ಕುಮಟಾ, ಆಗಸ್ಟ್ 26: ಪ್ರತಿಭೆ ಯಾರ ಸೊತ್ತಲ್ಲ. ಅದು ಸಾಧಕನ ಸ್ವತ್ತು ಎನ್ನುವ ಮಾತಿಗೆ ಅನುಗುಣವಾಗಿ ಇರುವವರು ಕುಮಟಾ ತಾಲೂಕಿನ ಗಂಗಾವಳಿಯ ಹೆಮ್ಮೆಯ ಪ್ರತಿಭೆ ಶರತ್ ನಾಯ್ಕ್ ಅವರು ಈಗಾಗಲೇ ಬೃಹತ್ ಗಾತ್ರದ 10 ಹಲವಾರು ಗಣಪತಿ ವಿಗ್ರಹದ ಮೂಲಕ ಜಿಲ್ಲೆಯ ತುಂಬ ಮನೆಮಾತಾದವರು.
ಮಣ್ಣಿನ ವಿಗ್ರಹಗಳಿಗೆ ಹೊಸ ಜೀವ ತುಂಬುತ್ತಿರುವ ಯುವ ಪ್ರತಿಭೆ
ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂ ತಂದೆಯ ಜೀವನಾಡಿಯಾದ ಕಲೆಯನ್ನ ಉಸಿರಾಗಿಸಿಕೊಂಡು ಪ್ರತಿವರ್ಷ ಮಣ್ಣಿನ ಕಲೆಯಲ್ಲಿ ಹೊಸತನವನ್ನು ಹುಡುಕುವ ಹೊಸ ರೀತಿಯ ಸ್ಪರ್ಶ ನೀಡುವ ಇವರ ಮಣ್ಣಿನ ವಿಗ್ರಹದ ಕಲೆ ಇಡೀ ಜಿಲ್ಲೆಯಾದ್ಯಂತ ಜನಜನಿತವಾಗಿದೆ. ಗಣಪತಿ ಮೂರ್ತಿ, ಶಾರದಾ ಮೂರ್ತಿ, ದುರ್ಗಾ ವಿಗ್ರಹ ಹೀಗೆ ಪ್ರತಿಯೊಂದು ವಿಗ್ರಹವನ್ನು ಅತ್ಯಂತ ಕೂಲಂಕಶವಾಗಿ ಗಮನಿಸಿ ಬಣ್ಣಕ್ಕೆ ಮತ್ತು ಕಲೆಗೆ ಹೊಸ ಸ್ಪರ್ಶ ನೀಡುವ ಇವರ ಶಕ್ತಿ ವಿಶಿಷ್ಟವಾದದ್ದು.
ಇದನ್ನೂ ಓದಿ: ಭಟ್ಕಳದಲ್ಲಿ ಬೆಂಕಿ ಅನಾಹುತ
ಇಂತಹ ಮಹಾನ್ ಕಲಾವಿದನಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎನ್ನುವುದು ಶ್ರೀ ಅಯ್ಯಪ್ಪ ಭಕ್ತ ವೃಂದ ಮಾದರಿರಸ್ತೆ ಗೂಡೆ ಅಂಗಡಿ ಕುಮಟಾ ಇವರ ಆಶಯವಾಗಿದೆ. ಇಬಡ ಕಲಾವಿದನನ್ನ ಇನ್ನಷ್ಟು ಗುರುತಿಸಿ ಪ್ರೋತ್ಸಾಹಿಸುವ ಅನಿವಾರ್ಯತೆ ಇದೆ. ಇವರ ಕಲೆ ಇನ್ನಷ್ಟು ಬೆಳಗಲಿ ಎನ್ನುವುದು ಕಲಾಭಿಮಾನಿಗಳ ಬಯಕೆಯಾಗಿದೆ.
ವಿಸ್ಮಯ ನ್ಯೂಸ್, ಕುಮಟಾ