ಭಟ್ಕಳ: ಶಿರಾಲಿಯ ತಟ್ಟಿಹಕ್ಕಲಿನಿಂದ ನಾಪತ್ತೆಯಾಗಿದ್ದ 18 ವರ್ಷದ ಜಿಯಾನ್ ಮುನಾಫ್ ಎಂಬ ಯುವತಿಯನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಪತ್ತೆ ಹಚ್ಚುವಲ್ಲಿ ಇಲ್ಲಿನ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆಯು ಭಟ್ಕಳ ಪಟ್ಟಣಕ್ಕೆ ಬಂದು ವಾಪಾಸ್ ಹೋಗುವಾಗ ತಟ್ಟಿಹಕ್ಕಲಿನಲ್ಲಿ ತನ್ನ ತಂಗಿಯನ್ನು ಮನೆಗೆ ಬಿಟ್ಟು ತನ್ನ ಸ್ನೇಹಿತೆಯೊಂದಿಗೆ ಅಟೋ ರಿಕ್ಷಾದಲ್ಲಿ ತೆರಳಿದ್ದಳು .ಮನೆಗೆ ಮರಳದೇ ನಾಪತ್ತೆಯಾಗಿದ್ದ ಈಕೆಯನ್ನು ಹುಡುಕಿ ಕೊಡುವಂತೆ ಪೊಷಕರು ದೂರು ದಾಖಲಿಸಿದ್ದರು. ದೂರನ್ನು ಆಧರಿಸಿ ತನಿಖೆಗೆ ಇಳಿದ ಗ್ರಾಮೀಣ ಠಾಣೆಯ ಪೊಲೀಸರು ಯುವತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ