ಅಂಕೋಲಾ: ತಾಲೂಕಿನ ಅಗ್ರಗೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿಗೋಣ ಬೈಲಕೇರಿಯಲ್ಲಿ ಯುವತಿಯೋರ್ವಳು ಮನೆಯಿಂದ ಕಾಣೆಯಾದ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಕಾಣೆಯಾದವರು ಚಂದ್ರಕಲಾ ನೀಲಕಂಠ ಗೌಡ (20) ಎಂದು ತಿಳಿದು ಬಂದಿದೆ.
ಘಟನೆ ಹೇಗೆ ನಡೆದಿದೆ?
ಸೆಪ್ಟೆಂಬರ್ 1ರ ರಾತ್ರಿ ಸುಮಾರು 8 ಗಂಟೆ ವೇಳೆಗೆ, ಚಂದ್ರಕಲಾ ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದಳು. ಆದರೆ ರಾತ್ರಿ ತಡವಾದರೂ ಮನೆಗೆ ಮರಳದೇ, ಕುಟುಂಬದವರು ಹುಡುಕಿದರೂ ಯಾವುದೇ ಸುಳಿವು ಸಿಗದೇ ಹೋದ ನಂತರ, ಆಕೆಯ ತಂದೆ ನೀಲಕಂಠ ಗೋಯ್ದು ಗೌಡ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ವಿವರ
- ಎತ್ತರ: ಸುಮಾರು ಐದು ಅಡಿ
- ಮೈ ಬಣ್ಣ: ಎಣ್ಣೆಗೆಂಪು
- ಮೈಕಟ್ಟು: ಸಾಧಾರಣ
- ಮುಖ: ಗೋಲು ಮುಖ
- ಭಾಷೆ: ಕನ್ನಡ ಬಲ್ಲವಳು
ಪೊಲೀಸರ ತನಿಖೆ ಆರಂಭ
ದೂರು ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಈಕೆಯ ಕುರಿತು ಮಾಹಿತಿ ಇದ್ದರೆ ಅಥವಾ ಮಾಹಿತಿ ಸಿಕ್ಕರೆ ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ