"ಶಿಕ್ಷಕ ಉಮೇಶ ನಾಯ್ಕರಿಗೆ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಸದ್ಗುರು ಸಂಪನ್ನ ಅಭಿದಾನ ಸನ್ಮಾನ"
Focus News

ವಿಶ್ರಾಂತ ಶಿಕ್ಷಕ ಉಮೇಶ ನಾಯ್ಕ ಅವರಿಗೆ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಸನ್ಮಾನ: “ಸದ್ಗುರು ಸಂಪನ್ನ” ಅಭಿದಾನ ಪ್ರದಾನ

Share

ಕುಮಟಾ: ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಶಿಕ್ಷಕ ವೃತ್ತಿಯಿಂದ ವಯೋನಿವೃತ್ತಿಗೊಂಡ ಸ್ಥಳೀಯರಾದ ಉಮೇಶ ನಾಯ್ಕರವರನ್ನು ” ಸದ್ಗುರು ಸಂಪನ್ನ ” ಎಂಬ ಉಪಾದಿಯೊಂದಿಗೆ ಆಪ್ತವಾಗಿ ಸನ್ಮಾನಿಸಲಾಯಿತು.

ಮೂರು ದಶಕಗಳ ಸೇವೆಗೆ ಗೌರವ

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಉಮೇಶ ನಾಯ್ಕರವರು ಸರಿಸುಮಾರು ಮೂರು ದಶಕಗಳಿಗೂ ಮಿಕ್ಕಿ ಶಿಕ್ಷಕರಾಗಿ ಸಲ್ಲಿಸಿದ ಸೇವೆಯು ಅನನ್ಯವಾಗಿದ್ದು, ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಅವರನ್ನು ಅಭಿನಂದಿಸಬೇಕಾದದು ಸಾಂಸ್ಕೃತಿಕವಾದ ಬದ್ಧತೆ ಎಂದ ವಿದ್ಯಾಪೀಠದ ಗೌರವಾಧ್ಯಕ್ಷರಾದ ಸಂಸ್ಕೃತಾಧ್ಯಾಪಕ ಮಂಜುನಾಥ ಗಾಂವ್ಕರ್ ಬರ್ಗಿಯವರು, ಉಮೇಶ ನಾಯ್ಕರವರು ವಿಶ್ರಾಂತಿಯ ಬದುಕನ್ನು ರಚನಾತ್ಮಕ ಚಟುವಟಿಕೆಗಳೊಂದಿಗೆ ಸಕ್ರಿಯರಾಗಿ ಕಳೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Read: ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ

ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗರಾಜ ಕೃಷ್ಣ ನಾಯ್ಕರವರು ಮಾತನ್ನಾಡಿ, ಉಮೇಶ ನಾಯ್ಕರವರ ಕಾರ್ಯಕ್ಷೇತ್ರದಲ್ಲಿನ ಕಾರ್ಯದಕ್ಷತೆಗಾಗಿ ಅರವತ್ತಾದರೂ ಎಳೆಯರಂತಿರುವುದರಿoದ ಇನ್ನಷ್ಟು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಲು ಸಶಕ್ತರರುವುದರಿಂದ ಅವರ ನಿವೃತ್ತಿಯು ಸಮಾಜಕ್ಕೆ ಮತ್ತು ಇಲಾಖೆಗೆ ನಷ್ಟವಾಗಿದೆ ಎಂದರು. ನಿವೃತ್ತಿಯ ಬದುಕನ್ನು ಕುಟುಂಬಸ್ಥರೊoದಿಗೆ ಸಮೃದ್ಧಿಯಿಂದ ಕಳೆಯಲು ಹಾರೈಸಿದರು.

ಜೀವನದ ಅಮೃತ ಕ್ಷಣವೆಂದ ಉಮೇಶ ನಾಯ್ಕ

ಸನ್ಮಾನವನ್ನು ಸ್ವೀಕರಿಸಿದ ಉಮೇಶ ನಾಯ್ಕರವರು ಮನೆಯಂಗಳದಲ್ಲಿ ತನ್ನನ್ನು ಆತ್ಮೀಯವಾಗಿ ಸನ್ಮಾನಿಸಿದ ವಿದ್ಯಾಪೀಠಕ್ಕೆ ಮತ್ತು ಬರ್ಗಿಯೂರಿನ ಹತ್ತು ಸಮಸ್ತರ ಸಜ್ಜನಿಕೆಗೆ ಋಣಿಯಾಗಿದ್ದು, ತನ್ನ ಬದುಕಿನ ಅಮೃತ ಕ್ಷಣಗಳಲ್ಲಿ ಇದು ಒಂದು ಎಂದರು.
ಕಾರ್ಯಕ್ರಮದ ಸಂಯೋಜಕರಾದ ಊರ ಮುಖಂಡರಾಗಿರುವ ನಾರಾಯಣ ನಾಗು ನಾಯಕ, ಮನೆ ವೈದ್ಯ ಅಶೋಕ ದಯಾನಂದ ಪಂಡಿತ್, ಎಂ. ಎಸ್. ನಾಯ್ಕ ಹಾಗೂ ವಾಮನ ಪಟಗಾರ ಮೊದಲಾದವರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ARE YOU A TOP SALES PERFORMER? TARANGA IS HIRING – ONLY 4 VACANCIES

Taranga Electronics & Furniture, one of Uttara Kannada’s most reputed retail chains, is looking for dynamic Sales Executives to join our growing team....

11 ತಾಲೂಕುಗಳಲ್ಲಿ ಉದ್ಯೋಗಾವಕಾಶ; 15,600 ರಿಂದ 21 ಸಾವಿರ ವರೆಗೆ ವೇತನ

ಉತ್ತರ ಕನ್ನಡ: ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲೊಂದು ಉತ್ತಮ ಅವಕಾಶ. ಸ್ವತಂತ್ರ ಮೈಕ್ರೋಪಿನ್ ಲಿಮಿಟೆಡ್ ಎಂಬ ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆ (NBFC-MFI)ಯಲ್ಲಿ ಕ್ಷೇತ್ರ ಅಧಿಕಾರಿ (Field Officer) ಹುದ್ದೆಗೆ ಅರ್ಹ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಜನಪ್ರಿಯ ಶಿಕ್ಷಕ ಮಂಜುನಾಥ ನಾಯಕ ಇನ್ನಿಲ್ಲ :  ಜೂನ್ 6 ರ ಶನಿವಾರ ಬೆಳಿಗ್ಗೆ ಅಗ್ರಗೋಣದಲ್ಲಿ ಅಂತ್ಯಸಂಸ್ಕಾರ

ಅಂಕೋಲಾ: ತಾಲೂಕಿನ ಅಗ್ರಗೋಣ ಗ್ರಾಮದ (ಲಕ್ಷ್ಮೀ ಮನೆ ) ನಿವಾಸಿ, ಹಾಗೂ ಬೇಲೇಕೇರಿ ಸರ್ಕಾರಿ ಪ್ರೌಢಶಾಲೆಯ...

ಮೂಲ ಸ್ಥಳದಲ್ಲೇ ಮುರಿನಕಟ್ಟೆ ನಿರ್ಮಾಣಕ್ಕೆ ಯೋಜನೆ ಸಿದ್ಧ : ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ: ಹೆದ್ದಾರಿ ಪ್ರಾಧಿಕಾರ ಮುರಿನಕಟ್ಟೆಯನ್ನು ಮೂಲ ಜಾಗದಲ್ಲಿಯೇ ಕಟ್ಟಲು ತಿರ್ಮಾನಿಸಿ ಈ ಕುರಿತು ನೀಲನಕ್ಷೇಯನ್ನು ತಯಾರಿಸಲಾಗಿದೆ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್...

ಚುನಾವಣೆ ನಂತರ ರಾಜಕೀಯ ಬದಿಗಿಟ್ಟು ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ : ಅಮದಳ್ಳಿ ಗ್ರಾಮ ದೇವರ ಗ್ರಾಮ ಎಂದ ಶಾಸಕ ಸೈಲ್

ಕಾರವಾರ: ಗ್ರಾಮೀಣ ಆಡಳಿತ ವ್ಯವಸ್ಥೆಗೆ ಬಲ ತುಂಬುವ ಹೆಜ್ಜೆಯಾಗಿ ಅಮದಳ್ಳಿ ಗ್ರಾಮ ಪಂಚಾಯತ್‌ನ ನೂತನ ಸಭಾಭವನವನ್ನು...

ಅಂಕೋಲಾದಲ್ಲಿ ಇಂದು ಪಂಚದೇವರ ದೊಡ್ಡ ಕಾರ್ತಿಕೋತ್ಸವ : ಶಿರ ಕುಳಿ ಕಾನದೇವಿ ದೇವಸ್ಥಾನದ ಹತ್ತಿರ ವನಭೋಜನಕ್ಕೆ ನಡೆಯುತ್ತಿದೆ ಸಿದ್ದತೆ

ಅಂಕೋಲಾ: ತಾಲೂಕಿನ ಸಂಸ್ಕೃತಿಯ ಆರಾಧನಾ ಪದ್ಧತಿಯಾಗಿ ಹಲವು ತಲೆಮಾರುಗಳಿಂದ ಆಚರಿಸಲ್ಪಡುತ್ತಬಂದಿರುವ ಪಂಚ ದೇವರುಗಳ ದೊಡ್ಡ ಕಾರ್ತಿಕೋತ್ಸವ...

ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಹೋರಾಟ ನಿರಂತರ : ಬಹಿರಂಗ ಸಭೆ ತಾತ್ಕಾಲಿಕವಾಗಿ ಮುಂದೂಡಿಕೆ : ಸಂಘಟಕ ಪ್ರಮುಖರು ಪ್ರಕಟಣೆಯಲ್ಲಿ ಹೇಳಿದ್ದೇನು ?

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ, ಸಾಮೂಹಿಕ ನಾಯಕತ್ವದಡಿ, ಅಂಕೋಲಾ...

ಚಿಪ್ಪಿ ಫ್ಯಾಕ್ಟರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ...

ಆಧುನಿಕ ಜಗತ್ತನ್ನಾಳಲಿರುವ AI ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಅಂಕೋಲಾ : ಕೃತಕ ಬುದ್ಧಿಮತ್ತೆಯು ( AI ತಂತ್ರಜ್ಞಾನ ) ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ...