ಸಿದ್ದಾಪುರ: ಶ್ರೀ ಸಂಸ್ಥಾನ ತರಳಿಮಠದಲ್ಲಿ ನೂತನ ವಾಗಿ ನಿರ್ಮಾಣ ಗೊಂಡ ಶಿವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಸಾರಂಗನ ಜಡ್ಡು ಕಾರ್ತಿಕೇಯ ಪೀಠದ ಶ್ರೀಗಳಾದ ಯೋಗೇಂದ್ರ ಸ್ವಾಮೀಜಿ ಅವರು ತರಳಿ ಮಠದ ಟ್ರಸ್ಟ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿದ ಯೋಗೇಂದ್ರ ಸ್ವಾಮೀಜಿ ಅವರು ಮಠ ಎಂದರೆ ಒಂದು ಜಂಕ್ಷನ್ ಎಲ್ಲರೂ ಸೇರುವ ಜಾಗ, ಈ ಜಾಗದಲ್ಲಿ ಎಲ್ಲರೂ ಸೇರಿ ಸಮಾಜದ ಒಳತಿಗೆ ಇಲ್ಲಿ ಕುಳಿತು ಚರ್ಚಿಸುವಂತೆ ಆಗಬೇಕು ಆ ಮೂಲಕ ಸಮಾಜದ ಅಭಿವೃದ್ಧಿ ಆಗಬೇಕು, ಮಠಗಳು ಮಾನಸಿಕ ನೆಮ್ಮದಿ ನೀಡುತ್ತವೆ, ತಾಲೂಕಿನಲ್ಲಿ ನಮಗೆ ಅವಶ್ಯಕತೆ ಇರುವ ಮಠ ಲೋಕಾರ್ಪಣೆಗೊಂಡಿದೆ ಇಲ್ಲಿ ಇನ್ನು ಮುಂದಿನ ದಿನದಲ್ಲಿ ನಾವು ಯಾರಿಗೂ ಎದೆ ಗುಂದದೆ ಎಲ್ಲರೂ ಒಟ್ಟಾಗಿ ಬದುಕು ಕಟ್ಟಿಕೊಳ್ಳೋಣ ಎಂದು ಆಶೀರ್ವಚನ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಸಿಗಂದೂರು ಕ್ಷೇತ್ರದ ಧರ್ಮದರ್ಶಿಗಳಾದ ರಾಮಪ್ಪನವರು ಮಾತನಾಡಿ ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ, ದೇವಾಲಯ ಮಠ ಮಂದಿರ ಗಳಿಂದ ನಾವು ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಕಲಿತುಕೊಳ್ಳಬಹುದು ಶಿಕ್ಷಣವನ್ನು ಪಡೆಯಬಹುದು ಆ ಮೂಲಕ ಸಮಾಜದ ಅಭಿವೃದ್ಧಿ ಪಡಿಸಬಹುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಗರ ಕ್ಷೇತ್ರದ ಶಾಸಕ ಬೇಲೂರು ಗೋಪಾಲಕೃಷ್ಣ ಹಾಗೂ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ವಕೀಲರಾದ ಎ ಕೆ ವಸಂತ, ಜಿ.ಟಿ ನಾಯ್ಕ್, ಪ್ರಮುಖರಾದ ಎಚ್ ಆರ್ ಸತೀಶ್ ಮಾತನಾಡಿ ಶಿಕ್ಷಣದತ್ತ ನಾವು ಗಮನ ನೀಡಿ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು, ಆ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಲ್ಲರೂ ತಮ್ಮ ಕೈಲಾದ ಸಹಾಯ ಸಹಕಾರ ನೀಡಬೇಕು ಒಂದಾಗಿ ಒಗ್ಗಟ್ಟಾಗಿ ಸಮಾಜವನ್ನು ಬೆಳೆಸಲು ಮುಂದಾಗಬೇಕು ಇಂದು ನಾವು ಕೊಟ್ಟ ದಾನ ಮುಂದಿನ ತಲೆಮಾರಿನವರಿಗೆ ಆಸರೆ ಆಗುತ್ತದೆ ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಗುರುಗಳ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು. ಇದೇ ವೇಳೆ ಮಾಜಿ ಸ್ಪೀಕರ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ