ಅಂಕೋಲಾ: ತಾಲೂಕಿನ ಬಾಳೆಗುಳಿ ಬಳಿ ರೈಲ್ವೆ ಟ್ರ್ಯಾಕ್ ಸಮೀಪ ಯುವಕನೋರ್ವನ ಮೃತ ದೇಹ ಪತ್ತೆಯಾಗಿದ್ದು ಯಾವುದೋ ರೈಲಿನಿಂದ ಕೆಳಗೆ ಬಿದ್ದು ಮೃತ ಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರೈಲ್ವೆ ಟ್ರ್ಯಾಕ್ ಮನ್ ಹಳಿಗಳ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಮೃತ ದೇಹ ಕಂಡು ಬಂದಿದ್ದು ಗೋಧಿ ಬಣ್ಣ ಸಾಧಾರಣ ಮೈಕಟ್ಟು , ಕೈಯಲ್ಲಿ ಬಿಳಿ ಬಣ್ಣದ ರಬ್ಬರ್ ಬ್ಯಾಂಡ್ ಹೊಂದಿರುವ ಸುಮಾರು 20 ರಿಂದ 25 ವರ್ಷದ ಯುವಕ ಓಕಾ ಎಕ್ಸ್ ಪ್ರೆಸ್ ಅಥವಾ ಬೇರೆ ಯಾವುದಾದರೂ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಚಲಿಸುತ್ತಿರುವ ರೈಲಿನಿಂದ ಆಯ ತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗಳಾಗಿ ಮೃತ ಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಿಪಿಐ ಚಂದ್ರಶೇಖರ ಮಠಪತಿ, ಪಿ ಎಸ್ ಐ ಗುರುನಾಥ ಹಾದಿಮನಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಕಾನೂನು ಕ್ರಮ ಮುಂದುವರಿಸಿದ್ದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ಕನಸಿ ಗದ್ದೆಯ ವಿಜಯಕುಮಾರ ನಾಯ್ಕ ಮತ್ತು ಬೊಮ್ಮಯ್ಯ ನಾಯ್ಕ ಸಹಕರಿಸಿದರು. ಮೃತ ದೇಹವನ್ನು ಶವಾಗಾರದ ಪ್ರೀಜರ್ ನಲ್ಲಿ ಇಡಲಾಗಿತ್ತು. ಮೃತ ವ್ಯಕ್ತಿಯನ್ನು ಛತ್ತೀಸಗಡ ಮೂಲದ ಅನೀಷ ಲಾಕ್ರಾ (25) ಎನ್ನಲಾಗುತ್ತಿದ್ದು, ಪೊಲೀಸರು ಫೋನ್ ಸಂಪರ್ಕ ಮಾಡಿದ ಹಿನ್ನಲೆಯಲ್ಲಿ ಅಮನ ಎನ್ನುವವರು ಅಂಕೋಲಾಕ್ಕೆ ಬಂದು , ಮೃತ ದೇಹವನ್ನು ಊರಿಗೆ ಒಯ್ಯಲು ಸಿದ್ಧತೆ ನಡೆಸಿದರು.
ಮರಣೋತ್ತರ ಪರೀಕ್ಷೆ ಬಳಿ ಮೃತದೇಹವನ್ನು ಅಂಕೋಲಾದಿಂದ ಗೋವಾ, ಹಾಗೂ ಗೋವಾದಿಂದ ವಿಮಾನದ ಮೂಲಕ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಮೀಮಗಾರಿಕೆ ಕೆಲಸಕ್ಕೆ ಬಂದಿದ್ದ ಅನಿಶ್ ಲಾಕ್ರಾ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲ್ವೆ ಮೂಲಕ ಉಡುಪಿಯಿಂದ ದೆಹಲಿಯತ್ತ ಪಯಣ ಬೆಳೆಸುವ ದಾರಿ ಮಧ್ಯೆ ಅಂಕೋಲಾದಲ್ಲಿ ಆಕಸ್ಮಿಕವಾಗಿ , ರೈಲ್ವೆಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದ್ದು ಈ ಕುರಿತು ಪೊಲೀಸರಿಂದ ಹೆಚ್ಚಿನ ಮತ್ತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ. ದೂರು
ದಾಖಲಾಸಿಕೊಂಡ ಅಂಕೋಲಾ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ