- ಪ್ರಾಮಾಣಿಕ ಸೇವೆಯ ಪಥದಲ್ಲಿ ವಸಂತ ನಾಯಕ
- ಸಹಕಾರದ ಬೆಳಕಿನಲ್ಲಿ ನಂಬಿಕೆಯ ನಾಯಕ
ಅಂಕೋಲಾ : ಸಹಕಾರಿ ಮತ್ತು ಸಾಮಾಜಿಕ, ಧಾರ್ಮಿಕ ಮತ್ತಿತರ ಕ್ಷೇತ್ರಗಳಲ್ಲಿ ಸದಾ ಮಂಚೂಣಿಯಲ್ಲಿರುವ ನಾಯಕ ಎಂದು ಗುರುತಿಸಿಕೊಂಡಿರುವ, ತಾಲೂಕಿನ ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಸಂತ ನಾಯಕ ಜಮಗೋಡ ಅವರು ಜಿಲ್ಲೆಯ ಪ್ರತಿಷ್ಠಿತ ಮದ್ಯವರ್ತಿ ಬ್ಯಾಂಕ್ ಮಿಸಿರುವ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಅಭಿಮಾನಿಗಳ ಮತ್ತು ಪ್ರಜ್ಞಾವಂತ ಸಹಕಾರಿಗಳ ಒತ್ತಾಯದ ಮೇರೆಗೆ ಸ್ಪರ್ಧೆ
ಕಳೆದ ಬಾರಿಯೇ ವಸಂತ ನಾಯಕರಂಥ ವ್ಯಕ್ತಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಬೇಕಿತ್ತು ಎನ್ನುವ ಅಭಿಪ್ರಾಯ ಹಲವರಲ್ಲಿತ್ತಾದರೂ, ಅಂದಿನ ಚುನಾವಣೆಯ ಕೊನೆ ಸಂದರ್ಭದಲ್ಲಿ , ತೆರೆಯ ಹಿಂದೆ ಕೆಲವರು ನಡೆಸಿದ ಕೆಲ ಅನಿರೀಕ್ಷಿತ ಬೆಳವಣಿಗೆ ವಸಂತ ನಾಯಕರ ಗೆಲುವಿನ ಗುರಿಗೆ ತೊಡಕಾಗಿ, ಕೆಲವೇ ಮತಗಳ ಅಂತರದಿಂದ ಪರಾಭವಗೊಳ್ಳುವಂತಾಗಿತ್ತು ಎಂಬ ಅಭಿಪ್ರಾಯ ಕೇಳಿಬಂದಿದ್ದು, ಈ ಭಾರಿಯಾದರೂ ಅವರನ್ನು ಗೆಲ್ಲಿಸಲೇಬೇಕೆಂಬ ಪಣತೊಟ್ಟಂತಿದೆ ಅವರ ಅಭಿಮಾನಿಗಳು ಮತ್ತು ಸಹಕಾರಿ ಕ್ಷೇತ್ರದ ಪ್ರಜ್ಞಾವಂತ ಮತದಾರ ಬಂಧುಗಳು, ಹೀಗಾಗಿಯೇ ವಸಂತ ನಾಯಕ ಅವರನ್ನು ಈ ವರ್ಷವೂ ಸ್ಪರ್ಧಿಸುವಂತೆ ಒತ್ತಡ ಹೇರಿದ ಅಭಿಮಾನಿಗಳು ಹಾಗೂ ಸಹಕಾರಿ ಕ್ಷೇತ್ರದ ಸಮಸ್ಯೆಯನ್ನು ಅರಿತ ಜಿಲ್ಲೆಯ ಹಲವು ಅರ್ಬನ ಬ್ಯಾಂಕ್‌ಗಳು ಮತ್ತು ಸೌಹಾರ್ದ ಸಹಕಾರಿಗಳು ವಿನಂತಿ ಕೋರಿಕೆಗೆ ವಸಂತ ನಾಯಕ ಅವರು ಅವರಲ್ಲರ ಪ್ರೀತಿಗೆ ತಲೆಬಾಗಿ ಕೊನೆಗೊ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಸಹಕಾರಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ನಂಬಿಕೆಯ ನಾಯಕ
ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳ, ಹಳ್ಳಿ ಹಳ್ಳಿ ಸೇರಿದಂತೆ ಇತರೆಡೆ ಮತಯಾಚನೆ ಮಾಡಿ, ಅವರೆಲ್ಲರ ಅಶೀರ್ವಾದ ಬಯಸಿ ಮುನ್ನಡೆಯುತ್ತಿದ್ದಾರೆ. ಸಹಕಾರಿ ಕ್ಷೇತ್ರವೇ ಇರಲಿ , ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ ಮತ್ತಿತರ ಕ್ಷೇತ್ರಗಳ ಬೆಳವಣಿಗೆಗೆ ಪ್ರೋತ್ಸಾಹಕರಾಗಿರುವ ವಸಂತ ನಾಯಕ ಇವರ ಸೇವೆ ಮತ್ತು ಸಹಾಯ ಸಹಕಾರದ ಮನೋಭಾವನೆಗೆಗಳು ಅವರನ್ನು ಜಿಲ್ಲೆಯ ಶ್ರೇಷ್ಠ ಸಹಕಾರಿಗಳ ಸಾಲಿನಲ್ಲಿ ಗುರುತಿಸುವಂತಾಗಿದೆ.
ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೃಷಿಕರಿಗೆ ಹಾಗೂ ಇತರರೆಲ್ಲರಿಗೂ ಬ್ಯಾಂಕಿಂಗ್ ಆಶಯಕ್ಕೆ ಅನುಗುಣವಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವ ಇಚ್ಚೆ ಹೊಂದಿರುವ ವಸಂತ ನಾಯಕ ಗೆದ್ದು ಬರಲಿ ಎನ್ನುವುದು ಅವರ ಆಪ್ತರ ಹಿತೈಷಿಗಳ ಆಶಯವಾಗಿದೆ.
ಶಿರಸಿಯಲ್ಲಿ ಶಿರಸಿಯಲ್ಲಿ ವಸಂತ ನಾಯಕ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಶೆಟ್ಟಿ ಕಾರವಾರ, ರಾಜೇಂದ್ರ ರಾಣೆ ಕಾರವಾರ, ಜಿ.ಪಿ.ನಾಯಕ, ರಾಮಕೃಷ್ಣ ನಾಯಕ, ಚಂದ್ರಹಾಸ ನಾಯಕ, ಪ್ರಕಾಶ ನಾಯಕ, ರಾಮಚಂದ್ರ ನಾಯಕ, ವೆಂಕಟೇಶ, ಎಂ.ಪಿ.ನಾಯಕ, ಪಿ.ಎಸ್.ನಾಯಕ, ವಿನಾಯಕ ನಾಯಕ ಕುಮಟಾ, ರಾಜೇಂದ್ರ ನಾಡರ, ಅನೂಪ, ವಿಶಾಲ, ಗಣೇಶ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಸಹಕಾರದಿಂದ ಸಮೃದ್ಧ ಜಿಲ್ಲೆಯ ಕನಸಿನತ್ತ ವಸಂತ ನಾಯಕ
ನಾನು ನಮ್ಮ ಜಿಲ್ಲೆಯ ಹಲವು ಸಹಕಾರಿಗಳ ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈಗಾಗಲೇ ಎಲ್ಲಾ ತಾಲೂಕಿನಲ್ಲಿ ಮತಯಾಚನೆ ಮಾಡಿದ್ದು, ಅವರೆಲ್ಲರ ಪ್ರೀತಿ ವಿಶ್ವಾಸದ ಬೆಂಬಲ ದೊರೆಯುತ್ತಿದೆ. ಕಳೆದ ಚುನಾವಣೆಯಲ್ಲಿ ನನಗೆ ಒಂದರ್ಭದಲ್ಲಿ ಆದ ಅನ್ಯಾಯಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದು, ಈ ಬಾರಿ ಸಹಕರಿಸುವುದಾಗಿ ತಿಳಿಸಿರುವುದರಿಂದ ನನಗೆ ಗೆಲುವಿನ ಬಗ್ಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ. ಸರ್ವರ ಸಹಕಾರದಲ್ಲಿ ನಾನು ಗೆದ್ದು ಬಂದು ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಪ್ರಭಲಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.

ಒಟ್ಟಿನಲ್ಲಿ ಈ ಬಾರಿಯ ಕೆಡಿಸಿಸಿ ಬ್ಯಾಂಕಿನ ತುರುಸಿನ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿಯಾಗಿರುವ ವಸಂತ ನಾಯಕ, ಗೆದ್ದು ಹೊಸ ಬೆಳಕು ಮೂಡಿಸಲಿ ಎನ್ನುವುದು ದೀಪಾವಳಿಯ ಶುಭ ಸಂದರ್ಭದಲ್ಲಿ ಹಲವರ ಆಶಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ