ಕುಮಟಾ: ಭಾರತದ ಶ್ರೇಷ್ಠ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರ ನೊಬೆಲ್ ಪುರಸ್ಕಾರ ಪಡೆದಂತ ರಾಮನ್ ಪರಿಣಾಮದ ಆವಿಷ್ಕಾರವಾದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಆಪ್ರಯುಕ್ತ ಸ್ಥಳೀಯ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಔಚಿತ್ಯಪೂರ್ಣವಾಗಿ ಆಚರಿಸಲಾಯಿತು. ಆ ಪ್ರಯುಕ್ತ ವಿಜ್ಞಾನ ವಸ್ತುಪ್ರದರ್ಶನ, ಪ್ರಯೋಗ, ಮಾದರಿ ತಯಾರಿಕೆ, ರಾಮನ್ ಜೀವನ-ಸಾಧನೆ ಕುರಿತು ಮಕ್ಕಳ ಗಮನ ಸೆಳೆಯಲಾಯಿತು.
ವಸ್ತುಪ್ರದರ್ಶನ ಉದ್ಘಾಟಿಸಿದ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರಾದ ಆಯ್. ಪಿ. ಭಟ್ಟ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನದ ವಿಶೇಷತೆಯನ್ನು ತಿಳಿಸಿ, ಈ ದಿನ ಭಾರತ ಕಂಡ ಶ್ರೇಷ್ಠ ವಿಜ್ಞಾನಿ, ನೊಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್ ಅವರ ರಾಮನ್ ಇಪೆಕ್ಟ್ ಜಗತ್ತಿನಾದ್ಯಂತ ಸಂಚಲನ ಮೂಡಿಸಿ, ಬೆಳಕಿನ ಚದುರುವಿಕೆಯ ಹೊಸ ಸಿದ್ಧಾಂತವನ್ನು ಒಪ್ಪಿಕೊಂಡಿತು. ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ನಿತ್ಯದ ಬದುಕಿನಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಅವರಿಗೆ ಈ ಕಾರ್ಯಕ್ರಮದ ಸದುಪಯೋಗವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಾಧ್ಯಾಪಕರಾದ ವಿವೇಕ ಆಚಾರಿಯವರ ಮಾರ್ಗದರ್ಶನದಲ್ಲಿ ಶಿಕ್ಷಕಿಯರಾದ ತೃಪ್ತಿ ಗುನಗಾ, ಸುಪ್ರೀತಾ ನಾಯ್ಕ. ಭಾವನಾ ಹೆಗಡೆ, ಮಾನಸಾ ಹೆಗಡೆ ಅವರು ವಿದ್ಯಾರ್ಥಿಗಳಿಗೆ, ಬೆಳಕಿನ ಚದುರುವಿಕೆ, ಸಸ್ಯ ಜೀವಕೋಶದ ರಚನೆ ಮತ್ತು ಸೂಕ್ಷ್ಮದರ್ಶಕದ ರಚನೆ, ಎಲೆಕ್ಟ್ರಸಿಟಿ ಮತ್ತು ಸರ್ಕ್ಯೂಟ್, ಮೆಗ್ನೆಟ್ ಗಳ ಬಗ್ಗೆ ವಿವರಿಸಿ, ಸ್ವತಃ ಮಕ್ಕಳು ಪ್ರಯೋಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಪ್ರಯೋಗಶಾಲೆಯಲ್ಲಿ ಸೂಕ್ತ ಮಾರ್ಗದರ್ಶನದಿಂದ ಪ್ರಯೋಗ ಕೈಗೊಂಡ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊoಡರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಜಿ.ಎಂ.ಭಟ್ಟ. ವಿವೇಕ ಆಚಾರಿ.ವಿ.ಎಸ್.ಗೌಡ. ನಾಗವೇಣಿ ಭಟ್ಟ.ಚೈತ್ರಾ ಹೆಗಡೆ, ಸುನಿತಾ ಫರ್ನಾಂಡೀಸ್, ಹರ್ಷಿತಾ ನಾಯ್ಕ, ಮಹಾಲಕ್ಷ್ಮಿ ಗೌಡ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಕುಮಟಾ