ಕಾರವಾರ: ಜಿಲ್ಲೆಯಲ್ಲಿ ನಡೆಯುವ ಶಿವರಾತ್ರಿ ಹಬ್ಬದ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ಕನ್ನಡ ವಿಭಾಗ ವ್ಯಾಪ್ತಿಯಲ್ಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಉತ್ತರ ಕನ್ನಡ ವಿಭಾಗದಿಂದ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ಶಿರಸಿ ಹಳೆ ಬಸ್ ನಿಲ್ದಾಣದಿಂದ ಸಹಸ್ರಲಿಂಗ, ಯಾಣ, ಬನವಾಸಿ, ಗೋಕರ್ಣಕ್ಕೆ ಬೆಳಿಗ್ಗೆ 6 ಗಂಟೆಯಿoದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಲಾಗುವುದು. ಕುಮಟಾದಿಂದ ಗೋಕರ್ಣ ಮತ್ತು ಯಾಣಕ್ಕೆ ಮುಂಜಾನೆ 6 ಗಂಟೆಯಿoದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ನೀಡಲಾಗುವುದು.
ಅಂಕೋಲಾದಿoದ ಗೋಕರ್ಣಕ್ಕೆ ಬೆಳಿಗ್ಗೆ 6 ಗಂಟೆಯಿoದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಬಸ್ ಗಳನ್ನು ಬಿಡಲಾಗುವುದು. ಭಟ್ಕಳದಿಂದ ಮತ್ತು ಹೊನ್ನಾವರದಿಂದ ಮುರ್ಡೇಶ್ವರಕ್ಕೆ ಬೆಳಿಗ್ಗೆ 6 ಗಂಟೆಯಿoದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಲಾಗುವುದು. ಯಲ್ಲಾಪುರದಿಂದ ಇಡಗುಂದಿಗೆ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಈ ವಿಶೇಷ ಸಾರಿಗೆ ಕಾರ್ಯಾಚರಣೆಯ ಉಪಯೋಗವನ್ನು ಪಡೆದುಕೊಳ್ಳಲು ಹಾಗೂ ಭಕ್ತಾಧಿಗಳು ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್