ಶಿರಸಿ: ಕಳೆದ 35 ವರ್ಷಗಳಿಂದ ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ಕುಮಟಾ ರಸ್ತೆ ಅಗಸೆ ಬಾಗಿಲು ಚರ್ಚ್ ಎದುರು ಹಾಲಿ ದೆಹಲಿಯ ಚಾಣಕ್ಯ ಪುರಿ ನಿವಾಸಿ ದೀಪಕ್ ವಿಠ್ಠಲ್ ಭಂಡಾರಿ (61), ಈತನ ಮೇಲೆ ಹೊಡೆದಾಟದ ಬಗ್ಗೆ ದೂರು ದಾಖಲಾಗಿತ್ತು.
ಇದನ್ನೂ ಓದಿ: ಬಹುಮುಖ ಪ್ರತಿಭೆ ಶಿವಾನಂದ ಭಂಡಾರಿ
ಆದರೆ ದೀಪಕ್ ವಿಠ್ಠಲ್ ಭಂಡಾರಿ ಈತನು ಪ್ರಕರಣ ದಾಖಲಾದಾಗಿನಿಂದ ಇಲ್ಲಿಯವರೆಗೂ ಸುಮಾರು 35 ವರ್ಷಗಳಿಂದ ಠಾಣೆಗೂ ಹಾಜರಾಗದೇ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರಸಿಕೊಂಡಿದ್ದ. ಆರೋಪಿ ದೆಹಲಿಯಿಂದ ದಾಂಡೇಲಿಗೆ ಬರುವ ಬಗ್ಗೆ ಖಚಿತ ಮಾಹಿತಿಯನ್ನು ಕಲೆ ಹಾಕಿ ಆರೋಪಿತನನ್ನು ಆಗಷ್ಟ 25ರಂದು ದಾಂಡೇಲಿಯಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.
ಡಿವೈಯಸ್ಪಿ ಗೀತಾ ಪಾಟೀಲ್ ಹಾಗು ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನ ಮತ್ತು ಪಿಎಸ್‌ಐ ಗಳಾದ ನಾಗಪ್ಪ ಬಿ, ನಾರಾಯಣ ಆರ್ ರಾಠೋಡ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಹನುಮಂತ ಕಬಾಡಿ,ತುಕಾರಾಮ ಬಣಕಾರ,ರಾಮಯ್ಯ ಪೂಜಾರಿ,ಸದ್ದಾಂ ಹಸೇನ್.ಬಿ,ಚನ್ನಬಸಪ್ಪ ಕ್ಯಾರಕಟ್ಟಿ, ಹನುಮಂತ ಮಾಕಾಪುರ,ಹಾಗು ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗಾ,ಬಬನ್ ರವರು ಕಾರ್ಯಾಚರಣೆಯಲ್ಲಿ ಪಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಶಿರಸಿ