Focus News

ಆಧುನಿಕ ಜಗತ್ತನ್ನಾಳಲಿರುವ AI ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

Share

ಅಂಕೋಲಾ : ಕೃತಕ ಬುದ್ಧಿಮತ್ತೆಯು ( AI ತಂತ್ರಜ್ಞಾನ ) ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ ಆವಿಷ್ಕಾರವಾಗಿದೆ. ಎ ಐ ನ ಉಪಕ್ರಮಗಳೇ ನಮ್ಮನ್ನು ಮುಂದೆ ಆಳಲಿವೆ ಎಂದು ಕೃತಕ ಬುದ್ಧಿಮತ್ತೆಯ ಮಾಸ್ಟರ್ ತರಬೇತುದಾರ್ತಿ ಸುನೀತಾ ಪಟಗಾರ ಹೇಳಿದರು.

ಪಟ್ಟಣದ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನರಿಗೆ ಹೊಸ ಕೌಶಲ್ಯ ಉನ್ನತಗೊಳಿಸಲು ಮತ್ತು ವೃತ್ತಿ ಆಯ್ಕೆಗಳಿಗೆ ಸಹಾಯ ಮಾಡಲು ಹಾಗೂ ಉದ್ಯೋಗ ಸಂದರ್ಶನಗಳಿಗೆ ಸಿದ್ಧತೆಗೊಳಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ತರಬೇತಿಯಲ್ಲಿ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶ ಮತ್ತು ಜನರೇಟಿವ್ ಎಐ ಪರಿಕರಗಳು, ಎಐ ಪ್ರಾಂಪ್ಟ್ ತಂತ್ರಗಳ ಕಲಿಕೆ ಮತ್ತು ವೃತ್ತಿ ಜೀವನದ ಅನ್ವೇಷಣೆಗಳಲ್ಲಿ ಜನರೇಟಿವ್ ಎಐ ಅನ್ನು ಹೇಗೆ ಬಳಸಬೇಕು ಎಂಬುದನ್ನು ಆ್ಯಪ್‌ಗಳಾದ ಚಾಟ್ ಜಿಪಿಟಿ, ಜೆಮಿನಿ ಮೈಕ್ರೋಸಾಪ್ಟ್ ಸುನೋ ಆ್ಯಪ್‌ಗಳ ಬಳಕೆ ಮಾಡಿಕೊಂಡು ೪ ಅಧಿವೇಶನಗಳಲ್ಲಿ ಹಂತ ಹಂತವಾಗಿ ತರಬೇತಿಗೊಳಿಸಲಾಗುತ್ತದೆ.
ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ಮಾತನಾಡಿ, ಉದ್ಯೋಗ ಸಿಗಲು ಕೌಶಲ್ಯವನ್ನು ಹೊಂದಲು ಪೂರಕವಾಗಿ ನಮ್ಮ ಕೆಎಲ್‌ಇ ಸಂಸ್ಥೆಯು ವಿವಿಧ ತರಬೇತಿಗಳನ್ನು ನಡೆಸುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಡೆಲ್ ಕಂಪನಿ ಹಾಗೂ ಶಿಕ್ಷಣ ಪೌಂಡೇಶನ್ ಹಾಗೂ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ತರಬೇತಿಯನ್ನು ಬಿ.ಎ. ಮತ್ತು ಬಿ.ಕಾಂ. ಅಂತಿಮ ವರ್ಷದ 40 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ, ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್...

ಚುನಾವಣೆ ನಂತರ ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ : ಅಮದಳ್ಳಿ ಗ್ರಾಮ ದೇವರ ಗ್ರಾಮ ಎಂದ ಶಾಸಕ ಸೈಲ್

ಕಾರವಾರ: ಗ್ರಾಮೀಣ ಆಡಳಿತ ವ್ಯವಸ್ಥೆಗೆ ಬಲ ತುಂಬುವ ಹೆಜ್ಜೆಯಾಗಿ ಅಮದಳ್ಳಿ ಗ್ರಾಮ ಪಂಚಾಯತ್‌ನ ನೂತನ ಸಭಾಭವನವನ್ನು...

ಅಂಕೋಲಾದಲ್ಲಿ ಇಂದು ಪಂಚದೇವರ ದೊಡ್ಡ ಕಾರ್ತಿಕೋತ್ಸವ : ಶಿರ ಕುಳಿ ಕಾನದೇವಿ ದೇವಸ್ಥಾನದ ಹತ್ತಿರ ವನಭೋಜನಕ್ಕೆ ನಡೆಯುತ್ತಿದೆ ಸಿದ್ದತೆ

ಅಂಕೋಲಾ: ತಾಲೂಕಿನ ಸಂಸ್ಕೃತಿಯ ಆರಾಧನಾ ಪದ್ಧತಿಯಾಗಿ ಹಲವು ತಲೆಮಾರುಗಳಿಂದ ಆಚರಿಸಲ್ಪಡುತ್ತಬಂದಿರುವ ಪಂಚ ದೇವರುಗಳ ದೊಡ್ಡ ಕಾರ್ತಿಕೋತ್ಸವ...

ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಹೋರಾಟ ನಿರಂತರ : ಬಹಿರಂಗ ಸಭೆ ತಾತ್ಕಾಲಿಕವಾಗಿ ಮುಂದೂಡಿಕೆ : ಸಂಘಟಕ ಪ್ರಮುಖರು ಪ್ರಕಟಣೆಯಲ್ಲಿ ಹೇಳಿದ್ದೇನು ?

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ, ಸಾಮೂಹಿಕ ನಾಯಕತ್ವದಡಿ, ಅಂಕೋಲಾ...

ಚಿಪ್ಪಿ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ...

ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ ವಿಶೇಷ ಅಭಿಯಾನ

ಅಂಕೋಲಾ : ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಗೆ...

ಅಂಕೋಲಾ ಕಲ್ಲೇಶ್ವರದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಅಂಕೋಲಾ : ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ಸಂಗಮ...

ಹೊನ್ನಾವರದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೂರ್ತಿಯ ವಿಸರ್ಜನೆ: ಅದ್ಧೂರಿ ಮೆರವಣಿಗೆ

ಹೊನ್ನಾವರ: ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚವತಿಯ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ವಿಜೃಂಭಣೆಯಿoದ ಆಚರಿಸಿ 7...