ಹೊನ್ನಾವರ: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಇಡಗುಂಜಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಅಂಗಾರಕ ಸಂಕಷ್ಟಿಯು ವಿಜೃಂಭಣೆಯಿoದ ನಡೆಯಿತು. ಭಕ್ತರು ತಮ್ಮಿಷ್ಠಾರ್ಥ ಸೇವೆಗಳನ್ನ ಸಲ್ಲಿಸಿ ಪುನೀತರಾದರು. ಅಂಗಾರಕ ಸಂಕಷ್ಟಿಯಾಗಿದ್ದರಿoದ ಬೆಳಗಿನ ಜಾವದಿಂದಲೇ ಮಹಾಗಣಪತಿಯ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು. ಶ್ರೀ ಮಹಾಗಣಪತಿಗೆ ಭಕ್ತರು ಶ್ರೀ ಕ್ಷೇತ್ರದಲ್ಲಿ ಮಂಗಳಾರತಿ, ಸತ್ಯಗಣಪತಿ ವ್ರತ , ಅಭಿಷೇಕ ಹಾಗೂ ಪಂಚಕಜ್ಜಾಯ ಸೇವೆಗಳನ್ನು ಸಲ್ಲಿಸಿದರು.
ಈ ಬಗ್ಗೆ ದೇವಾಲಯದ ಅರ್ಚಕರಾದ ನರಸಿಂಹ ಭಟ್ ಮಾತನಾಡಿ ಇವತ್ತು ವಿಶೇಷ ದಿನ. ಅಂಗಾರಕ ಸಂಕಷ್ಟಿಯoದು ಭಕ್ತರು ಗಣಪತಿಗೆ ಪೂಜೆ ಮಾಡಿ ಚಂದ್ರನಿಗೆ ಅರ್ಘ್ಯ ನೀಡಿದರೆ ಅವರ ಕಷ್ಟಗಳು ನಿವಾರಣೆಯಾಗುತ್ತವೆ ಹಾಗೂ ಇಷ್ಟಾರ್ಥಗಳನ್ನು ನೇರವೇರಿಸುತ್ತಾನೆ ಎನ್ನುವ ಪ್ರತೀತಿಯಿಂದ ಭಕ್ತರು ದರ್ಶನಕ್ಕೆ ಬರುತ್ತಾರೆ. ಇನ್ನೂ 30 ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೆದ್ಯವಾಗಿದೆ.
ತೆಂಗಿನಕಾಯಿ,ಬಾಳೆಗೋನೆ ಸಮರ್ಪಣೆ ನಡೆದಿದ್ದು, 250 ಗಣಹೋಮ ನಡೆದಿದೆ. ಭಕ್ತರಿಗೆ ಬೆಳಿಗ್ಗೆ 5 ಗಂಟೆಯಿoದಲೇ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು. ಬೆಳಿಗ್ಗೆಯಿoದಲೇ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರಿಗೆ ಸರತಿ ಸಾಲಿನಲ್ಲಿ ಮಹಾಗಣಪತಿಯ ದರ್ಶನಕ್ಕೆ ಅವಕಾಶ ಮಾಡಿದರು..
ಇದರ ಮಧ್ಯೆ ವರುಣ ಅಬ್ಬರಿಸಿದ್ದರಿಂದ ಕೆಲಕಾಲ ಭಕ್ತಾಧಿಗಳು ಮಳೆಯಲ್ಲಿ ನೆನೆಯುವಂತಾಯಿತು. ಪೊಲೀಸರು, ದೇವಾಲಯದ ಸಿಬ್ಬಂದಿಗಳು ಜನದಟ್ಟಣೆ ನಿಬಾಯಿಸುವಲ್ಲಿ ನಿರತರಾಗಿದ್ದರು. ಭಕ್ತರು ಸರದಿ ಸಾಲಿನಲ್ಲಿ ಬಂದು, ಹಣ್ಣು ಕಾಯಿ ಸೇವೆ, ಪಂಚಕಾದ್ಯ ಸೇವೆ, ಪೂಜೆ, ಗಣಹೋಮ, ಬಾಳೆಗೋನೆ, ಕುಂಕುಮಾರ್ಚನೆ ಸೇರಿದಂತೆ ಇನ್ನಿತರ ವಿವಿಧ ಸೇವೆಗಳನ್ನ ನೀಡಿ ಮನೋಕಾಮನೆಗಾಗಿ ಪ್ರಾರ್ಥಿಸಿಕೊಂಡರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ