ಕೆರೆಗೆ ಹಾರಿ ಸಾವಿಗೆ ಶರಣಾದ ವಿದ್ಯಾರ್ಥಿನಿ
ಶಿರಸಿ ಸೆಪ್ಟೆಂಬರ್ 2: ಕೆರೆಗೆ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಶಿರಸಿ ತಾಲೂಕಿನ ಇಸಳೂರಿನಲ್ಲಿ ನಡೆದಿದೆ. ಇಸಳೂರು ಕೆರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಳನ್ನು ಸ್ನೇಹಾ ಎಂದು ಗುರುತಿಸಲಾಗಿದೆ.
ಪ್ರಥಮ ವರ್ಷದ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುತ್ತಿದ್ದ ಸ್ನೇಹಾ, ಚೀಟಿ ಬರೆದಿಟ್ಟು, ಸಾವಿಗೆ ಶರಣಾಗಿದ್ದಾಳೆ. ಮೃತಳ ಸ್ನೇಹಾ ತಂದೆ ಪೋಲಿಸ್ ಇಲಾಖೆಯ ಡಿಆರ್ ನಲ್ಲಿ ಎಆರ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಅಡ್ಡ ಬಂದ ಕಾಡುಹಂದಿ: ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ಬರುತ್ತಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು

ಹೊನ್ನಾವರ ಸೆಪ್ಟೆಂಬರ್ 2 : ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಕಾಡುಹಂದಿ ಒಮ್ಮೆಲೆ ಅಡ್ಡ ಬಂದಿದೆ. ಕಾಡುಹಂದಿಯನ್ನು ತಪ್ಪಿಸಲು ಹೋದ ವೇಳೆ ಬೈಕ್ ನಿಯಂತ್ರಣ ತಪ್ಪಿದ್ದು, ಸವಾರ ಕೆಳಗಡೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಬೈಕ್ ಸವಾರನನ್ನು ತಾಲೂಕಿನ ಕಡ್ಲೆಯ ನಿವಾಸಿ ನಾಗರಾಜ ಜಟ್ಟು ಗೌಡ (32) ಎಂದು ಗುರುತಿಸಲಾಗಿದೆ. ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ವಾಪಸ್ ಮನೆಗೆ ಅರೇಅಂಗಡಿ ಮಾರ್ಗದ ಮೂಲಕ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.
ಕೊಲೆ ಆರೋಪ: ಪತಿ, ಪತ್ನಿಗೆ ಜೀವಾವಧಿ ಶಿಕ್ಷೆ
ಕಾರವಾರ ಸೆಪ್ಟೆಂಬರ್ 2 : ಯಾವುದೋ ದ್ವೇಷದಿಂದ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ಮತ್ತು ಕೊಲೆಗೆ ಸಹಕರಿಸಿದ ಇಬ್ಬರೂ ಅಪರಾಧಿಗಳಿಗೆ 3 ವರ್ಷ ಶಿಕ್ಷೆ ಹಾಗೂ 3 ಸಾವಿರ ದಂಡ ವಿಧಿಸಿ ಕೊಲೆಯಾದ ವ್ಯಕ್ತಿಯ ಪತ್ನಿಗೆ 25 ಸಾವಿರ ಪರಿಹಾರ ನೀಡುವಂತೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಆದೇಶ ನೀಡಿದೆ.
ಮುಂಡಗೋಡ ತಾಲೂಕಿನ ಇಂದಿರಾ ನಗರದ ನಿವಾಸಿಯಾಗಿರುವ ಮೆಹಬೂಬಲಿ ಎಂಬಾತನನ್ನು ಡಿಸೆಂಬರ್ 31 2021 ರಂದು ಕೊಲೆ ಮಾಡಿ ಆತನ ಮೃತದೇಹವನ್ನು ಕಲ್ಲಳ್ಳಿ ಹಾಗೂ ಹನಮಾಪೂರ ಗ್ರಾಮಗಳ ಮಧ್ಯದಲ್ಲಿರುವ ಕಲ್ಲಳ್ಳಿ ಹಳ್ಳದಲ್ಲಿ ಆತನ ಮೋಟಾರ ಸೈಕಲ್ ಸಮೇತ ಎಸೆದು ಹೋಗಿದ್ದರು.

ಈ ಬಗ್ಗೆ ಮುಂಡಗೋಡ ಪೋಲೀಸ್ ಠಾಣೆಯಲ್ಲಿ ಮೃತ ವ್ಯಕ್ತಿಯ ತಮ್ಮ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೋಲೀಸರು ಕೊಲೆ ಆರೋಪಿಗಳಾದ ಮುಂಡಗೋಡ ತಾಲೂಕಿನ ಸಾಲಕೊಳ್ಳಿ ನಿವಾಸಿಸಿಗಳಾದ ಇಬ್ರಾಹಿಂ, ಷರೀಪ್ ಹಾಗೂ ನಾಝಿಯಾ ಎನ್ನುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಇದನ್ನೂ ಓದಿ: ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ
ನ್ಯಾಯಾಲಯದ ಧೀರ್ಘ ಕಾಲ ವಿಚಾರಣೆಯಾಗಿ ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ಮತ್ತು ಕೊಲೆಗೆ ಸಹಕರಿಸಿದ ಇಬ್ಬರೂ ಅಪರಾಧಿಗಳಿಗೆ 3 ವರ್ಷ ಶಿಕ್ಷೆ ಹಾಗೂ 3 ಸಾವಿರ ದಂಡ ವಿಧಿಸಿ ಕೊಲೆಯಾದ ವ್ಯಕ್ತಿಯ ಪತ್ನಿಗೆ 25 ಸಾವಿರ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್