ಗೋಕರ್ಣ: ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ, ಪೊಲೀಸರ ಸಹಕಾರದೊಂದಿಗೆ ಸ್ಥಳೀಯ ಆಡಳಿತ ಸುಮಾರು 500 ಮೀಟರ್ ಅಂತರದಲ್ಲಿ ಇತ್ತೀಚೆಗೆ ಬೇಲಿ ಅಳವಡಿಸಿದೆ. ಮಳೆಗಾಲದ 2 ತಿಂಗಳು ಸಮುದ್ರದಲ್ಲಿ ನಿಷೇಧವಿರುವ ಕಾರಣ ಪ್ರವಾಸಿಗರು ಒಮ್ಮೆಲೇ ನೀರಿಗೆ ಇಳಿಯಬಾರದು.
ಸಮುದ್ರ ಪ್ರಕ್ಷುಬ್ಧವಾಗಿದ್ದು, ಪ್ರವಾಸಿಗರು ಸ್ನಾನಕ್ಕೆ ಇಳಿದು ಅವಘಡ ಸಂಭವಿಸಬಾರದು ಎಂಬ ಕಾರಣಕ್ಕೆ ಗ್ರಾಮ ಪಂಚಾಯತ ಸಿಮೆಂಟ್ ಕಂಬ ಅಳವಡಿಸಿ ಅದಕ್ಕೆ ತಂತಿ ಬಲೆಯನ್ನು ಹಾಕಿದೆ. ಧಾರ್ಮಿಕ ಆಚರಣೆಗೆ ಸಮುದ್ರಕ್ಕೆ ಹೋಗಲು ರಸ್ತೆ ಬಿಡಲಾಗಿದೆ. ಪ್ರವಾಸಿಗರು ಬೇಲಿಯನ್ನು ನೋಡಿಯಾದರೂ ಸ್ವಲ್ಪ ಎಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್, ಗೋಕರ್ಣ