ಅರಣ್ಯಕ್ಕೆ ಓಡಿ ಕಾಣೆಯಾದ ವ್ಯಕ್ತಿ
ಬನವಾಸಿ: ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅರಣ್ಯದೊಳಗೆ ಓಡಿಹೋಗಿ ಕಾಣೆಯಾದ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ತಾಲೂಕಿನ ಎಸಳೆಯ ಸಂತೋಷ ಮಂಜಾ ನಾಪತ್ತೆಯಾದ ವ್ಯಕ್ತಿ.

ಈತನನ್ನು ಆಸ್ಪತ್ರೆಗೆ ಓಮಿನಿಯಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಮರೆಗುಡ್ಡಿ ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲಿ ದೊಡ್ಡ ಗುಂಡಿ ಇದ್ದಿದ್ದರಿಂದ ಓಮಿನಿಯ ವೇಗವನ್ನು ಕಡಿಮೆ ಮಾಡಿದಾಗ, ವಾಹನದ ಬಾಗಿಲನ್ನು ತೆಗೆದು ಅಲ್ಲೆ ಇದ್ದ ಅರಣ್ಯ ಪ್ರದೇಶದೊಳಗೆ ಓಡಿ ಹೋಗಿ ಕಾಣೆಯಾಗಿದ್ದಾನೆ. ಈತ ಎಲ್ಲಿಯಾದರೂ ಪತ್ತೆಯಾದಲ್ಲಿ ಬನವಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಧರೆಗೆ ಗುದ್ದಿದ ಬಸ್: ಕೆಲ ಪ್ರಯಾಣಿಕರಿಗೆ ಗಾಯ
ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ಸೊಂದು ಧರೆಗೆ ಗುದ್ದಿದ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಸಾಗರದಿಂದ ಶಿರಸಿ ಕಡೆ ತೆರಳಿತ್ತಿದ್ದ ಸಾಗರ ಸಾರಿಗೆ ಘಟಕದ ಬಸ್ಸೊಂದು ಸ್ಟೇರಿಂಗ್ ತುಂಡಾಗಿ ಚಾಲನ ನಿಯಂತ್ರಣ ತಪ್ಪಿ ಶಿರಸಿ-ಸಿದ್ದಾಪುರ ರಸ್ತೆಯ ಜಾಗನಳ್ಳಿ, ಅಜ್ಜಿಬಳ ಮಧ್ಯದಲ್ಲಿ ಧರೆಗೆ ಗುದ್ದಿದೆ.

ಅಪಘಾತದ ರಭಸಕ್ಕೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕಾಲುಜಾರಿ ಜಲಪಾತಕ್ಕೆ ಬಿದ್ದು ಓರ್ವ ನೀರುಪಾಲು
ಶಿರಸಿ: ಬೆಣ್ಣೆ ಹೊಳೆ ಜಲಪಾತದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು , ಓರ್ವ ವಿದ್ಯಾರ್ಥಿ ನೀರುಪಾಲಾದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶಿರಸಿಯ ಅರಣ್ಯ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ರವಿವಾರ ರಜೆ ಇರುವುದರಿಂದ ಬೆಣ್ಣೆಹೊಳೆ ಜಲಪಾತ ವೀಕ್ಷಣೆಗೆ ತೆರಳಿದ್ದರು.

ಕಾಲು ತೊಳೆಯಲು ಇಬ್ಬರು ವಿದ್ಯಾರ್ಥಿಗಳು ನೀರಿಗೆ ಇಳಿದಾಗ ನೀರಿನ ರಭಸಕ್ಕೆ ರಾಹುಲ್ ಕೊಚ್ಚಿ ಹೋದರೆ , ಶ್ರೀನಿವಾಸ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ತೀವ್ರ ಅಸ್ವಸ್ಥಗೊಂಡ ಶ್ರೀನಿವಾಸನನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿ, ಚಿಕಿತ್ಸೆ ನೀಡಲಾಗುತ್ತಿದೆ. ರಾಹುಲ್ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: ಉತ್ತರಕನ್ನಡದ ಸುದ್ದಿಗಳು
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್