Focus News

6 ನೇ ವರ್ಷದ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ: ಕುಂದಾಪುರದ ಬೈಂದೂರಿನ ಸ್ವಾಮಿ ಕೊರಗಜ್ಜ ತಂಡ ಚ್ಯಾಂಪಿಯನ್

Share

ಸಿದ್ದಾಪುರ: ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಗೋಳಿಮಕ್ಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 6 ನೇ ವರ್ಷದ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕುಂದಾಪುರದ ಬೈಂದೂರಿನ ಸ್ವಾಮಿ ಕೊರಗಜ್ಜ ತಂಡ ಚ್ಯಾಂಪಿಯನ್ ಆಗಿ ಹೊರಹೊಮ್ಮಿದೆ. ಶ್ರೀ ಗ್ರಾಮದೇವ ಗೆಳೆಯರ ಬಳಗ ಉಡಳ್ಳಿ ಬಿಳೇಗೋಡ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿದ್ದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಅಂತರ ಜಿಲ್ಲೆಯಿಂದ ಒಟ್ಟು 17 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕುಂದಾಪುರದ ಬೈಂದೂರಿನ ಸ್ವಾಮೀ ಕೊರಗಜ್ಜ ತಂಡ ಹಾಗೂ ಶ್ರೀ ಗ್ರಾಮದೇವ ಗೆಳೆಯರ ಬಳಗ ತಂಡಗಳು ಫೈನಲ್ ಪ್ರವೇಶಿಸಿದ್ದವು. ಅಂತಿಮವಾಗಿ ಕುಂದಾಪುರದ ಬೈಂದೂರಿನ ಸ್ವಾಮೀ ಕೊರಗಜ್ಜ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತೃತೀಯ ಬಹುಮಾನ ಹೈಸ್ಕೂಲ್ ಬಾಯ್ಸ್ ಕುಮಟಾ ತಂಡ ಹಾಗೂ ಚತುರ್ಥ ಬಹುಮಾನವನ್ನು ಗ್ರಾಮ ದೇವ ಗೆಳೆಯರ ಬಳಗ ಬಿ ತಂಡ ಪಡೆದುಕೊಂಡಿದೆ.

ಇನ್ನು ಆರಂಭದಲ್ಲಿ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಮಂಜುನಾಥ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಆರು ವರ್ಷದಿಂದ ಗ್ರಾಮೀಣ ಕ್ರೀಡೆ ಕಬ್ಬಡ್ಡಿಯನ್ನು ಈ ಭಾಗದಲ್ಲಿ ನಮ್ಮ ಮಕ್ಕಳು ಆಯೋಜನೆ ಮಾಡಿ ಆಡುತ್ತಿರುವುದು ಖುಷಿಯ ವಿಚಾರ. ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ಉತ್ತಮ ಆಟದೊಂದಿಗೆ ಎಲ್ಲರ ಮನಸ್ಸು ಗೆಲ್ಲಬೇಕು. ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದೊಡ್ಮನೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ ದೊಡ್ಮನೆ ಗ್ರಾಮ ಪಂಚಾಯಿತಿ ಇದೀಗ ಉತ್ತಮ ಕಟ್ಟಡ, ತೆರಿಗೆ ಸಂಗ್ರಹಣೆಯಲ್ಲಿ ಮಾದರಿಯಾಗಿದೆ. ಇತ್ತೀಚೆಗೆ ಪಂಚಾಯಿತಿಗೆ ಭೇಟಿ ನೀಡಿದ ಜಿ.ಪಂ. ಸಿಇಓ ಕೂಡ ಪಂಚಾಯಿತಿಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾವತಿಯಲ್ಲಿ ಶೆ.97 ರಷ್ಟು ಸಾಧನೆ ಮಾಡಿದ್ದು ಇನ್ನು ಕೆಲವೆ ದಿನದಲ್ಲಿ ಶೇ. 100 ಸಾಧನೆ ಮಾಡುತ್ತೇನೆ. ಇದಕ್ಕೆಲ್ಲವೂ ಗ್ರಾ.ಪಂ ವ್ಯಾಪ್ತಿಯ ಜನರ ಸಹಕಾರವೇ ಕಾರಣ. ಕಬ್ಬಡ್ಡಿಯಂತಹ ಕ್ರೀಡೆಗಳು ನಮ್ಮಲ್ಲಿ ದೈಹಿಕ ಆರೋಗ್ಯ ಹೆಚ್ಚಿಸುವುದಲ್ಲದೆ ಈ ಕ್ರೀಡಾಕೂಡ ಆಯೋಜನೆ ಯುವ ಪಿಳಿಗೆಗೆ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ದೊಡ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವಿಘ್ನೇಶ್ವರ ಹೆಗಡೆ, ಸದಸ್ಯ ಬೀರಾ ದ್ಯಾವ ಗೌಡ, ಶಿಕ್ಷಕರಾದ ತಿಪ್ಪಾ ಈರಾ ಗೌಡ, ತಾಲೂಕು ಕರೆ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅಮ್ಮು ಗೌಡ, ಅನಂತ್ ಗೌಡ, ವಿನಾಯಕ ಗೌಡ, ಗಣಪತಿ ಗೌಡ, ಬೀರಾ ಗೌಡ ಸೇರಿದಂತೆ ಇನ್ನಿತರರು ಇದ್ದರು.

ವಿಸ್ಮಯ ನ್ಯೂಸ್,  ಸಿದ್ದಾಪುರ

Share

Don't Miss

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ...

ಭಟ್ಕಳದಲ್ಲಿ ಪುನೀತ್ ರಾಜಕುಮಾರ್ ಜನ್ಮದಿನ ಅರ್ಥಪೂರ್ಣವಾಗಿ ಆಚರಣೆ: 80ಕ್ಕೂ ಹೆಚ್ಚು ಜನರಿಂದ ರಕ್ತದಾನ

ಭಟ್ಕಳ: ಪುನಿತ್ ರಾಜಕುಮಾರು ಬದುಕಿದ ರೀತಿ ನಿಜಕ್ಕೂ ಎಲ್ಲರಿಗೂ ಆದರ್ಶಪ್ರಾಯ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳು ಅದರಲ್ಲೂ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ಗೊತ್ತಾಗದಂತೆ ಅದನ್ನು ನಿಭಾಯಿಸಿದ ರೀತಿ ನಿಜಕ್ಕೂ ಅನನ್ಯ. ಇಂತಹ...

ಸಿಐಡಿ ಡಿವೈಎಸ್ಪಿಯಾಗಿ ಎಚ್ ಜಯರಾಜಗೆ ಪದೋನ್ನತಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ಜನರ ನಡುವೆ ಬೆರೆಯುವ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡು ಸಮಾಜಘಾತುಕ...

ವಿಶ್ವಜಲ ದಿನ ಆಚರಣೆ: ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ

ಹೊನ್ನಾವರ: ವಿಶ್ವ ಜಲ ದಿನ” ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ...

ಜನಸಾಮಾನ್ಯರ ಆರ್ಥಿಕ ಮಟ್ಟ ಏರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ: ಜಿಲ್ಲಾಧ್ಯಕ್ಷ ಸಾಯಿ ಗಾವಂಕರ್

ಭಟ್ಕಳ: ಕಾಂಗ್ರೇಸ್ ಪಕ್ಷ ಕೇವಲ ಚುನಾವಣೆ ಗೆಲ್ಲುವ ಉದ್ದೇಶದಿಂದ ಗ್ಯಾರಂಟಿ ಯೋಜನೆಯನ್ನು ಹೊರತರಲಿಲ್ಲ. ಬದಲಾಗಿ ಜನಸಾಮಾನ್ಯರ ಆರ್ಥಿಕ ಮಟ್ಟವನ್ನು ಏರಿಸುವ ನಿಟ್ಟಿನಲ್ಲಿ ಹಾಗೂ ಜನರಲ್ಲಿ ಕೊಳ್ಳುವಿಕೆಯ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಚೈತನ್ಯಕ್ಕೆ...

ಶಿರೂರು ಗುಡ್ಡ ಕುಸಿತ ದುರಂತ : ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ಧ ಪ್ರಣವಾನಂದ ಸ್ವಾಮೀಜಿ

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ...

Related Articles

ಪ್ರತಿಭೆಗಳು ಶಿಕ್ಷಣ ಜೊತೆಗೆ ಸಂಸ್ಕಾರವoತರಾಗಬೇಕು: ನಿಶ್ಚಲಾನಂದನಾಥ ಸ್ವಾಮೀಜಿ

ಕುಮಟಾ: ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಹಕ್ಕು. ಅದಕ್ಕೆ ನೀರೆರೆದು ಪ್ರೋತ್ಸಾಹಿಸುವುದು ಪಾಲಕರ ಕರ್ತವ್ಯ. ಶೈಕ್ಷಣಿಕ...

ಸಂಗೀತ ತಾಳ ವಾದ್ಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ

ಸಿದ್ದಾಪುರ: ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದವರು ನಡೆಸಿದ ಸಂಗೀತ ತಾಳ ವಾದ್ಯ ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕಿನ...

ಪ್ಲಾಸ್ಟಿಕ್ ವಸ್ತು ಬಳಕೆ: ದಂಡ ವಿಧಿಸಿ ಎಚ್ಚರಿಕೆ

ದಾಂಡೇಲಿ; ಕೇಂದ್ರ ಮತ್ತು ರಾಜ್ಯ ಸರ್ಕಾರವು ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದ್ದರೂ ಸಹ ಕೆಲವು ಕಡೆಗಳಲ್ಲಿ...

ಪ್ರಗತಿ ವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡ “ವಿಜ್ಞಾನ ದಿನ”

ಕುಮಟಾ: ಭಾರತದ ಶ್ರೇಷ್ಠ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರ ನೊಬೆಲ್ ಪುರಸ್ಕಾರ ಪಡೆದಂತ...