ಕುಮಟಾ: ತಾಲೂಕಿನ ಕೋನಳ್ಳಿಯ ವನದುರ್ಗಾ ಸಭಾಭವನದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳು ಜುಲೈ 10 ರಂದು ಚಾತುರ್ಮಾಸ್ಯ ವ್ರತಾಚರಣೆಗೆ ಕುಳಿತಿದ್ದು, ಈಗಾಗಲೇ 41 ದಿನಗಳ ವ್ರತಾಚರಣೆ ಕಳೆದಿದ್ದು, ಆಗಸ್ಟ್ 20ರಂದು ಈ ವ್ರತಾಚರಣೆಯ ಸಿಮೋಲ್ಲಂಘನ ಕಾರ್ಯಕ್ರಮ ದೀವಗಿಯ ಅಘನಾಶಿನಿ ನದಿಯ ತಟದಲ್ಲಿ ನಡೆಯಿತು. ಕೋನಳ್ಳಿಯ ವನದುರ್ಗಾ ಸಭಾಭವನದಿಂದ ಸುಮಾರು 300 ಕ್ಕೂ ಅಧಿಕ ಭಕ್ತವೃಂದೊoದಿಗೆ ಭವ್ಯ ಮೆರವಣಿಗೆ ಆರಂಭಾಯಿತು.
ಎಮ್ಮೆ ಹತ್ಯೆ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಶ್ರೀಗಳು ಹಾಗೂ ಪಂಚದಶನಾಮ ಜುನಾಅಖಾಡ ನಿಕಟ ಪೂರ್ವ ಮಹಾಮಂತ್ರಿ ಹರಿದ್ವಾರದ ಶ್ರೀ ದೇವಾನಂದ ಸರಸ್ವತಿ ಮಹಾರಾಜ್ ಅವರು ಕುಮಟಾ ಗಿಬ್ ಸರ್ಕಲ್ ಮಾರ್ಗವಾಗಿ ದೀವಗಿಯ ಕೆಳಗಿನ ಕೇರಿಯ ಅಘನಾಶಿನಿ ನದಿತಟವನ್ನು ತಲುಪಿದರು. ನದೀ ತೀರದ ಪ್ರದೇಶದಲ್ಲಿ ಅಘನಾಶಿನಿ ನದಿಗೆ ಬಾಗೀನ ಅರ್ಪಿಸಿ ಪೂಜೆ ಸಲ್ಲಿಸಿದ ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಯ ಸಿಮೋಲ್ಲಂಘನ ಕಾರ್ಯಕ್ರಮವನ್ನು ನೆರವೇರಿಸಿದರು.
ನಂತರ ನದಿ ತೀರದಿಂದ ದಿವಗಿಯ ಶ್ರೀ ರಮಾನಂದ ಸ್ವಾಮಿಗಳ ಮಠಕ್ಕೆ ಆಗಮಿಸಿದರು. ಮಠಕ್ಕೆ ಆಗಮಿಸಿದ ಶ್ರೀಗಳಿಗೆ ಭವ್ಯ ಸ್ವಾಗತ ಕೋರಲಾಯಿತು. ನಂತರ ಮಠದಲ್ಲಿರುವ ಆಂಜನೇಯನಿಗೆ ಪೂಜೆ ಸಲ್ಲಿಸಿ ಪ್ರಸಾದವನ್ನು ಶ್ರೀಗಳು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಟದ ವತಿಯಿಂದ ಉಭಯ ಶ್ರೀಗಳಿಗೆ ಕುಮಟಾದ ಖ್ಯಾತ ವೈದ್ಯರು ಹಾಗೂ ಬಿಜೆಪಿ ಮುಖಂಡರಾದ ಡಾ. ಜಿ.ಜಿ. ಹೆಗಡೆ ಅವರು ಗೌರವಪೂರ್ವಕವಾಗಿ ಸನ್ಮಾನಿಸಿ ಫಲ ಪುಷ್ಪ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ನಂತರ ಶ್ರೀಗಳು ಮಠದ ಗುರುಗಳಾಗಿದ್ದ ಶ್ರೀ ರಮಾನಂದ ಸ್ವಾಮಿಗಳ ಸಮಾಧಿಯ ದರ್ಶನ ಪಡೆದರು. ನಂತರ ಸ್ವಾಮೀಜಿಗಳು ಪುನಃ ಕೋನಳ್ಳಿಗೆ ವಾಪಾಸ್ಸಾಗಿ ವನದುರ್ಗಾ ಸಭಾಭವನದಲ್ಲಿ ಧರ್ಮಸಭೆ ನಡೆಸಿದರು.
ಧರ್ಮಸಭೆಯ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸತೀಶ ನಾಯ್ಕ, ಉದ್ಯಮಿಗಳಾದ ಮುರುಳೀಧರ ಪ್ರಭು, ಕಾಂಗ್ರೆಸ್ ಮುಖಂಡರಾದ ಮಂಜುನಾಥ ನಾಯ್ಕ, ರತ್ನಾಕರ ನಾಯ್ಕ, ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಹೊನ್ನಾವರ ನಾಮಧಾರಿ ಅಧ್ಯಕ್ಷ ಟಿ.ಟಿ. ನಾಯ್ಕ, ಪ್ರಮುಖರಾದ ಎಚ್.ಆರ್. ನಾಯ್ಕ ಕೋನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ