ಭಟ್ಕಳ: ಹೆದ್ದಾರಿ ಪ್ರಾಧಿಕಾರ ಮುರಿನಕಟ್ಟೆಯನ್ನು ಮೂಲ ಜಾಗದಲ್ಲಿಯೇ ಕಟ್ಟಲು ತಿರ್ಮಾನಿಸಿ ಈ ಕುರಿತು ನೀಲನಕ್ಷೇಯನ್ನು ತಯಾರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಈ ವಿಚಾರದ ಕುರಿತಂತೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಸಮಕ್ಷಮದಲ್ಲಿ ಸಭೆ ನಡೆಸಿ ತಿರ್ಮಾನ ಕೈಗೊಂಡಿದ್ದು ಕಾನೂನಾತ್ಮಕವಾಗಿ ಹಾಗೂ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದoತೆ ಹೊಸ ಕಟ್ಟೆ ನಿರ್ಮಾಣವಾಗುತ್ತದೆ.
ಹೊಸಕಟ್ಟೆ ಹೆದ್ದಾರಿಯ ಮಧ್ಯ ಭಾಗದಲ್ಲಿ ಸ್ಥಾಪಿತವಾಗುತ್ತಿದ್ದು ಈ ಕಟ್ಟೆ 7 ಪುಟ ಅಗಲ ಹಾಗೂ ಅವಶ್ಯಕತೆಗೆ ತಕ್ಕಂತೆ ಉದ್ದವನ್ನು ಹೊಂದಿರುತ್ತದೆ. ಎರಡು ಬದಿಯಲ್ಲಿ ಇಲೆಕ್ಟಿçಕ್ ಪೋಲ್ ಗಳನ್ನು ಅಳವಡಿಸಿ ಲೈಟ್ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುವ ಎಲ್ಲಾ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು. ಪಕ್ಕದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಬೇ ನಿರ್ಮಾಣ ಮಾಡಲಾಗುತ್ತದೆ ಎಂದರು. ಕಟ್ಟೆ ನಿರ್ಮಾಣ ಅತಿ ಶಿಘ್ರದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಕ್ರೀಯೆಗಳು ಪ್ರಾರಂಭವಾಗಿದೆ. ಮಳೆಗಾಲಕ್ಕೂ ಪೂರ್ವದಲ್ಲಿ ರಸ್ತೆ ಕಾಮಗಾರಿಯೊಂದಿಗೆ ಕಟ್ಟೆ ನಿರ್ಮಾಣ ಕಾರ್ಯಗಳು ಮುಗಿಸುವುದಾಗಿ ಹೇಳಿರು.
ಈ ಸಂದರ್ಭದಲ್ಲಿ ತಾಲೂಕಾ ಮಂಡಲದ ಅಧ್ಯಕ್ಷ ,, ಕೇದಾರ ಕೊಲ್ಲೆ, ಗೋವಿಂದ ನಾಯ್ಕ, ಶಿವಾನಿ ಶಾಂತರಾಮ, ಸುಬ್ರಾಯ ದೇವಾಡಿಗ, ಶ್ರೀನಿವಾಸ ನಾಯ್ಕ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್ ಈಶ್ವರ ನಾಯ್ಕ, ಭಟ್ಕಳ













