ಕುಮಟಾ: ತಾಲೂಕಾ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ ಮಾತನಾಡಿ ನಾವು ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿದ್ದೇವೆ.
ಜಾತಿಗಣತಿ ಮುನ್ನಲೆ ಮತ್ತು ಹಿನ್ನೆಲೆ ಕುರಿತಂತೆ ಓಬಿಸಿ ವರ್ಗಗಳ ಸಮಾವೇಶವನ್ನು ಮಾಡಬೇಕೆಂದು ಈಗಾಗಲೇ ನಿಶ್ಚಯಿಸಿರುವ ಹಿನ್ನೆಲೆಯಲ್ಲಿ ಇದೇ ಬರುವ ಅಗಷ್ಟ್ 17 ರಂದು ಕಾರವಾರದಲ್ಲಿ ನಮ್ಮ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಕೇವಲ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೇ ಎಲ್ಲಾ ಓಬಿಸಿ ವರ್ಗಗಳ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಮ್ಮ ಪಕ್ಷದ ಕಾರ್ಯಕರ್ತರು ನೀಡಿಕೊಳ್ಳಬೇಕದ ಜವಾಬ್ದಾರಿ ಇದೆ. ಬೇರೇ ಬೇರೇ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನೇಕ ಹಿರಿಯರನ್ನು ಭೇಟಿ ಮಾಡಿ ಜಾತಿ ಜನಗಣತಿಯ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.
ಕಾರ್ಯಕಾರಿಣಿ ಸಭೆಯ ನಂತರ ಕುಮಟಾ ಪಟ್ಟಣದ ಹೆಗಡೆ ಕ್ರಾಸ್ ಸಮೀಪದಲ್ಲಿರುವ ನಾದಶ್ರೀ ಕಲಾ ಕೇಂದ್ರದಿAದ ಬಿಜೆಪಿ ಮೋರ್ಚಾ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಮತ್ತು ಆಪರೇಷನ್ ಮಹದೇವ್ ಯಶಸ್ವಿಗಾಗಿ ವೀರ ಯೋಧರಿಗೆ ನಮನ ಹಾಗೂ 79ನೇ ಸ್ವಾತಂತ್ರ‍್ಯ ದಿನದ ಅಂಗವಾಗಿ ತಿರಂಗಾ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 60 ಕ್ಕೂ ಅಧಿಕ ಬೈಕ್ ಗಳ ಮೂಲಕ ರ‍್ಯಾಲಿ ಪ್ರಾರಂಭವಾಗಿ ಕುಮಟಾ ಪಟ್ಟಣದ ಮಹಾಸತಿ ಸರ್ಕಲ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣದ ಮೂಲಕ ಮೂರುಕಟ್ಟೆ, ರಥ ಬೀದಿ ಮರ್ಗವಾಗಿ ಗಿಬ್ ಸರ್ಕಲ್ ಮೂಲಕ ಪುನಃ ನಾದಶ್ರೀ ಕಲಾಕೇಂದ್ರಕ್ಕೆ ಬರುವುದರ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡಿ ಪ್ರತೀ ವರ್ಷವೂ ಭಾರತೀಯ ಜನತಾ ಪಾರ್ಟಿ ಅಗಷ್ಟ್ 15 ರ ಪೂರ್ವದಲ್ಲಿ ಹರ ಘರ್ ತಿರಂಗಾ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬಂದಿರುತ್ತದೆ. ಈ ವರ್ಷವೂ ಸಹ ನಮ್ಮ ಬಿಜೆಪಿ ಮೋರ್ಚಾ ನೇತೃತ್ವದಲ್ಲಿ ಬೈಕ್ ರ‍್ಯಾಲಿಯನ್ನು ಮಾಡಿ ಜನ ಜಾಗೃತಿ ಮೂಡಿಸಲಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಗಳಿಸುವುದಕ್ಕೆ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರು ಗಳಿಸಿಕೊಟ್ಟ ಸ್ವಾತಂತ್ರ್ಯ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಜಿ. ಆಯ್. ಹೆಗಡೆ, ಬಿಜೆಪಿ ಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಎಮ್. ಜಿ. ಭಟ್, ಪುರಸಭಾ ಅಧ್ಯಕ್ಷೆ ಸುಮತಿ ಭಟ್, ಪ್ರಮುಖರಾದ ಗಜಾನನ ಗುನಗಾ, ಡಾ, ಜಿ.ಜಿ. ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ್ ಸೇರಿದಂತೆ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ…