Big News

ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ

Share

ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ ಯಾರೋ ತಂದಿಟ್ಟು ಹೋಗಿದ್ದರೆನ್ನಲಾದ ಸೂಟ್ ಕೇಸ್ ಒಂದು ಪಟ್ಟಣ ವ್ಯಾಪ್ತಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದಲ್ಲದೇ,ಸೂಟ್ಕೇಸ್ ನಲ್ಲಿ ಏನಿರಬಹುದೆಂಬ ಕುತೂಹಲವು ಹಲವರಲ್ಲಿ ಮೂಡುವಂತಾಗಿತ್ತು.

ಅಂಕೋಲಾ ಪಟ್ಟಣ ವ್ಯಾಪ್ತಿಯ ಬಸ್ ನಿಲ್ದಾಣದ ಅತಿ ಹತ್ತಿರದಲ್ಲಿರುವ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ ವಿಭಾಗಕ್ಕೆ ಸಂಬಂಧಿಸಿದ ಕಛೇರಿಯ ಗೋಡೆ ಮತ್ತು ಪಕ್ಕದ ಇನ್ನೊಂದು ಕಟ್ಟಡದ ಗೋಡೆಗಳ ಮಧ್ಯೆ ಇಕ್ಕಟ್ಟಾದ ಸ್ಥಳದಲ್ಲಿ ಅದ್ಯಾರೋ ಎಂದೋ ಇಟ್ಟು ಹೋಗಿದ್ದ ಸೂಟ್ ಕೇಸ್ ನ್ನು ಆಗಸ್ಟ್ 26 ರ ಮಂಗಳವಾರ ಬೆಳಿಗ್ಗೆ ಗಮನಿಸಿದ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಹಾಗಾದರೆ ಈ ಸೂಟ್ ಕೇಸಿನಲ್ಲಿ ಹಣದ ಕಂತೆ ಕಂತೆಗಳಿರಬಹುದೇ? ಬಾಂಬ್ ಮತ್ತಿತರ ಸ್ಪೋಟಕಗಳಿರಬಹುದೇ ? ಅಥವಾ ಇನ್ನೇನಿರಬಹುದು ? ತಂದಿಟ್ಟವರಾರು ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುವಂತಾಗಿ, ಸೂಟಕೇಸ್ ಸುತ್ತ ಅನುಮಾನದ ಹುತ್ತ ಬೆಳೆವಂತಾಗಿ ,ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾ, ಪಟ್ಟಣದಲ್ಲಿ ಕೆಲ ಕಾಲ ಕೆಲವರಲ್ಲಿ ಆತಂಕ ಮೂಡುವಂತಾದರೆ, ಇನ್ನು ಕೆಲವರು ಮುಂದೇನಾಗಬಹುದು ಎಂದು ಕುತೂಹಲದಿಂದ ಕಾದು ಕುಳಿತಂತಿತ್ತು.

ಇದನ್ನೂ ಓದಿ: ಭಟ್ಕಳದಲ್ಲಿ ಬೆಂಕಿ ಅನಾಹುತ

ಕೂಡಲೇ ಸ್ಥಳಕ್ಕೆ ಬಂದ ಅಂಕೋಲಾ ಪೊಲೀಸರು , ಸೂಟ್ ಕೇಸ್ ಇರುವ ಸ್ಥಳ ಪರಿಶೀಲಿಸಿ, ಕಾರವಾರದ ಎ ಎಸ್ ಸಿ ಟೀಮ್ ಗೆ ಕರೆ ಮಾಡಿದ್ದಲ್ಲದೇ , ತನಿಖೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸೂಟಕೇಸ್ ಪತ್ತೆಯಾದ ಸ್ಥಳದ ಸುತ್ತ ಸಾರ್ವಜನಿಕ ಪ್ರವೇಶ ನಿರ್ಭಂಧಿಸಿದ್ದರು. ಕೆಲ ಹೊತ್ತಿನಲ್ಲೇ ಕಾರವಾರದಿಂದ ಅಂಕೋಲಾಕ್ಕೆ ಬಂದಿಳಿದ ವಿಧ್ವಂಸಕ ಕೃತ್ಯ ತಪಾಸಣಾ ತಂಡದವರು, ಶ್ವಾನ ದಳ ಸಮೇತ ತಪಾಸಣಾ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ. ಸೂಟ್ ಕೇಸ್ ಇದ್ದ ಸ್ಥಳಗಳನ್ನು ಡಿಟೆಕ್ಟರ್ ಬಳಸಿ, ಶ್ವಾನ ದಳದೊಂದಿಗೆ ತೀವೃ ತಪಾಸಣೆಗೊಳಪಡಿಸಿ, ಬಳಿಕ ಇಕ್ಕಟ್ಟಾದ ಜಾಗದಿಂದ ಹಗ್ಗ ಬಳಿಸಿ ನಿಧಾನವಾಗಿ ಹೊರಗಡೆ ಎಳೆದು ತಂದಿದ್ದಾರೆ.

ಈ ವೇಳೆ ಅಲ್ಲಿ ನೆರೆದ ಕೆಲವರಲ್ಲಿ ಸೂಟ್ ಕೇಸಿನಲ್ಲಿ ಏನಿರಬಹುದು ಎಂಬ ಆತಂಕ ಒಂದೆಡೆಯಾದರೆ,ಇನ್ನೊಂದೆಡೆ ಕುತೂಹಲವು ಮೂಡಿದಂತಿತ್ತು. ಅಂತೂ ಇಂತೂ ನಿಧಾನವಾಗಿ ಸೂಟಕೇಸ್ ತೆರೆದು ನೋಡಿದರೆ ಅದರ ಒಳಗಡೆ ಬಟ್ಟೆ ಬರೆಗಳು, ಔಷಧಿ – ಮಾತ್ರೆ ಪೊಟ್ಟಣ, ಮತ್ತಿತರ ವಸ್ತುಗಳು ಕಂಡುಬಂದಿದ್ದಲ್ಲದೇ ಭಾವಚಿತ್ರ ಸಹಿತ ಬ್ಯಾಂಕ್ ಪಾಸ್ ಬುಕ್ , ಚೆಕ್ ಬುಕ್ ಮತ್ತಿತರ ದಾಖಲೆ ಪತ್ರಗಳು ಸಿಗುವ ಮೂಲಕ ಸ್ಥಳೀಯರಲ್ಲಿ ಕೆಲ ಕಾಲ ಮೂಡಿದ್ದ ಆತಂಕ ಮರೆಯಾದಂತಾಗಿದೆ.

ದಾಖಲಾತಿಗಳಲ್ಲಿ ಯಲ್ಲಾಪುರ ಮೂಲದ ಒರ್ವ ರ ವಿಳಾಸ ಪತ್ತೆಯಾಗಿದ್ದು , ಪೊಲೀಸರು ಅಲ್ಲಿರುವ ಫೋನ್ ನಂಬರಿಗೆ ಸಂಪರ್ಕಿಸಿದರೆ ದೂರದ ದಾವಣಗೆರೆ ಅಥವಾ ಇನ್ನೆಲ್ಲಿಯವರೋ ಕರೆ ಸ್ವೀಕರಿಸಿದರು ಎನ್ನಲಾಗಿದ್ದು,ವಿಳಾಸ ಖಚಿತಪಡಿಸಿಕೊಳ್ಳಲು ಮತ್ತು ಸೂಟ್ ಕೇಸ್ ಬಿಟ್ಟವರಾರು,ಮತ್ತು ಯಾಕೆ ಇಟ್ಟು ಹೋಗಿದ್ದರು ಎನ್ನುವ ಕುರಿತು ಪೊಲೀಸ್ ತನಿಕೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ಸರಕಾರಿ ಇಲಾಖೆ ಬಳಿ ಪತ್ತೆಯಾದ ಸೂಟ್ಕೇಸಿನಲ್ಲಿ ಕಂತೆ ಕಂತೆ ನೋಟುಗಳಿರಬಹುದೇ,ಬಾ ಮತ್ತಿತರ ಸ್ಪೋಟಕ ವಸ್ತುಗಳಿರಬಹುದೇ ಎಂಬ ಪ್ರಶ್ನೆಗಳಿಗೆ ಸಿಪಿಐ ಚಂದ್ರಶೇಖರ್ ಮಠಪತಿ ನೇತೃತ್ವದಲ್ಲಿ ವಿದ್ವಂಸಕ ಕೃತ್ಯ ತಪಾಸಣ ತಂಡ ಮತ್ತು ಪೊಲೀಸ್ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಉತ್ತರ ದೊರೆಯುವ ಮೂಲಕ ಸ್ಥಳೀಯರ ಆತಂಕವೂ ದೂರವಾದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಮೂಲ ಸ್ಥಳದಲ್ಲೇ ಮುರಿನಕಟ್ಟೆ ನಿರ್ಮಾಣಕ್ಕೆ ಯೋಜನೆ ಸಿದ್ಧ : ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ: ಹೆದ್ದಾರಿ ಪ್ರಾಧಿಕಾರ ಮುರಿನಕಟ್ಟೆಯನ್ನು ಮೂಲ ಜಾಗದಲ್ಲಿಯೇ ಕಟ್ಟಲು ತಿರ್ಮಾನಿಸಿ ಈ ಕುರಿತು ನೀಲನಕ್ಷೇಯನ್ನು ತಯಾರಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಈ ವಿಚಾರದ ಕುರಿತಂತೆ ಜಿಲ್ಲಾಡಳಿತ ಹಾಗೂ...

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ ಸುರಕ್ಷಿತ ಆಶ್ರಯ ದೊರೆತಂತಿದ್ದು, ಕುಮಟಾ ಉಪವಿಭಾಗಾಧಿಕಾರಿಗಳ ಅನುಮತಿ ಬಳಿಕ ಹೋರಿಗಳನ್ನು ಗೋಶಾಲೆಗೆ ಕಳಿಸಿ, ಮೂಕ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಜೂನ್ 14 ರಂದು ಚುಟುಕು ಸಾಹಿತ್ಯ ಸಮ್ಮೇಳನ

ಕುಮಟಾ: ಉತ್ತರ ಕನ್ನಡ ಜಿಲ್ಲಾಮಟ್ಟದ 9 ನೇ ಹಾಗೂ ಕುಮಟಾ ತಾಲೂಕಾ 5ನೇ ಚುಟುಕು ಸಾಹಿತ್ಯ...

ಜಾನುವಾರು ರಕ್ಷಣೆ: ಗೋ ಶಾಲೆಗೆ ರವಾನಿಸುವ ಮೂಲಕ ಗೀರ್ ಹೋರಿಗಳಿಗೆ ಜೀವದಾನ

ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ...

ಮುರಿನಕಟ್ಟೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಕಾಗೇರಿ ಆಗ್ರಹ

ಭಟ್ಕಳ:ಮುರಿನಕಟ್ಟೆ ವಿಚಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹಿಂದೂಗಳ ಭಾವನೆಗಳಿಗೆ ಸಂಬAಧಿಸಿದ ವಿಷಯವಾಗಿದ್ದು, ಕೆಲ ಮತಾಂಧ...

ಅಳ್ವೆಕೋಡಿ ಕಪ್ಪೆಚಿಪ್ಪು ದುರಂತ: ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕಾಗೇರಿ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಪ್ಪೆಚಿಪ್ಪು ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ...

ಜಿಲ್ಲೆಯ ಆರೋಗ್ಯ ಸೇವೆಗೆ ಐತಿಹಾಸಿಕ ಹೆಜ್ಜೆ : ಶಾಸಕ ಸತೀಶ್ ಸೈಲ್

ಅಂಕೋಲಾ : ಜನರಿಗೆ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ 100 ಕೋಟಿ...

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ...

ಅಲಂಕಾರ ಜ್ಯುವೆಲ್ಲರ್ಸ್ : ಅಕ್ಷಯ ತೃತೀಯ ವಿಶೇಷ ಆಫರ್

ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು...

ಭಟ್ಕಳದಲ್ಲಿ 14 ಜಾನುವಾರಗಳ ರಕ್ಷಣೆ : ಇಬ್ಬರ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರ ವಿರುದ್ಧ ಭಟ್ಕಳ ಪಟ್ಟಣ ಪೊಲೀಸ್...