Focus News

ಕುಮಟಾ ತಾಲೂಕಿನ ನೆಲ್ಲಿಕೇರಿ ಶಾಲೆಯಲ್ಲಿ 15 ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ: 2 ಕೋಟಿ 74 ಲಕ್ಷ ರೂಪಾಯಿಗಳ ಅನುದಾನ

Share

ಕುಮಟಾ: 2023-24 ನೇ ಸಾಲಿನ ಆಯವ್ಯಯ ಘೋಷಣೆಯಂತೆ ಸಾಮಾನ್ಯ ಯೋಜನೆಯಡಿ ಕರ್ನಾಟಕ ರಾಜ್ಯದ ಪಬ್ಲಿಕ್ ಶಾಲೆಗಳಿಗೆ ಕಲಿಕಾ ಸಾಮಗ್ರಿ ಹಾಗೂ ಮೂಲಭೂತ ಸೌಕರ್ಯ ಅನುದಾನದಡಿ ಕುಮಟಾ ತಾಲೂಕಿನ ಕೆ ಪಿ ಎಸ್ ನೆಲ್ಲಿಕೇರಿ ಶಾಲೆಗೆ ಅಂದಾಜು ಮೊತ್ತ 2 ಕೋಟಿ 74 ಲಕ್ಷ ರೂಪಾಯಿಗಳ ಅನುದಾನದಡಿ 15 ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ವಾದ್ಯಘೋಷದ ಮೂಲಕ ಸ್ವಾಗತಿಸಲಾಯಿತು. ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಮತ್ತು ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಕೊಠಡಿ ನಿರ್ಮಾಣ ಕಾರ್ಯದ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯ ಮೇಲಿರುವ ಅತಿಥಿ ಗಣ್ಯರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಂಕಾಳ ವೈದ್ಯ ಅವರು ಈ ರಾಜ್ಯದಲ್ಲಿಯೇ 2600ಕ್ಕೂ ಅಧಿಕ ಮಕ್ಕಳಿರುವ ಸರ್ಕಾರಿ ಶಾಲೆಗಳಿಲ್ಲ ಅನ್ನಿಸುತ್ತದೆ. ಸುಮಾರು 150 ವರ್ಷಗಳ ಇತಿಹಾಸ ಇರುವ ಈ ಶಾಲೆಯು ಕುಮಟಾ ಪಟ್ಟಣದ ಮಧ್ಯೆ ಒಳ್ಳೆಯ ಜಾಗದಲ್ಲಿದೆ. ಈ ಶಾಲೆಗೆ 15 ಕೊಠಡಿ ನಿರ್ಮಾಣ ಕಾರ್ಯಕ್ಕೆ ನಮ್ಮ ಸರ್ಕಾರ 2.74 ಕೋಟಿ ರೂ ಅನುದಾನ ನೀಡಿದೆ. ಮನುಷ್ಯ ಯಾವಾಗ ಬೇಕಾದರೂ ಏನನ್ನು ಬೇಕಾದರೂ ಪಡೆಯಬಹುದು, ಆದರೆ ಶಿಕ್ಷಣವನ್ನು ಮಾತ್ರ ಆ ಸಮಯದಲ್ಲಿ ಮಾತ್ರ ಪಡೆಯಬೇಕಾಗುತ್ತದೆ ಎಂದು ಹೇಳಿದರು.

ಉಳ್ಳವರು ಅವರಿಗೆ ಬೇಕಾದ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಸಾಮಾನ್ಯ ಜನರು, ಬಡವರು ಶಿಕ್ಷಣ ಪಡೆಯಲು ಇರುವ ವ್ಯವಸ್ಥೆ ಸರ್ಕಾರಿ ಶಾಲೆಗಳು ಮಾತ್ರ. ನನ್ನ ಪ್ರಥಮ ಆದ್ಯತೆ ಶಿಕ್ಷಣಕ್ಕೆ ನೀಡುತ್ತೇನೆ. ಸೇತುವೆ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳು ಇಂದಲ್ಲಾ ನಾಳೆ ಆಗಬಹುದು ಆದರೆ ಇಂದು ಸಿಗಬೇಕಾದ ಶಿಕ್ಷಣ ಇಂದೇ ಸಿಗಬೇಕು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿ. ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಮಾತು ಸಲ್ಲದು ನಾವು ಐದು ಗ್ಯಾರಂಟಿಗೂ ದುಡ್ಡಿಟ್ಟಿದ್ದೇವೆ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ದುಡ್ಡಿಟ್ಟಿದ್ದೇವೆ, ಅಭಿವೃದ್ಧಿ ಕಾರ್ಯಗಳು ಆಗುತ್ತಿದೆ ಎಂದರು.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ 150 ವರ್ಷ ದಾಟಿದ ಈ ಶಾಲೆಗೆ ಈ ವರೆಗೆ 2.74 ಕೋಟಿ ರೂ ಯಾವ ಸರ್ಕಾರವೂ ನೀಡಿರಲಿಲ್ಲ. ಆದರೆ ಇಂದಿನ ಈ ಸಕಾರ ಮತ್ತು ಸಚಿವರ ಮೂಲಕ ಅನುದಾನ ದೊರೆತಿದೆ. ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಮತ್ತು ಅವರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. 2010 ರಲ್ಲಿ ನಾನು ಶಾಸಕನಾಗಿದ್ದಾಗ ಈ ಶಾಲೆಯ ಕಟ್ಟಡ ಕಟ್ಟಲು ಪುರಾತತ್ವ ಇಲಾಖೆಯ ಸಮಸ್ಯೆ ಪರಿಹರಿಸಿ ಕಟ್ಟಡ ನಿರ್ಮಿಸಿದ್ದೇವೆ. ಮಾಜೀ ಶಾಸಕರಾದ ದಿವಂಗತ ಮೋಹನ ಶೆಟ್ಟಿಯವರು ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದು ಅವರೂ ಸಹ ಇದೇ ಶಾಲೆಯಲ್ಲಿ ಕಲಿತವರು. ಮತ್ತು ನಾನೂ ಸಹ ಇದೇ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸಮಾಡಿದ್ದೇನೆ. 2 ಶಾಸಕರನ್ನೂ ಸಹ ನೀಡಿದ ಶಾಲೆ ಇದಾಗಿದೆ. ಅಲ್ಲದೇ ಈ ಶಾಲೆಯಲ್ಲಿ ಕಲಿತ ಅನೇಕ ಜನರು ಒಳ್ಳೆಯ ಅಧಿಕಾರಿಗಳಾಗಿದ್ದಾರೆ. ಈ ಶಾಲೆಯಲ್ಲಿ ಸುಮಾರು 2600 ವಿದ್ಯಾರ್ಥಿಗಳು ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರತ್ನಾಕರ ನಾಯ್ಕ, ನಾಗೇಶ ನಾಯ್ಕ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ನಿತ್ಯಾನಂದ ನಾಯ್ಕ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಸಂತ ಎಲ್. ನಾಯ್ಕ ಹೊನ್ನಪ್ಪ ನಾಯಕ, ಪುರಸಭಾ ಉಪಾಧ್ಯಕ್ಷ ಮಹೇಶ ನಾಯ್ಕ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ, ಕ್ಷೇತ್ರ ಶಿಕಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಡಿ. ನಾಯ್ಕ, ರಾಮು ಪಿ. ಗುನಗಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಲತಾ ಎಂ. ನಾಯಕ, ಡಯಟ್ ಪ್ರಾಚಾರ್ಯರಾದ ಶಿವರಾಮ ಎಮ್.ಆರ್. ಗುತ್ತಿಗೆದಾರರಾದ ಅಣ್ಣಪ್ಪ ಶೆಟ್ಟಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು, ಶಾಲಾ ಶಿಕ್ಷಕರು ಮತ್ತು ವಿದ್ಯಾಥಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್ ದೀಪೇಶ್ ನಾಯ್ಕ ಕುಮಟಾ

Share

Don't Miss

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

ವಾಡಿಕೆಗಿಂತ ಅಧಿಕ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ನೋಡಿ?

ಕಾರವಾರ: ಜೂನ್ ತಿಂಗಳಿನಲ್ಲಿ ಆರಂಭವಾಗುವ ಮುಂಗಾರು ಮಳೆಯ ಪ್ರಮಾಣವು ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ಶೇ. 106 ರಷ್ಟು ಮಳೆಯಾಗಲಿದ್ದು, 87...

ಸಂಪನ್ನಗೊoಡ ಹೊನ್ನೆಬೈಲ್ ಹಬ್ಬ: ಹರಿದು ಬಂದ ಭಕ್ತ ಸಾಗರ

ಅಂಕೋಲಾ: ಹೊನ್ನೆಬೈಲ್ ಗ್ರಾಮ ದೇವರುಗಳಾದ ಶ್ರೀಬೊಮ್ಮಯ್ಯ ದೇವರು, ಶ್ರೀಕುಸ್ಲೆ ದೇವರು ಮತ್ತು ಶ್ರೀಮಾಣಿಬೀರ ದೇವರುಗಳ ಬಂಡಿಹಬ್ಬಕ್ಕೆ ಪೂರಕವಾದ ವಿಶೇಷ ಹಬ್ಬ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿoದ ನಡೆಯಿತು. ಕಾರಣಾಂತರಗಳಿoದ...

ಈ ಊರಿನವರ ಗೋಳಿನ ಕಥೆ-ವ್ಯಥೆ ನೋಡಿ

ಶಿರಸಿ: ಇದು ಯಾವುದೋ ಇತಿಹಾಸದ ಕಟ್ಟು ಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು.. ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ...

ಶಿರಸಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿಬಿದ್ದ ಖಾಸಗಿ ಬಸ್

ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ಗಟಾರಕ್ಕೆ ಉರುಳಿದ ಘಟನೆ ಶಿರಸಿ ತಾಲೂಕಿನ ಶಿರಸಿ-ಯಲ್ಲಾಪುರ ರಸ್ತೆಯ ಕಡವೆ ಕ್ರಾಸ್ ಬಳಿ ಸಂಭವಿಸಿದೆ. ಎದುರಿನಿಂದ ಬಂದ ವಾಹನಕ್ಕೆ ಜಾಗ ನೀಡುವ ವೇಳೆ...

ಉಚಿತ ಹೃದಯ ರೋಗ ತಪಾಸಣಾ ಶಿಬಿರ : ಮೇ 31ರ ಶನಿವಾರದಂದು ಕುಮಟಾ ತಾಲೂಕಾಸ್ಪತ್ರೆಯಲ್ಲಿ ಆಯೋಜನೆ

ಕುಮಟಾ: ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಸೇವಾಖಂಡದ ಯೋಗಕ್ಷೇಮ ವಿಭಾಗ , ಜನಪರ ಹೋರಾಟ ವೇದಿಕೆ ಕುಮಟಾ ಹಾಗೂ ತಾಲೂಕಾಸ್ಪತ್ರೆ ಕುಮಟಾ ಇವರ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು...

Related Articles

ಪ್ರತಿಭೆಗಳು ಶಿಕ್ಷಣ ಜೊತೆಗೆ ಸಂಸ್ಕಾರವoತರಾಗಬೇಕು: ನಿಶ್ಚಲಾನಂದನಾಥ ಸ್ವಾಮೀಜಿ

ಕುಮಟಾ: ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಹಕ್ಕು. ಅದಕ್ಕೆ ನೀರೆರೆದು ಪ್ರೋತ್ಸಾಹಿಸುವುದು ಪಾಲಕರ ಕರ್ತವ್ಯ. ಶೈಕ್ಷಣಿಕ...

ಸಂಗೀತ ತಾಳ ವಾದ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ

ಸಿದ್ದಾಪುರ: ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದವರು ನಡೆಸಿದ ಸಂಗೀತ ತಾಳ ವಾದ್ಯ ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕಿನ...

ಪ್ಲಾಸ್ಟಿಕ್ ವಸ್ತು ಬಳಕೆ: ದಂಡ ವಿಧಿಸಿ ಎಚ್ಚರಿಕೆ

ದಾಂಡೇಲಿ; ಕೇಂದ್ರ ಮತ್ತು ರಾಜ್ಯ ಸರ್ಕಾರವು ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದ್ದರೂ ಸಹ ಕೆಲವು ಕಡೆಗಳಲ್ಲಿ...

ಪ್ರಗತಿ ವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡ “ವಿಜ್ಞಾನ ದಿನ”

ಕುಮಟಾ: ಭಾರತದ ಶ್ರೇಷ್ಠ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರ ನೊಬೆಲ್ ಪುರಸ್ಕಾರ ಪಡೆದಂತ...