ಅಂಕೋಲಾ : ತಾಲೂಕಿನ ಹಾಗೂ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಹಿಮಾಲಯ ಶಿಕ್ಷಣ ಸಂಸ್ಥೆಯ ಹಿಮಾಲಯ ಬಿಸಿಎ ಕಾಲೇಜು ಅಂಕೋಲಾ ಮತ್ತು ಕರಿಯರ್ ಸ್ಪಾರ್ಕ್ ಎಜು ಸಲ್ಯೂಷನ್ & ಟೆಕ್ನಾಲಜಿಸ್ ಹಾಗೂ ವನಮಾಲ ಫೌಂಡೇಶನ್ ಮೈಸೂರು ಇವರ ಸಹಯೋಗದಲ್ಲಿ ಸಂವಹನ ಕೌಶಲ್ಯ ಮತ್ತು ಉದ್ಯೋಗಕ್ಕೆ ದಾರಿ ತೋರಿಸುವ ಕಾರ್ಯಕ್ರಮವನ್ನು ಡಾ ಪ್ರಸಾದ್ ಎಸ್. ಎಂ. ಉದ್ಘಾಟಿಸಿ ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಅಗತ್ಯಇಷ್ಟಪಟ್ಟು ಆಯ್ಕೆ ಮಾಡಿ ಕಷ್ಟಪಟ್ಟು ಓದಬೇಕು ಉದ್ಯೋಗ ಹುಡುಕಬೇಕಾದರೆ ವ್ಯವಹಾರಿಕ ಜ್ಞಾನ ಅಗತ್ಯ ಎಂದರು ಉದ್ಯೋಗಕ್ಕೆ ಸಂಬಂಧಪಟ್ಟ ಅಗತ್ಯ ಮಾಹಿತಿಗಳನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಾಲೆಯ ಪ್ರಾಂಶುಪಾಲೆ ಸವಿತಾ ಕಾನೋಜಿ ಸಂವಹನ ಎನ್ನುವುದು ನಮ್ಮ ನಡತೆಗಳನ್ನು ಬದಲಿಸಬಹುದು ಉದ್ಯೋಗವನ್ನು ಪಡೆಯಲು ಸದೃಢ ಮಾನಸಿಕ ಸ್ಥಿತಿಯ ಅಗತ್ಯವಿದೆ ಎಂದರು ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಎಂ ಐ ಮಹಾಲೆಯವರು ಅಂಕಗಳ ಜೊತೆಗೆ ಕೌಶಲ್ಯ ಅಗತ್ಯ ಭವಿಷ್ಯವನ್ನು ಸವಾಲಾಗಿ ತೆಗೆದುಕೊಂಡು ಜೀವನ ರೂಪಿಸಿಕೊಳ್ಳಬೇಕು ಗತಿಸಿ ಹೋದ ಸಮಯ ಮತ್ತೆ ಬಾರದು ಎಂದರು ಜ್ಯೋತಿ ಸಂಗಡಿಗರು ಸ್ವಾಗತ ಗೀತೆ ಹಾಡಿದರು ಆರ್ಯನ್ ಸರ್ವರನ್ನು ಸ್ವಾಗತಿಸಿದನು ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದಳು ರುಮಾನಾ ವಂದಿಸಿದಳು ವಿದ್ಯಾರ್ಥಿಗಳು ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ