ಸಿದ್ದಾಪುರ: ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದವರು ನಡೆಸಿದ ಸಂಗೀತ ತಾಳ ವಾದ್ಯ ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕಿನ ರೇಖಾ ಗಂಗಾಧರ ಹೆಗಡೆ ಇವರು, ಶಿರಸಿ ಕೇಂದ್ರಕ್ಕೆ ಶೇಕಡಾ 86 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆಯ ಈ ಸಾಧನೆಗೆ ಸಂಗೀತ ಗುರುಗಳಾದ ವಿದುಷಿ ಸ್ಮಿತಾ ಹೆಗಡೆ , ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಾಲಕಪೋಷಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ