ಹೊನ್ನಾವರ: ಹೊಸಾಕುಳಿ ಗ್ರಾಮದ ಭಾಸ್ಕೇರಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗುಡ್ಡೇಬಾಳು ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.. ನದಿ ಪಾತ್ರದ ಜನರನ್ನು, ನೀರಿನಲ್ಲಿ ಸಿಲುಕಿದವರನ್ನು ಎನ್‌ಡಿಆರ್‌ಎಫ್ ತಂಡದ ಹಾಗೂ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿ ತರಲಾಗಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಮೆಂಬರ್ ಬಿಜೆಪಿ ಯುವ ಮುಖಂಡ ಎಚ್ ಆರ್ ಗಣೇಶ ತಹಶೀಲ್ದಾರರನ್ನು ನೀರಿನಲ್ಲಿ ಕರೆದು ಕೊಂಡು ಹೋಗಿ ಸ್ಥಳೀಯರ ಮಳೆಗಾಲದ ಬವಣೆ ಬಗ್ಗೆ ವಿವರಿಸಿದರು.. ನೇರೆ ಪಿಡಿತ ೧೧೮ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ತಿಳಿಸಿದ್ದು, ಮುಂದಿನ ದಿನಗಳಲ್ಲಿ ೧೧೮ ಮನೆಯವರನ್ನು ಸೇರಿಸಿ ಶಾಶ್ವತ ಪರಿಹಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಹಶೀಲ್ದಾರ ಶ್ರೀ ಪ್ರವೀಣ್ ಕರಾಂಡೆ ಭರವಸೆ ನೀಡಿದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ