ಚಂದ್ರಗ್ರಹಣ 2025 ಸಮಯ ಮತ್ತು ಸೂತಕ ಕಾಲ ವಿವರ
Important

ಐತಿಹಾಸಿಕ ಚಂದ್ರಗ್ರಹಣ: ಆರಂಭ-ಮುಕ್ತಾಯ: ಚಂದ್ರಗ್ರಹಣ ಕುರಿತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ

Share

ವಿಸ್ಮಯ ಟಿ.ವಿ ನ್ಯೂಸ್ ಡೆಸ್ಕ್: ಭಾರತ ಸೇರಿದಂತೆ ವಿಶ್ವದಾದ್ಯಂತ 2025ರ ಎರಡನೇ ಮತ್ತು ವರ್ಷದ ಕೊನೆಯ ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಸಮಯದಲ್ಲಿ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದು, ಹೀಗಾಗಿ “ಬ್ಲಡ್ ಮೂನ್” ಎಂದು ಕರೆಯಲಾಗುತ್ತದೆ.

ಗ್ರಹಣ ಅಂದ ತಕ್ಷಣ ಕೆಲ ಗೊಂದಲಗಳು ಸಾಮಾನ್ಯ. ಗ್ರಹಣದ ವೇಳೆ ಏನು ಮಾಡಬೇಕು? ಏನು ಮಾಡಬಾರದು. ಆರಂಭ-ಮುಕ್ತಾಯ ಯಾವಾಗ? ಬರಿಗಣ್ಣಿನಲ್ಲಿ ನೋಡಬಹುದಾ? ಚಂದ್ರಗ್ರಹಣ ಕುರಿತ ಇಂತ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ. ಗ್ರಹಣದ ಸಮಯ, ಸೂತಕ, ವೀಕ್ಷಣೆ, ಜ್ಯೋತಿಷ್ಯ ಪ್ರಭಾವ ಸೇರಿದಂತೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಭಾರತದಲ್ಲಿ ಚಂದ್ರಗ್ರಹಣದ ಸಮಯ

ಆರಂಭ: ಸೆಪ್ಟೆಂಬರ್ 7ರ ರಾತ್ರಿ 09:57 ನಿಮಿಷ
ಮುಕ್ತಾಯದ ಸಮಯ: ಸೆಪ್ಟೆಂಬರ್ 8ರ ಬೆಳಿಗ್ಗೆ 01:26 ನಿಮಿಷ
ಉತ್ತುಂಗದ ಸಮಯ: ರಾತ್ರಿ 11:00 ರಿಂದ 12:22 ನಿಮಿಷದ ವರೆಗೆ
ಒಟ್ಟು ಸಮಯ: 3 ಗಂಟೆ 29 ನಿಮಿಷ

ಸೂತಕ ಕಾಲ ಯಾವಾಗ ಪ್ರಾರಂಭ

ಭಾರತೀಯ ಪರಂಪರೆ ಮತ್ತು ಹಿಂದು ಧಾರ್ಮಿಕ ನಂಬಿಕೆ ಪ್ರಕಾರ, ಚಂದ್ರಗ್ರಹಣ ಆರಂಭಕ್ಕೂ 9 ಗಂಟೆಗಳ ಮೊದಲು ಸೂತಕ ಕಾಲ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 7ರ ಮಧ್ಯಾಹ್ನ 12:57ಕ್ಕೆ ಸೂತಕ ಕಾಲ ಪ್ರಾರಂಭವಾಗಲಿದ್ದು, ಗ್ರಹಣ ಮುಗಿದ ತಕ್ಷಣ ಸೂತಕ ಕಾಲವೂ ಮುಕ್ತಾಯವಾಗಲಿದೆ. ಸಾಮಾನ್ಯವಾಗಿ ಸೂತಕ ಕಾಲದಲ್ಲಿ ದೇವಾಲಯಗಳು ಮುಚ್ಚಲ್ಪಟ್ಟು, ಗ್ರಹಣದ ನಂತರ ಶುದ್ಧೀಕರಣ ವಿಧಿಗಳೊಂದಿಗೆ ತೆರೆಯಲಾಗುತ್ತದೆ. ಇದು ಅವರವರ ನಂಬಿಕೆಯ ಪ್ರಶ್ನೆ. ನಂಬಿಕೆಯಿದ್ದವರು ಅನುಸರಿಸಬಹುದು.

ಈ ಗ್ರಹಣ ಭಾರತದಲ್ಲಿ ಎಲ್ಲಿ ಗೋಚರಿಸುತ್ತದೆ?

ದೇಶವ್ಯಾಪಿಯಾಗಿ ಪೂರ್ಣವಾಗಿ ಕಾಣಸಿಗುತ್ತದೆ. ಆದರೆ ಹವಾಮಾನ ಸಹಕಾರ ಅವಶ್ಯಕ. ಮೋಡೆ ಅಥವಾ ಮಳೆಯ ವಾತಾವರಣ ಇದ್ದಲ್ಲಿ ಕಷ್ಟಸಾಧ್ಯವಾಗಬಹುದು. ಸಾಮಾನ್ಯವಾಗಿ ಚಂದ್ರಗ್ರಹಣವು ಕೆಲವು ಪ್ರದೇಶಗಳಲ್ಲಿ ಮಾತ್ರ ಗೋಚರಿಸುತ್ತದೆ. ಆದರೆ, ಈ ಬಾರಿಯ ಗ್ರಹಣ ಏಷ್ಯಾ, ಆಫ್ರಿಕಾ, ಯುರೋಪ್, ಅಮೆರಿಕಾ ಸೇರಿಂದತೆ ಹೆಚ್ಚಿನ ಭಾಗಗಳಿಂದ ವೀಕ್ಷಿಸಲು ಸಾಧ್ಯವಾಗುವುದು ವಿಶೇಷ.

Blood Moon 2025: ಬರಿಗಣ್ಣಿನಿಂದ ವೀಕ್ಷಿಸಬಹುದಾ?

ಹೌದು. ಹೌದು, ಈ ರಕ್ತ ಚಂದ್ರಗ್ರಹಣವನ್ನು ಬೈನಾಕ್ಯುಲರ್, ಟೆಲಿಸ್ಕೋಪ್ ಅಥವಾ ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದಾಗಿದೆ. ಈ ಚಂದ್ರ ಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಕನ್ನಡಕ ಅಗತ್ಯವಿಲ್ಲ. ಸೂರ್ಯ ಗ್ರಹಣದಂತೆ ಚಂದ್ರ ಗ್ರಹಣವು ಕಣ್ಣಿಗೆ ಅಪಾಯವಲ್ಲ. ಚಂದ್ರ ಗ್ರಹಣ ಸುರಕ್ಷಿತ. ಬರಿಗಣ್ಣಿನಿಂದ ನೋಡಬಹುದು.

ಜ್ಯೋತಿಷ್ಯದ ಪ್ರಕಾರ ರಾಶಿ ಫಲ

ಶುಭಫಲ: ಕನ್ಯಾ, ಧನು, ಮೇಷ, ವೃಷಣ
ಅಶುಭಫಲ: ಮೀನು, ಕರ್ಕ, ವೃಶ್ಚಿಕ, ಕುಂಭ
ಮಿಶ್ರಫಲ: ಸಿಂಹ, ಮಕರ, ಮಿಥುನ, ತುಲಾ

ಯಾವ ಸಮಯದಲ್ಲಿ ಚಂದ್ರನು ಕೆಂಪಾಗಿರುತ್ತಾನೆ?

ರಾತ್ರಿ 11:00-12:23ರ ಅವಧಿಯಲ್ಲಿ ಚಂದ್ರ ಕೆಂಪಾಗುತ್ತಾನೆ.

ಮುಂದಿನ ಸಂಪೂರ್ಣ ಚಂದ್ರಗ್ರಹಣ ಯಾವಾಗ?

ಜಗತ್ತಿನ ಬೇರೆ ಭಾಗಗಳಿಗೆ ಮಾರ್ಚ್ 2-3, 2026 ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.

ಈ ಚಂದ್ರಗ್ರಹಣದ ಲೈವ್ ವೀಕ್ಷಿಸುವುದು ಹೇಗೆ?

ಹವಾಮಾನ ಅಥವಾ ಸ್ಥಳೀಯ ಕಾರಣಗಳಿಂದ ನೋಡಲು ಸಾಧ್ಯವಾಗದಿದ್ದರೂ, ಆನ್‌ಲೈನ್‌ನಲ್ಲಿ ಲೈವ್ ವೀಕ್ಷಿಸಬಹುದು.

ಗ್ರಹಣ ಹೇಗೆ ಸಂಭವಿಸುತ್ತದೆ

ಸೂರ್ಯ, ಭೂಮಿ ಹಾಗು ಚಂದ್ರರು ಒಂದೇ ರೇಖೆಯಲ್ಲಿ ಬಂದಾಗ, ಭೂಮಿಯು ಸೂರ್ಯನ ಬೆಳಕನ್ನು ಚಂದ್ರನನ್ನು ತಲುಪುವುದನ್ನು ತಡೆ ಹಿಡಿಯುತ್ತದೆ. ಈ ವೇಳೆ ಚಂದ್ರನು ಗೋಚರಿಸುವುದಿಲ್ಲ. ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಅಂಕೋಲಾ ಕಲ್ಲೇಶ್ವರದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ

ಅಂಕೋಲಾ : ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಹೊನ್ನಾವರ,ಸಂಗಮ ಸೇವಾ ಸಂಸ್ಥೆ ಅಂಕೋಲಾ, ಗ್ರಾಂ ಪಂ ಡೊಂಗ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ...

ಮನೆಯಿಂದ ಹೋದ ಮಹಿಳೆ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಮುಂಡಗೋಡ: ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದವರ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮುಂಡಗೋಡು ನಿವಾಸಿಯಾಗಿದ್ದ 29 ವರ್ಷದ ಆದಿತಿ ಆನಂದ ಬಸ್ತಾವಾಡ ಇವಳು ದಿನಾಂಕ 7-3-2025 ರಂದು ಮನೆಯಿಂದ ಹೋದವಳು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಲು ಅಪರೂಪ ಕೆಂಪು ಬಣ್ಣದ ಈ ಸಿಂಧೂರ ಗಣಪ: ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ

ಅಂಕೋಲಾ: ವಿಶ್ವದಾದ್ಯಂತ ಪ್ರಥಮ ಪೂಜಿತ, ಏಕದಂತನ ಆರಾಧನೆ ಜೋರಾಗಿ ನಡೆದಿದ್ದು ಚೌತಿಯ ಸಂಭ್ರಮ ಎಲ್ಲೆಡೆ ಕಂಡುಬರುತ್ತಿದೆ....

ಮನೆಯಿಂದ ಹೋದ ಅಂಕೋಲಾ ಯುವತಿ ನಾಪತ್ತೆ: ಪೊಲೀಸರ ತನಿಖೆ ಆರಂಭ

ಅಂಕೋಲಾ: ತಾಲೂಕಿನ ಅಗ್ರಗೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿಗೋಣ ಬೈಲಕೇರಿಯಲ್ಲಿ ಯುವತಿಯೋರ್ವಳು ಮನೆಯಿಂದ ಕಾಣೆಯಾದ ಘಟನೆ...

ಮನೆಯಿಂದ ಹೋದ ಮಹಿಳೆ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಮುಂಡಗೋಡ: ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದವರ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮುಂಡಗೋಡು ನಿವಾಸಿಯಾಗಿದ್ದ...

ಮಗಳ ಹುಟ್ಟುಹಬ್ಬದಂದು ಸೇವಾಶ್ರಮ ನಿವಾಸಿಗಳಿಗೆ ಪ್ರೀತಿಯ ಸೇವೆ: ವಸಂತ ನಾಯಕ ಕುಟುಂಬದ ಮಾನವೀಯ ನೆರವು

ಅಂಕೋಲಾ: ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ, ಹಾಗೂ ಸಮಾಜದಲ್ಲಿ ಹಲವು ವಿದಾಯಕ ಕೆಲಸಗಳ ಮೂಲಕ...

ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಆರು ಶಿಕ್ಷಕರು ಆಯ್ಕೆ

ಸಿದ್ದಾಪುರ: 2025ನೇ ಸಾಲಿನ ಸಿದ್ದಾಪುರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿoದ ನೀಡುವ ಡಾ. ಎ.ಪಿ.ಜೆ...

ಸೆಪ್ಟೆಂಬರ್ 6ರ ವರೆಗೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?

ಕಾರವಾರ, ಸೆಪ್ಟೆಂಬರ್ 3: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ....

Uttara Kannada Crime Roundup: ಪ್ರಮುಖ ಸುದ್ದಿಗಳು

ಕೆರೆಗೆ ಹಾರಿ ಸಾವಿಗೆ ಶರಣಾದ ವಿದ್ಯಾರ್ಥಿನಿ ಶಿರಸಿ ಸೆಪ್ಟೆಂಬರ್ 2: ಕೆರೆಗೆ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ...

ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ

ಕಾರವಾರ: ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ...