Big News

ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಗೋಪಾಲಕೃಷ್ಣ ನಾಯಕ

Share

ಅಂಕೋಲಾ : ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕರೆ ಪ್ರತಿಭೆಗಳ ಅನಾವರಣ ಸಾಧ್ಯವಿದೆ. ಹೀಗಾಗಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.
ಅವರು ಭಾನುವಾರ ರಾತ್ರಿ ತೆಂಕಣಕೇರಿಯ ಶ್ರೀ ವೆಂಕಟರಮಣ ದೇವಸ್ಥಾನದ ಆವಾರದಲ್ಲಿ ಅಂಕೋಲೆಯ ಶ್ರೀ ಮಹಾಗಣಪತಿ ಸಾಂಸ್ಕೃತಿಕ ಕಲಾ ಸಂಘದ ದ್ವಿತೀಯ ವರ್ಷದ ಸಂಗೀತ,ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಪ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಮಾತನಾಡಿ, ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಹಳ್ಳಿಯ ಕಲಾವಿದರಿಗೆ ಅವಕಾಶ ಒದಗಿಬರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಅಧ್ಯಕ್ಷ ಸೂರಜ ನಾಯ್ಕ ಮಾತನಾಡಿ, ಒತ್ತಡದಿಂದ ನಾವು ಹೊರ ಬರಲು ಮನರಂಜನಾ ಕಾರ್ಯಕ್ರಮಗಳು ಅಗತ್ಯ ಎಂದರು.

ಸನ್ಮಾನ: ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಶ್ರೀ ಶಾಂತಾದುರ್ಗಾ ದೇವಸ್ಥಾನದ ಮುಖ್ಯ ಅರ್ಚಕ ವಿಠ್ಠಲ ಶಾಂತಾರಾಮ ಭಟ್ಟ, ಕಲಾವಿದ ಉಮೇಶ ನಾಯ್ಕ, ಗಾಯಕಿ ದೀಕ್ಷಾ ನಾಗರಾಜ, ಸಾಮಾಜಿಕ ಕಾರ್ಯಕರ್ತ ಸಣ್ಣಪ್ಪ ಮಾಸ್ತರ್, ನಿವೃತ್ತ ಮುಖ್ಯಾಧ್ಯಾಪಕಿ ಪಾರ್ವತಿ ಜಿ. ನಾಯಕ , ನಿವೃತ್ತ ಮುಖ್ಯಾಧ್ಯಾಪಕಿ ಸುಶೀಲಾ ಆಗೇರ್, ಮಾಜಿ ಸೈನಿಕ ಗಿರೀಶ ನಾಯಕ, ಕರಾಟೆ ಪಟು ಸಂಪ್ರೀತ ಪ್ರವೀಣ ನಾಯ್ಕ , ಸಾಮಾಜಿಕ ಕಾರ್ಯಕರ್ತ ಮಹೇಶ ನಾಯ್ಕ ಅವರ್ಸಾ, ಶಿಕ್ಷಕ ಜಿ.ಆರ್.ತಾಂಡೇಲ್, ಕಲಾವಿದ ಹಮೀದ್ ರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ವರದಿಗಾರ ಮಂಜುನಾಥ ನಾಯ್ಕ ಬೆಳಂಬಾರ, ಸಾಮಾಜಿಕ ಕಾರ್ಯಕರ್ತ ಸಣ್ಣಪ್ಪ ಮಾಸ್ತರ್, ವರದಿಗಾರ ವಿಠ್ಠಲದಾಸ ಕಾಮತ್, ಶ್ರೀ ವೆಂಕಟರಮಣ ಸೇವಾ ಸಂಸ್ಥೆಯ ಅಧ್ಯಕ್ಷ ಆನಂದು ನಾಯ್ಕ ಉಪಸ್ಥಿತರಿದ್ದರು.
ಸೌಮ್ಯ ಶ್ರೀನಿವಾಸ ನಾಯ್ಕ ಪ್ರಾರ್ಥಿಸಿದರು. ಶ್ರೀ ಮಹಾಗಣಪತಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಶ್ರೀಕಾಂತ ಎನ್. ನಾಯ್ಕ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಪ್ರವೀಣ ಎನ್. ನಾಯಕ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕ ಜಿ.ಆರ್. ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು. ಸಹ ಕಾರ್ಯದರ್ಶಿ ಮಹೇಶ ಡಿ. ನಾಯ್ಕ ವಂದಿಸಿದರು. ನಂತರ ಕಲಾವಿದ ನಾಗರಾಜ ಜಾಂಬಳೇಕರ್ ತಂಡದಿಂದ ರಸಮಂಜರಿ, ಸ್ಥಳೀಯ ಕಲಾವಿದರಿಂದ ಹಾಡು, ಹಾಸ್ಯ, ನೃತ್ಯ ನಡೆಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ ಸಮ್ಮೇಳನವು ಇದೇ ಜೂನ್ 14 ರ ಭಾನುವಾರದಂದು ಕುಮಟಾದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಂಗಣದಲ್ಲಿ ನಡೆಯಲಿದೆ....

ಪ್ರಸಿದ್ಧ ಕಣ್ಣಿನ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ: Job Alert

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಹೆಗಡೆ ಐ ಫೌಂಡೇಷನ್ / ಹೆಗಡೆ ಆಪ್ಟಿಕಲ್ಸ್, ಭಟ್ಕಳ ಹಾಗೂ ಹೊನ್ನಾವರದಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ಹೊಂದಿದ್ದು, ಇದೀಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಸ್ವಾತಂತ್ರ‍್ಯೋತ್ಸವದ ಸಂಭ್ರಮಕ್ಕೆ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಭರ್ಜರಿ ಆಫರ್; ಶೇ.70ರಷ್ಟು ರಿಯಾಯಿತಿ

ಕುಮಟಾ: ಸ್ವಾತಂತ್ರ‍್ಯೋತ್ಸವದ ಅಂಗವಾಗಿ ತರಂಗ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಗ್ರಾಹಕರಿಗಾಗಿ ವಿಶೇಷ ‘ಫ್ರೀಡಂ ಫೆಸ್ಟಿವಲ್’ ಆಫರ್...

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ...

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ...

ಮುರಿನಕಟ್ಟೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಗೇರಿ ಆಗ್ರಹ

ಭಟ್ಕಳ:ಮುರಿನಕಟ್ಟೆ ವಿಚಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಂದೂಗಳ ಭಾವನೆಗಳಿಗೆ ಸಂಬAಧಿಸಿದ ವಿಷಯವಾಗಿದ್ದು, ಕೆಲ ಮತಾಂಧ...

ಅಳ್ವೆಕೋಡಿ ಕಪ್ಪೆಚಿಪ್ಪು ದುರಂತ: ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕಾಗೇರಿ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಪ್ಪೆಚಿಪ್ಪು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ...

ಜಿಲ್ಲೆಯ ಆರೋಗ್ಯ ಸೇವೆಗೆ ಐತಿಹಾಸಿಕ ಹೆಜ್ಜೆ : ಶಾಸಕ ಸತೀಶ್ ಸೈಲ್

ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ...

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...