Focus News

ಕುಮಟಾದಲ್ಲಿ ಬಿಜೆಪಿ ಮಂಡಲ ಕಾರ್ಯಕಾರಿಣಿ: ಗಮನಸೆಳೆದ ತಿರಂಗಾ ಬೈಕ್ ರ‍್ಯಾಲಿ

Share

ಕುಮಟಾ: ತಾಲೂಕಾ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ ಮಾತನಾಡಿ ನಾವು ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿದ್ದೇವೆ.

ಜಾತಿಗಣತಿ ಮುನ್ನಲೆ ಮತ್ತು ಹಿನ್ನೆಲೆ ಕುರಿತಂತೆ ಓಬಿಸಿ ವರ್ಗಗಳ ಸಮಾವೇಶವನ್ನು ಮಾಡಬೇಕೆಂದು ಈಗಾಗಲೇ ನಿಶ್ಚಯಿಸಿರುವ ಹಿನ್ನೆಲೆಯಲ್ಲಿ ಇದೇ ಬರುವ ಅಗಷ್ಟ್ 17 ರಂದು ಕಾರವಾರದಲ್ಲಿ ನಮ್ಮ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಕೇವಲ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೇ ಎಲ್ಲಾ ಓಬಿಸಿ ವರ್ಗಗಳ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಮ್ಮ ಪಕ್ಷದ ಕಾರ್ಯಕರ್ತರು ನೀಡಿಕೊಳ್ಳಬೇಕದ ಜವಾಬ್ದಾರಿ ಇದೆ. ಬೇರೇ ಬೇರೇ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನೇಕ ಹಿರಿಯರನ್ನು ಭೇಟಿ ಮಾಡಿ ಜಾತಿ ಜನಗಣತಿಯ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.

ಕಾರ್ಯಕಾರಿಣಿ ಸಭೆಯ ನಂತರ ಕುಮಟಾ ಪಟ್ಟಣದ ಹೆಗಡೆ ಕ್ರಾಸ್ ಸಮೀಪದಲ್ಲಿರುವ ನಾದಶ್ರೀ ಕಲಾ ಕೇಂದ್ರದಿAದ ಬಿಜೆಪಿ ಮೋರ್ಚಾ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹದೇವ್ ಯಶಸ್ವಿಗಾಗಿ ವೀರ ಯೋಧರಿಗೆ ನಮನ ಹಾಗೂ 79ನೇ ಸ್ವಾತಂತ್ರ‍್ಯ ದಿನದ ಅಂಗವಾಗಿ ತಿರಂಗಾ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 60 ಕ್ಕೂ ಅಧಿಕ ಬೈಕ್ ಗಳ ಮೂಲಕ ರ‍್ಯಾಲಿ ಪ್ರಾರಂಭವಾಗಿ ಕುಮಟಾ ಪಟ್ಟಣದ ಮಹಾಸತಿ ಸರ್ಕಲ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣದ ಮೂಲಕ ಮೂರುಕಟ್ಟೆ, ರಥ ಬೀದಿ ಮರ್ಗವಾಗಿ ಗಿಬ್ ಸರ್ಕಲ್ ಮೂಲಕ ಪುನಃ ನಾದಶ್ರೀ ಕಲಾಕೇಂದ್ರಕ್ಕೆ ಬರುವುದರ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡಿ ಪ್ರತೀ ವರ್ಷವೂ ಭಾರತೀಯ ಜನತಾ ಪಾರ್ಟಿ ಅಗಷ್ಟ್ 15 ರ ಪೂರ್ವದಲ್ಲಿ ಹರ ಘರ್ ತಿರಂಗಾ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬಂದಿರುತ್ತದೆ. ಈ ವರ್ಷವೂ ಸಹ ನಮ್ಮ ಬಿಜೆಪಿ ಮೋರ್ಚಾ ನೇತೃತ್ವದಲ್ಲಿ ಬೈಕ್ ರ‍್ಯಾಲಿಯನ್ನು ಮಾಡಿ ಜನ ಜಾಗೃತಿ ಮೂಡಿಸಲಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಗಳಿಸುವುದಕ್ಕೆ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರು ಗಳಿಸಿಕೊಟ್ಟ ಸ್ವಾತಂತ್ರ್ಯ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಜಿ. ಆಯ್. ಹೆಗಡೆ, ಬಿಜೆಪಿ ಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಎಮ್. ಜಿ. ಭಟ್, ಪುರಸಭಾ ಅಧ್ಯಕ್ಷೆ ಸುಮತಿ ಭಟ್, ಪ್ರಮುಖರಾದ ಗಜಾನನ ಗುನಗಾ, ಡಾ, ಜಿ.ಜಿ. ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ್ ಸೇರಿದಂತೆ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ…

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಗೆ ಇರಿತ

ಭಟ್ಕಳ: ವಾರದ ಸಂತೆಯಲ್ಲಿ ವ್ಯಾಪಾರಿಯೊಬ್ಬರ ಹತ್ತಿರ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದ ಚೂ-ರಿ ಇರಿತದಲ್ಲಿ ಕೊನೆಗೊಂಡ ಘಟನೆ ನಡೆದಿದೆ. ಹಾನಗಲ್ ಮೂಲದ ಹಾಲಿ...

35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಶಿರಸಿ: ಕಳೆದ 35 ವರ್ಷಗಳಿಂದ ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ಕುಮಟಾ ರಸ್ತೆ ಅಗಸೆ ಬಾಗಿಲು ಚರ್ಚ್ ಎದುರು ಹಾಲಿ ದೆಹಲಿಯ ಚಾಣಕ್ಯ ಪುರಿ ನಿವಾಸಿ...

📰 ನಿಮ್ಮ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರಿನ ಸಭೆ, ಸಮಾರಂಭ, ಪ್ರತಿಭಟನೆ ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸಿ.

✉️ Gmail: [email protected]

📲 WhatsApp ಮೂಲಕ ಕಳುಹಿಸಿ ✉️ Gmail ಮೂಲಕ ಕಳುಹಿಸಿ

ಗಣಪತಿಗೆ ಜೀವ ಕಳೆ ತುಂಬುವ ಗಂಗಾವಳಿಯ ಶರತ್ ನಾಯ್ಕ್

ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ ಇರುವವರು ಕುಮಟಾ ತಾಲೂಕಿನ ಗಂಗಾವಳಿಯ ಹೆಮ್ಮೆಯ ಪ್ರತಿಭೆ ಶರತ್ ನಾಯ್ಕ್ ಅವರು ಈಗಾಗಲೇ ಬೃಹತ್...

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್ ನ ಬೃಹತ್ತ ಮಳಿಗೆ ಅಗಸ್ಟ್ 24 ರ ರವಿವಾರ ಶುಭ ಮುಹೂರ್ತದಲ್ಲಿ ಗ್ರಾಹಕರ ಸೇವೆಗೆ...

ಭಟ್ಕಳದಲ್ಲಿ ಬೆಂಕಿ ಅನಾಹುತ

ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲಕತ್ವದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ...

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಗೆ ಇರಿತ

ಭಟ್ಕಳ: ವಾರದ ಸಂತೆಯಲ್ಲಿ ವ್ಯಾಪಾರಿಯೊಬ್ಬರ ಹತ್ತಿರ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದ ಚೂ-ರಿ ಇರಿತದಲ್ಲಿ ಕೊನೆಗೊಂಡ ಘಟನೆ ನಡೆದಿದೆ. ಹಾನಗಲ್ ಮೂಲದ ಹಾಲಿ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Current date Tuesday , 26 August 2025
Related Articles

35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಶಿರಸಿ: ಕಳೆದ 35 ವರ್ಷಗಳಿಂದ ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ...

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ದೀಕ್ಷಾ ಮಂಜುನಾಥ ನಾಯ್ಕ ಪ್ರಥಮ ಸ್ಥಾನ

ಹೊನ್ನಾವರ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೊನ್ನಾವರದ ಕು. ದೀಕ್ಷಾ ಮಂಜುನಾಥ ನಾಯ್ಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ....

ಹಿಮಾಲಯ ಬಿಸಿಎ ಕಾಲೇಜಿನಲ್ಲಿ ಉದ್ಯೋಗ ತರಬೇತಿ

ಅಂಕೋಲಾ : ತಾಲೂಕಿನ ಹಾಗೂ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಹಿಮಾಲಯ ಶಿಕ್ಷಣ ಸಂಸ್ಥೆಯ...

ಕೇಣಿ ವಾಣಿಜ್ಯ ಬಂದರು ಕೈಬಿಡಿ: ಮೀನುಗಾರರ ಹಿತ ದೃಷ್ಟಿಯಿಂದ ಲೈಫ್ ಜಾಕೆಟ್ ಮತ್ತಿತರ ಪೂರಕ ವ್ಯವಸ್ಥೆಗೆ ಅನುಕೂಲ ಕಲ್ಪಿಸಿಕೊಡಿ

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈ ಬಿಟ್ಟು,ಮೀನುಗಾರರ ಹಿತರಕ್ಷಣೆಗೆ ಸರ್ಕಾರ ಸ್ಪಂದಿಸುವಂತೆ...