ಅಂಕೋಲಾ: ವ್ಯಕ್ತಿಯೋರ್ವ ಕಾಣೆಯಾಗಿ ಸುಮಾರು ಹತ್ತು ತಿಂಗಳುಗಳ ನಂತರ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನ ಹಿಲ್ಲೂರು ತಿಂಗಳೆಬೈಲ್ ನಿವಾಸಿಯಾಗಿದ್ದ ನವೀನ ತೋಕು ಹರಿಕಂತ್ರ ಕಾಣೆಯಾದ ವ್ಯಕ್ತಿ.
ಮೀನುಗಾರಿಕೆ ಕೆಲಸಕ್ಕೆ ಹೋದವನು ಬಂದಿಲ್ಲ
ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಈತ ಕಳೆದ 2024ರ ನವೆಂಬರ 5 ರಂದು ಬೆಳಿಗ್ಗೆ ತನ್ನ ಮನೆಯಿಂದ ಉಡುಪಿ ಜಿಲ್ಲೆಯ ಮಲ್ಪೆಗೆ ಮೀನುಗಾರಿಕೆ ಕೆಲಸಕ್ಕೆಂದು ಹೊರಟಿದ್ದು ಇದುವರೆಗೆ ಮನೆಗೆ ಮರಳದೆ ಮನೆಯವರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದು, ಇಷ್ಟು ದಿನ ಎಲ್ಲಡೆ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿಲ್ಲ ಎಂದು ತಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸಲು ಮನವಿ
ಕಾಣೆಯಾಗಿರುವ ವ್ಯಕ್ತಿ ಆರು ಅಡಿ ಎತ್ತರದವನಾಗಿದ್ದು ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಹೊಂದಿದ್ದು ಕನ್ನಡ, ಹಿಂದಿ, ಕೊಂಕಣಿ ಭಾಷೆ ಬಲ್ಲವನಾಗಿದ್ದು , ಆತನ ಕುರಿತು ಮಾಹಿತಿ ಸಿಕ್ಕರೆ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ