- ಕಬಡ್ಡಿ, ಸಂಗೀತ, ಶಿಲ್ಪಕಲೆಯಿಂದ ಜನಮನ ಸೆಳೆದ ಕುಮಟಾದ ಕಲಾವಿದ
ಕುಮಟಾ: ಕಲೆ ಎಲ್ಲರನ್ನ ಕೈಬಿಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವ ಮಾತಿಗೆ ಸಾಕ್ಷಿಯಾದವರು ಕುಮಟಾದ ಬಾಡದ ಗುಡೇ ಅಂಗಡಿಯ ನಿವಾಸಿ ಶ್ರೀಯುತ ಶಿವಾನಂದ್ ಭಂಡಾರಿ ಅವರು. ಅವರು ಒಂದು ರೀತಿಯ ಸಕಲಕಲಾ ವಲ್ಲಭ. ಅವರು ಕಬಡ್ಡಿ ಕ್ರಿಕೆಟ್ ವಾಲಿಬಾಲ್ ಆಡಲು ನಿಂತರೆ ಎದುರಾಳಿಯ ಮೈಯಲ್ಲಿ ನಡುಕ ಹುಟ್ಟುತ್ತದೆ .
ಸೇಕ್ಸೊಫೋನ್ ನುಡಿಸಲು ಪ್ರಾರಂಭಿಸಿದರೆ ಇಡಿ ವೇದಿಕೆಯು ನಿಬ್ಬೆರಗಾಗುತ್ತದೆ. ಹಾಡಲು ಬಂದರೆ ಮಂತ್ರ ಮುಗ್ದ ಗೊಳಿಸುತ್ತಾರೆ. ಇಷ್ಟಕ್ಕೆ ಮಾತ್ರ ನಿಂತಿರದ ಅವರ ಪ್ರತಿಭೆ ಮಣ್ಣಿಗೆ ಜೀವಂತಿಕೆಯ ಸ್ವರೂಪವನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಹಲವಾರು ಗೌರಿ ಗಣಪತಿ ವಿಗ್ರಹವನ್ನು ರಚಿಸುವ ಮೂಲಕ ಜಿಲ್ಲೆಯ ತುಂಬೆಲ್ಲ ಮನೆ ಮಾತಾಗಿರುವ ಶಿವಾನಂದ್ ಭಂಡಾರಿ ಮಣ್ಣಿಗೂ ಜೀವ ಕೊಡುವ ಅದ್ಬುತ ಕಲಾಕಾರರು.
ಮಣ್ಣಿಗೆ ಜೀವ ತುಂಬುವ ಕಲಾವಿದ

ಈಗಾಗಲೇ ತಮ್ಮ ಪ್ರತಿಭೆಯ ಮೂಲಕ ಮನೆ ಮಾತಾಗಿರುವ ಶಿವಾನಂದ್ ಭಂಡಾರಿ ಅವರ ವಿಗ್ರಹವನ್ನು ಕಣ್ತುಂಬಿಕೊಳ್ಳಲು ತಾಲೂಕಿನ ಬೇರೆ ತಾಲೂಕಿನ ಹಲವಾರು ಜನರು ಅವರ ಮನೆಯ ಕಡೆಗೆ ಮುಖ ಮಾಡುತ್ತಿದ್ದಾರೆ . ಇಂತಹ ಒಂದು ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಇರಲಿ ಎಂಬುದು ಅವರ ಸ್ನೇಹಿತರು, ಉಪನ್ಯಾಸಕ ಸಂದೀಪ ಕುಮಾರ್ ಹಾಗೂ ಅವರ ಅಭಿಮಾನಿಗಳ ಹಾರೈಕೆಯಾಗಿದೆ.
ವಿಸ್ಮಯ ನ್ಯೂಸ್, ಕುಮಟಾ