ಭಟ್ಕಳ: ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಂಜಾವೂರು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ವಿಕ್ಷಿತ್ ಭಾರತ್ ಕೇ ರಂಗ್ ಕಲಾ ಸಂಗ್ ಅಡಿಬರಹದಡಿ ಹಮ್ಮಿಕೊಂಡ ಸೇವಾ ಪರ್ವ ವಿಕಸಿತ ಭಾರತದ ಕಲ್ಪನೆ ವಿಷಯಾಧಾರಿತ ಪೇಂಟಿಂಗ್ ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ತಾಲೂಕಿನ ಜಾಲಿಯ ದರ್ಶನ ಮಹಾಬಲೇಶ್ವರ ನಾಯ್ಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಭಾರತದಾದ್ಯಂತ 75 ವಿವಿಧ ಕೇಂದ್ರಗಳಲ್ಲಿ ಸೆ. 17 ರಿಂದ ಅ 2 ರವರೆಗೆ ಈ ಸ್ಪರ್ಧಾ ಕಾರ್ಯಕ್ರಮ ನಡೆಸಲಾಗುತ್ತಿದ್ದು. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮಂಗಳೂರಿನ ಎನ್ನಪೋಯಾ ಹೋಮೋಫೆಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ ಸ್ಥಾನ ಪಡೆದಿರುವ ದರ್ಶನ್ ನಾಯ್ಕಗೆ 25 ಸಾವಿರ ರುಪಾಯಿ ಬಹುಮಾನವಾಗಿ ಪಡೆದಿದ್ದಾರೆ.
ಅಂದಹಾಗೇ ಮುಂದೆ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯು ದೆಹಲಿಯಲ್ಲಿ ನಡೆಯಲಿದೆ. ಪ್ರಸ್ತುತ ದರ್ಶನ್ ನಾಯ್ಕ ಬೆಂಗಳೂರಿನಲ್ಲಿ ಬ್ಯಾಚ್ಯುಲರ್ ಆಫ್ ವಿಶುವಲ್ ಆರ್ಟ್ಸ್ ಅಧ್ಯಯನ ಮಾಡುತ್ತಿದ್ದಾನೆ.
ಈಶ್ವರ ನಾಯ್ಕ ವಿಸ್ಮಯಾ ಟಿವಿ ಭಟ್ಕಳ