿಸುತ್ತಿದ್ದಾರೆ.

ಎಲ್ಲಾ ದಾಖಲೆಗಳ ಸಂಗ್ರಹ

ಈಗಾಗಲೇ ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ನನ್ನ ಆತ್ಮೀಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ, ನನ್ನ ಆತ್ಮೀಯ ವಕೀಲರೊಂದಿಗೆ ಚರ್ಚಿಸಿ ಅಧ್ಯಕ್ಷರು ಮತ್ತು ಅವರಿಗೆ ಸಹಕರಿಸಿದ ಸದಸ್ಯರ ಮೇಲೆ ಮಾನ್ಯ ಲೋಕಾಯುಕ್ತರಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳಲ್ಲಿ ಮತ್ತು ಮಾನ್ಯ ಸಚಿವರಲ್ಲಿ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಿದ್ದೇನೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಸೂಕ್ತ ನ್ಯಾಯಾಲಯದಲ್ಲಿಯೂ ಸಹ ಪ್ರಕರಣ ದಾಖಲಿಸಿ ನ್ಯಾಯ ಕೇಳಲಿದ್ದೇನೆಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಹೊರತಂದಿರುವ ನಗರಾಡಳಿತದಲ್ಲಿ ಕೌನ್ಸಿಲ್ ಗಳ ಕರ್ತವ್ಯಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಲ್ಲಿ ಅಧ್ಯಕ್ಷರು ಸದಸ್ಯರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಕಾನೂನಿನ ಬಗ್ಗೆ ಜ್ಞಾನ ಆಡಳಿತ ಕುಶಲತೆ ಮತ್ತು ಕರ್ತವ್ಯ ಮನೋಭಾವಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸುತ್ತದೆ.

ಅಲ್ಲದೆ ಕರ್ತವ್ಯ ನಿಷ್ಠೆ ಮತ್ತು ಕರ್ತವ್ಯ ಭ್ರಷ್ಟತೆಗಳ ಬಗ್ಗೆ ಸ್ಪಷ್ಟ ಅರಿವು ಅಗತ್ಯ, ಸಂವಿಧಾನ ಮತ್ತು ಕಾನೂನುಗಳು ನೀಡಿದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸುವುದು ಕರ್ತವ್ಯನಿಷ್ಠತೆ, ಅದೇ ರೀತಿ ಅಲಕ್ಷ ಮತ್ತು ಅಹಂಕಾರದಿಂದ ಕರ್ತವ್ಯ ನಿರ್ವಹಿಸದಿರುವುದು ಹಾಗೂ ಸಂವಿಧಾನ ಮತ್ತು ಕಾನೂನುಗಳು ನಿಷೇಧಿಸಿದ ಕಾರ್ಯಗಳನ್ನು ಮಾಡುವುದು ಕರ್ತವ್ಯ ಭ್ರಷ್ಟತೆ ಎಂದು ತಿಳಿಸುತ್ತದೆ.

ಅಧ್ಯಕ್ಷರು ಮತ್ತು ಪುರಸಭೆಯ ಕೆಲವು ಸದಸ್ಯರು ಈ ಎಲ್ಲಾ ನಿಯಮವನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಕರ್ತವ್ಯ ಲೋಕ ಮಾಡಿದ್ದು ಇರುತ್ತದೆ.
ಅಲ್ಲದೇ ಮಾರ್ಗಸೂಚಿಯಲ್ಲಿ ಅಧ್ಯಕ್ಷರು ಸದಸ್ಯರು ತನ್ನ ಸ್ಥಾನದ ಕರ್ತವ್ಯಗಳನ್ನು ಪರಿಪೂರ್ಣತೆಯಿಂದ ಪರಿಣಾಮಕಾರಿಯಾಗಿ ನಿರ್ವಹಿಸಲು ಸತ್ಯಶೋಧನೆ ಮತ್ತು ನ್ಯಾಯ ಪರಿಪಾಲನೆ ಎಂಬ ಎರಡು ಮೂಲ ಉದ್ದೇಶಗಳನ್ನು ಸದಾ ಕಾಲ ಗಮನದಲ್ಲಿಡಬೇಕು.

ಯಾವುದೇ ವಿಷಯದ ಬಗ್ಗೆ ಚರ್ಚಿಸುವಾಗ ಮತ್ತು ತೀರ್ಮಾನ ಕೈಗೊಳ್ಳುವಾಗ ಆ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಸತ್ಯಾಂಶಗಳನ್ನು ಮತ್ತು ವಾಸ್ತವಂಶಗಳನ್ನು ಸಂಗ್ರಹಿಸಿ ಕಾನೂನಿನ ಉಲ್ಲೇಖಗಳನ್ನು ಪರಿಶೀಲಿಸಿ ರಾಗ ದ್ವೇಷವಿಲ್ಲದೆ ಭಯ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕ ಎಂದು ತಿಳಿಸುತ್ತದೆ. ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಈ ಎಲ್ಲವನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗ ಮತ್ತು ಕರ್ತವ್ಯ ಲೋಪ ಮಾಡಿದ್ದು ಇರುತ್ತದೆ ಎಂದು ಮಂಜುನಾಥ ನಾಯ್ಕ ತಿಳಿಸಿದ್ದಾರೆ.

1976ರ ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಪ್ರಕರಣ 496 ರಲ್ಲಿ ಮತ್ತು 1964 ಕರ್ನಾಟಕ ಪೌರಸಭೆಗಳ ಅಧಿನಿಯಮದ ಪ್ರಕರಣ 79 ರಲ್ಲಿ ಪ್ರತಿಯೊಬ್ಬ ಸದಸ್ಯರು ಭಾರತ ದಂಡ ಸಹಿತ 21ನೇ ಪ್ರಕರಣದ ಅರ್ಥ ವ್ಯಾಪ್ತಿಯಲ್ಲಿ ಲೋಕ ನೌಕರನೆಂಬುದಾಗಿ ಭಾವಿಸತಕ್ಕದ್ದು ಎಂದು ನಮೂದಿಸಲಾಗಿದೆ.

ಆದ್ದರಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕರ್ತವ್ಯ ಲೋಕ ಅಧಿಕಾರ ದುರುಪಯೋಗ ಪಡಿಸಿದ ಎಲ್ಲರೂ ಮೇಲು ಈ ಮೇಲೆ ತಿಳಿಸಿದಂತೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಪೌರಾಡಳಿತ ಸಚಿವರಲ್ಲಿ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಿದ್ದೇನೆ ಎಂದು ಮಂಜುನಾಥ ನಾಯ್ಕ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ,ಸುಧೀರ್ಘವಾಗಿ ಬರೆದು,ಅಧ್ಯಕ್ಷರ, ಹಾಗೂ ಇತರರ ಆಡಳಿತ ವೈಖರಿ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರ ವಿರುದ್ಧ ಯಾರಿಗೆಲ್ಲ ದೂರು ಸಲ್ಲಿಸುತ್ತೇವೆ ಎಂದು ತಿಳಿಸಿ, ಕೆಲ ಗಂಭೀರ ಆರೋಪ ಮಾಡಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶೀ ಮೇಳ: ಅಕ್ಟೋಬರ್ 7, 8,9 ರಂದು ಆಯೋಜನೆ

ಅಂಕೋಲಾ : ರಾಘವೇಂದ್ರ ಇವೆಂಟ್ಸ್ ಅಂಕೋಲಾ ಹಾಗೂ ಬೆನಕ ಇವೆಂಟ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ 7, 8 ಹಾಗೂ 9 ರಂದು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಬೃಹತ್...

ಸೇವಾಪರ್ವ ವಿಕಸಿತ ಭಾರತ ವಿಷಯಾಧಾರಿತ ಪೇಟಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದರ್ಶನ ನಾಯ್ಕ

ಭಟ್ಕಳ: ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವಿಕ್ಷಿತ್ ಭಾರತ್ ಕೇ ರಂಗ್ ಕಲಾ ಸಂಗ್ ಅಡಿಬರಹದಡಿ ಹಮ್ಮಿಕೊಂಡ ಸೇವಾ ಪರ್ವ ವಿಕಸಿತ ಭಾರತದ ಕಲ್ಪನೆ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ವರ್ಷಾಂತ್ಯಕ್ಕೆ 12 ಲಕ್ಷ ಲಾಭ ಗಳಿಸಿದ ಸೀತಾರಾಮ ಸಹಕಾರಿ ಸಂಘ

ಭಟ್ಕಳ: ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯು 12 ಲಕ್ಷ ಲಾಭ ಗಳಿಸಿದೆ ಎಂದು ಶ್ರೀ ಸೀತಾರಾಮ ಸೌಹಾರ್ಧ...

ಬೈಕಿಗೆ ಡಿಕ್ಕಿ ಹೊಡದ ಲಾರಿ: ಸ್ಥಳದಲ್ಲಿಯೇ ಬೈಕ್ ಸವಾರ ದುರ್ಮರಣ: ಹಿಟ್ & ರನ್ ಕೇಸ್ ದಾಖಲು

ಯಲ್ಲಾಪುರ: ಬೈಕಿಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ...

ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿಟ್ಟಿದ್ದ ಬೈಕ್ ಕಳ್ಳತನ : ಆರೋಪಿ ಬಂಧನ

ಅಂಕೋಲಾ: ಪಟ್ಟಣದಲ್ಲಿ ನಿಲ್ಲಿಸಿಟ್ಟ ಮೋಟಾರ್ ಬೈಕ್ ಕಳ್ಳತನ ಮಾಡಿದ್ದ ಆರೋಪಿತನನ್ನು ಅಂಕೋಲಾ ಪೊಲೀಸರು ವಾಹನ ಸಮೇತ...

ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ಒಟ್ಟೂ 167 ಪ್ರಕರಣಗಳು ರಾಜೀ ಸಂಧಾನದಲ್ಲಿ ಇತ್ಯರ್ಥ

ಅಂಕೋಲಾ: ತಾಲೂಕಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಸೆ 13 ರ ಶನಿವಾರ...

ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಶಿಕ್ಷಕ ದಿನಾಚರಣೆ: ಶಿಕ್ಷಕ ರಾಷ್ಟ್ರ ರಕ್ಷಕ ಕಾರ್ಯಕ್ರಮ

ಕುಮಟಾ: ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ, ಶಿಕ್ಷಕ ಆ ಮಗುವಿಗೆ ಜ್ಞಾನ ನೀಡಿ ಕಣ್ತೆರೆಯಿಸಿ ಒಳ್ಳೆಯ...

ಭೂಮಿತಾಯಿಯ ಹೊಸ್ತಿನ ಹಬ್ಬ : ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಪ್ರತೀಕ

ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಹಾಗೂ ಇತರಡೆಯ ಅಸಂಖ್ಯ ಭಕ್ತರ ಪಾಲಿನ ಶಕ್ತಿ...

ಅಕ್ರಮ ಗೋಸಾಗಾಟ: 7 ಲಕ್ಷ ಮೌಲ್ಯದ ಜಾನುವಾರು ವಶಕ್ಕೆ

ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪದೇ ಪದೇ ಸದ್ದು ಮಾಡುತ್ತಿದ್ದು, ಬೆಳಗಿನ ಜಾವ ಗ್ರಾಮೀಣ...

ಕುಮಟಾ ಪೊಲೀಸ್ ಗಣೇಶೋತ್ಸವ ಸಂಭ್ರಮ: ನೂರಾರು ಭಕ್ತರಿಂದ ಪ್ರಸಾದ ಸ್ವೀಕಾರ

ಕುಮಟಾ: ಪಟ್ಟಣದ ಎಲ್ಲಡೆ ಸಂಭ್ರಮದಿoದ ಗಣೇಶ ಚತುರ್ಥಿಯನ್ನು ಆಚರಿಸಲಾಗಿದ್ದು ಕುಮಟಾ ಪೊಲೀಸ್ ಠಾಣೆಯ ಆರಾಧ್ಯ ದೇವರು...