Important

ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶೀ ಮೇಳ: ಅಕ್ಟೋಬರ್ 7, 8,9 ರಂದು ಆಯೋಜನೆ

Share
  • ಖಾದಿ ವಸ್ತುಗಳು, ಸಾವಯವ ಉತ್ಪನ್ನಗಳು
  • ನೈಸರ್ಗಿಕ ಸೌಂದರ್ಯ ವರ್ಧಕಗಳು
  • ಇಳಕಲ್ ಸೀರೆಗಳು, ಒನ್ ಗ್ರಾಂ ಗೋಲ್ಡ್ ಆಭರಣಗಳು
  • ಹ್ಯಾಂಡ್ ಮೇಡ್ ಬ್ರೌಸ್‌ಗಳು, ಫ್ಯಾನ್ಸಿ ಡ್ರೆಸ್‌ಗಳು
  • ಹಪ್ಪಳ, ಸಂಡಿಗೆ, ಹೋಮ್ ಮೇಡ್ ಉಪ್ಪಿನಕಾಯಿಗಳು
  • ಆದಿವಾಸಿ ಹರ್ಬಲ್ ಹೇರ್ ಆಯಿಲ್ ಮತ್ತು ಕಾಂಡಿಮೆಂಟ್ಸ್

ಅಂಕೋಲಾ : ರಾಘವೇಂದ್ರ ಇವೆಂಟ್ಸ್ ಅಂಕೋಲಾ ಹಾಗೂ ಬೆನಕ ಇವೆಂಟ್ಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ 7, 8 ಹಾಗೂ 9 ರಂದು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಭಾಸ್ಕರ ಪೂಜಾರಿ ಹೇಳಿದರು.

ಸಾರ್ವಜನಿಕರಿಗೆ ಉಚಿತ ಪ್ರವೇಶ

ಅವರು ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ಸ್ವದೇಶೀ ಆಹಾರ ಮತ್ತು ಸ್ವದೇಶೀ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಿದ್ದು ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ಮೇಳದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.

ಆಹಾರ ಮೇಳದ ಆಕರ್ಷಣೆಗಳು

  • ದೇಶೀಯ ಮತ್ತು ಆಯುರ್ವೇದ ಆಹಾರ ಪದಾರ್ಥಗಳು
  • ನ್ಯಾಚುರಲ್ ಮಟ್ಕಾ ಕುಲ್ಫಿ, ಸ್ಪೆಷಲ್ ಕುಲ್ಪೀಸ್
  • ಉತ್ತರ ಮತ್ತು ದಕ್ಷಿಣ ಭಾರತದ ಸವಿರುಚಿಗಳು
  • ತಾಜಾ ಜಿಲೇಬಿ ಮತ್ತು ಹೋಳಿಗೆ ಸ್ಟಾಲ್‌ಗಳು

ಆಹಾರ ಮೇಳದಲ್ಲಿ ನೈಸರ್ಗಿಕ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು ದೇಶೀಯ ಆಹಾರಗಳು, ನಿತ್ಯ ಬಳಕೆ ವಸ್ತುಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ಆಯುರ್ವೇದ ಉತ್ಪನ್ನಗಳು, ಫ್ಯಾನ್ಸಿ ಸೀರೆಗಳು, ಗೃಹ ಅಲಂಕಾರಿಕ ವಸ್ತುಗಳು, ರೆಡಿಮೆಡ್ ಡ್ರೆಸ್‌ಗಳು, ಹ್ಯಾಂಡ್ ಮೇಡ್ ಬ್ರೌಸ್‌ಗಳು, ಚನ್ನಪಟ್ಟಣದ ಬೊಂಬೆಗಳು, ಇಳಕಲ್ ಸೀರೆಗಳು, ಒನ್ ಗ್ರಾಂ ಗೋಲ್ಡ್ ಜ್ಯುವೆಲರಿ, ಮಕ್ಕಳ ಉಡುಪುಗಳು, ಹಪ್ಪಳ, ಸಂಡಿಗೆ, ಆದಿವಾಸಿ ಹರ್ಬಲ್ ಹೇರ್ ಆಯಿಲ್ಸ್, ಹೋಮ್ ಮೇಡ್ ಕಾಂಡಿಮೆಂಡ್ಸ್, ಉಪ್ಪಿನಕಾಯಿಗಳು, ನ್ಯಾಚುರಲ್ ಮಟ್ಕಾ ಕುಲ್ಫಿ ಮತ್ತು ಸ್ಪೇಷಲ್ ಕುಲ್ಪೀಸ್, ಉತ್ತರ ಮತ್ತು ದಕ್ಷಿಣ ಭಾರತದ ಆಹಾರಗಳು ಇನ್ನೂ ಹತ್ತು ಹಲವು ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದ್ದು ತಾಜಾ ಜಿಲೇಬಿ ಮತ್ತು ಹೋಳಿಗೆ ಸ್ಟಾಲುಗಳೂ ಇರಲಿವೆ.

ಸ್ವದೇಶೀ ಉತ್ಪನ್ನಗಳನ್ನು ಖರೀದಿಸಿ : ಸ್ಥಳೀಯ ಉದ್ಯಮಕ್ಕೆ ಪ್ರೋತ್ಸಾಹ ನೀಡಿ

ವಿಶೇಷ ಆಕರ್ಷಣೆಯಾಗಿ ಹಲಸು ಮತ್ತು ಮಾವಿನ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಗೆಡ್ಡೆಗಳು ತರಕಾರಿ ಬೀಜಗಳು ಇನ್ನೂ ಅನೇಕ ಕೃಷಿ ಪದಾರ್ಥಗಳೂ ಸಿಗಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸುವಂತೆ ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗಣೇಶ ಗುನಗಾ ಮಂಜುನಾಥ ಕಾಮತ, ಅಭಿಷೇಕ ಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಸ್ಪದೇಶಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯನ್ನು ಪ್ರೋತ್ಸಾಹಿಸಿಲು ತಪ್ಪದೇ ತಾವು ಭಾಗವಹಿಸಿ. ಇತರರಿಗೂ ವಿಷಯ ತಿಳಿಸಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಸರ್ಚ್ ವಾರೆಂಟ್ ಮೇಲೆ ಬಂದ ಲೋಕಾಯುಕ್ತರ ತಂಡ : ಯಾಕೆ ನೋಡಿ?

ಅಂಕೋಲಾ‌ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು ಏಜೆಂಟರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು...

ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ ವಾರ್ಷಿಕ ಸರ್ವ ಸಾಧಾರಣ

ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ 2024-25 ಸಾಲಿನ 58ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಪಟ್ಟಣದ ನ್ಯೂ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಸೇವಾಪರ್ವ ವಿಕಸಿತ ಭಾರತ ವಿಷಯಾಧಾರಿತ ಪೇಟಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದರ್ಶನ ನಾಯ್ಕ

ಭಟ್ಕಳ: ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವಿಕ್ಷಿತ್ ಭಾರತ್...

ಸಮುದ್ರ ದಡಕ್ಕೆ ಬರುತ್ತಿರುವೆ ರಾಶಿ ರಾಶಿ ಜೀವಂತ ಮೀನುಗಳು: ಮುಗಿಬಿದ್ದು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಸ್ಥಳೀಯರು

ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ...

ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಹೊನ್ನಾವರ ಇದರ ವಾರ್ಷಿಕ ಸರ್ವ ಸಾಧಾರಣ

ಹೊನ್ನಾವರ : ಇಲ್ಲಿನ ಪ್ರತಿಷ್ಠಿತ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ...

ಮಾನವೀಯತೆಯ ದೀಪ ಬೆಳಗಿಸಿದ ನೇತ್ರದಾನಿ ಕೃಷ್ಣ ನಾಯ್ಕ ಅಮರ

ಕುಮಟಾ : ತಾಲೂಕಿನ ಧಾರೇಶ್ವರ ಹೋಬಳಿ ಹರನೀರು ತುದಿಮನೆ ನಿವಾಸಿ ಕೃಷ್ಣ ನಾರಾಯಣ ನಾಯ್ಕ (77...

ಬಸ್ ಗೆ ಡಿಕ್ಕಿ ಹೊಡೆದ ಲಾರಿ : ಸ್ಟೇರಿಂಗ್ ಮಧ್ಯ ಸಿಲುಕಿದ ಲಾರಿ ಚಾಲಕ ಸಾವು: ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ನಿಧನ

ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ...

ಹೃದಯದಾಕಾರದ ಮುಖದ ಗೂಬೆ: ಶಾಲೆಗೆ ಬಂತು ಗುಮ್ಮ

ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ...

ಸುಮಾರು 10 ತಿಂಗಳಿಂದ ಮಗ ಸಂಪರ್ಕಕ್ಕೆ ಸಿಗದೆ ನೊಂದ ತಂದೆ: ಮನೆಯಿಂದ ಮಲ್ಪೆಗೆ ಹೋದ ಮಗನೆಲ್ಲಿ ?

ಅಂಕೋಲಾ: ವ್ಯಕ್ತಿಯೋರ್ವ ಕಾಣೆಯಾಗಿ ಸುಮಾರು ಹತ್ತು ತಿಂಗಳುಗಳ ನಂತರ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕಾ ಘಟಕ ಉದ್ಘಾಟನೆ

ಅಂಕೋಲಾ: ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದ ಪ್ರತಿದಿನದ ಜಾಗತಿಕ ಆಗು ಹೋಗುಗಳ ಜ್ಞಾನವನ್ನು ಅರಿಯಲು ಸಾಧ್ಯವಿದ್ದು,...