ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77 ವರ್ಷ) ಅವರು ಶುಕ್ರವಾರ ನಿಧನರಾದರು. ಮೃತರ ಪುತ್ರಿ ಚೇತನಾ ನಾಯ್ಕ ಮತ್ತು ಕುಟುಂಬದವರು ನೀಡಿದ ಮಾಹಿತಿ ಮೇರೆಗೆ, ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ತಂಡವು ಕೂಡಲೇ ಮೃತರ ನಿವಾಸಕ್ಕೆ ಭೇಟಿ ನೀಡಿತು.
ಆಸ್ಪತ್ರೆಯ ನೇತ್ರತಜ್ಞ ಡಾ. ರಾಜಶೇಖರ ಅವರು ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ನೇತ್ರಗಳನ್ನು ತೆಗೆದು ಸಂರಕ್ಷಿಸಿದರು. ಈ ಕಾರ್ಯದಲ್ಲಿ ಸಿಸ್ಟರ್ ಜ್ಯೋತಿ ಮತ್ತು ಸಹಾಯಕ ಶಂಕರ ಅರವಂದಕರ ಸಹಕರಿಸಿದರು.
ಸಂರಕ್ಷಿಸಿದ ಕಣ್ಣುಗಳನ್ನು ಟ್ರಸ್ಟ್ ಪರವಾಗಿ ಪಡೆದ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ದಾನಿಯ ಕುಟುಂಬದ ಮಾನವೀಯ ಸೇವಾಭಾವನೆಗೆ ಅಭಿನಂದನೆ ಸಲ್ಲಿಸಿ, ಈ ಅಭಿನಂದನೀಯ ಕಾರ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.ದಾನಿಯ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಿ, ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು. ಈ ಸಂದರ್ಭದಲ್ಲಿ ಪುತ್ರಿ ಚೇತನಾ ನಾಯ್ಕ, ಅಳಿಯ ದಯಾನಂದ ನಾಯ್ಕ, ಸಹೋದರ ವಸಂತ ನಾಯ್ಕ ಹಾಗೂ ಕುಟುಂಬದ ಹಿತೈಷಿಗಳು ಪಾಲ್ಗೊಂಡಿದ್ದರು. ಆಸ್ಪತ್ರೆಯ ದೂರವಾಣಿ ಸಂಖ್ಯೆ : 08386 224480
ವಿಸ್ಮಯ ನ್ಯೂಸ್, ಕುಮಟಾ