ಅಂಕೋಲಾ: ತಾಲೂಕಿನ ಶೆಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು ಮೃತ ಯುವಕನನ್ನು ಸ್ಥಳೀಯ ಗ್ರಾಪಂ ವ್ಯಾಪ್ತಿಯ ಹಡವ ನಿವಾಸಿ ಸುಧೀರ ರಾಮಾ ಗೌಡ (33) ಎಂದು ಗುರುತಿಸಲಾಗಿದ್ದು ಈತ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಪೇಂಟ್ಅಂ ಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಈತ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಶೆಟಗೇರಿಯ ಚಿಪ್ಪಿ ಪ್ಯಾಕ್ಟರಿ ಹತ್ತಿರ ಅರಣ್ಯ ಪ್ರದೇಶದಲ್ಲಿ ಗೇರು ಗಿಡಕ್ಕೆ
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮೃತನ ಸಹೋದರ ಈ ಕುರಿತು ದೂರು ದಾಖಲಿಸಿದ್ದಾನೆ.
ಘಟನಾ ಸ್ಥಳದಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತ ಕನಸಿ ಗದ್ದೆಯ ಬೊಮ್ಮಯ್ಯ ನಾಯ್ಕ ಸಹಕರಿಸಿದರು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತಾನು ಕೆಲಸ ಮಾಡುತ್ತಿದ್ದ ಪೇಂಟ್ ಅಂಗಡಿಯಲ್ಲಿ ತನ್ನ ಉತ್ತಮ ಗುಣ ನಡತೆ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದ ಇದ್ದ ಅದಾವುದೋ ಕಾರಣದಿಂದ ಎಲ್ಲರನ್ನು ಬಿಟ್ಟು ಹೋಗುವಂತಾಗಿರುವುದು ಕುಟುಂಬ ವರ್ಗದಲ್ಲಿ, ಊರಿನಲ್ಲಿ ಶೋಕದ ವಾತಾವರಣ ಮೂಡಿಸಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ