ಅಂಕೋಲಾ: ತಾಲೂಕಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಸೆ 13 ರ ಶನಿವಾರ ಯಶಸ್ವಿಯಾಗಿ ನಡೆಯಿತು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ನಡೆಸಲಾಗಿತ್ತು.
8 ಕೋಟಿ 7 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣ ವಸೂಲಿ
ಸೀನಿಯರ ಸಿವಿಲ್ ವಿಭಾಗದಲ್ಲಿ 915, ಸಿವಿಲ್ ವಿಭಾಗದಲ್ಲಿ 1322, ಅಡಿಶನಲ್ ಸಿವಿಲ್ ವಿಭಾಗದಲ್ಲಿ 1366 ಹೀಗೆ ಒಟ್ಟೂ 3603 ಪ್ರಕರಣಗಳು ಬಾಕಿ ಇದ್ದವು. ಅವುಗಳಲ್ಲಿ ಸೀನಿಯರ ಸಿವಿಲ್ ವಿಭಾಗದಿಂದ ಕೈಗೆತ್ತಿಕೊಳ್ಳಲಾದ 43 ಪ್ರಕರಣಗಳಲ್ಲಿ 16 , ಸಿವಿಲ್ ವಿಭಾಗದ 109 ರಲ್ಲಿ 71, ಮತ್ತು ಅಡಿಶನಲ್ ಸಿವಿಲ್ ವಿಭಾಗದ 126ರಲ್ಲಿ 80 ಪ್ರಕರಣಗಳನ್ನು ಇಂದು ಇತ್ಯರ್ಥಪಡಿಸಲಾಯಿತು.
ಲೋಕ ಅದಾಲತನಲ್ಲಿ ಇಂದು ಒಟ್ಟೂ 167 ಪ್ರಕರಣಗಳಲ್ಲಿ ರೂ 80752497 ( 8ಕೋಟಿ 7 ಲಕ್ಷದ 52 ಸಾವಿರದ 497 ) ರೂಪಾಯಿಗಳು ಮಾತ್ರ ) ಒಟ್ಟೂ ಮೊತ್ತದೊಂದಿಗೆ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಇದೇ ವೇಳೆ ರೂ 13,94,800 ರೂ ಒಟ್ಟೂ ಮೊತ್ತದ 811 ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಕಾನೂನು ಸೇವಾ ಸಮಿತಿಯ ಹಿರಿ – ಕಿರಿಯ ಸದಸ್ಯರು, ವಕೀಲರು,ನ್ಯಾಯಾಲಯದ ಸಿಬ್ಬಂದಿಗಳು ಸಹಕರಿಸಿದರು.
ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಪ್ರಿಯಾ ಜೋಗಳೇಕರ, ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಅರ್ಪಿತಾ ಬೆಲ್ಲದ ನ್ಯಾಯಾಲಯದ ಕಲಾಪಗಳನ್ನು ನಿರ್ವಹಿಸಿದರು. ಲೋಕ ಅದಾಲತ್ ಕಲಾಪಗಳಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಪರವಾಗಿ ವಕೀಲರಾದ ಮೋನಿಷ್ ಅನಂದಗಿರಿ,ಮತ್ತು ರಾಮಚಂದ್ರ ಟಿ ಗೌಡ ಸಂಧಾನಕಾರರಾಗಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ