ಕುಮಟಾ, ಆಗಸ್ಟ್ 27: 50ನೇ ವರ್ಷದತ್ತ ಪಯಣಿಸುತ್ತಿರುವ ಗುಡಿಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ತನ್ನ ಅಜರಾಮರ ಪರಂಪರೆಯನ್ನು ಮತ್ತಷ್ಟು ಭವ್ಯಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಸಮಿತಿಯ ಪೂಜೆಗೆ ಒಳಪಡುವ ಮಹಾಗಣಪತಿಗೆ ಭಕ್ತರು ಸಮೂಹ ಸಹಕಾರದ ಮೂಲಕ ಬೆಳ್ಳಿಯ ಕಿರೀಟವನ್ನು ಸಮರ್ಪಿಸಿದ್ದಾರೆ.
ಸರ್ಕಾರಿ ಇಲಾಖೆಯ ಕಟ್ಟಡದ ಇಕ್ಕಟ್ಟಾದ ಗೋಡೆಗಳ ಮಧ್ಯೆ ಪತ್ತೆಯಾದ ಸೂಟ್ ಕೇಸ್ ! ? ಕೊನೆಗೂ ಸೂಟ್ಕೇಸ್ ರಹಸ್ಯ
ಈ ಕಿರೀಟದ ಸಮರ್ಪಣೆಗೆ ಸಂಪತ್ ನಾಗರಾಜ ನಾಯ್ಕ, ಪ್ರಕಾಶ್ ಮಂಜುನಾಥ ನಾಯ್ಕ (ರಮಣ ಮೆಡಿಕಲ್), ಯತಿರಾಜ ಕೆ. ನಾಯ್ಕ, ವಿನಾಯಕ ಗುಡಿಗಾರ, ಕಿಶನ್ ವಾಳ್ಕೆ, ರವಿಕಿರಣ ಕುಂಬಾರಮಕ್ಕಿ, ಉದಯ ಶಾಂಬಾ ಶೇಟ್, ರಾಜಾರಾಮ್ ಟ್ರೇಡರ್ಸ್, ಶಿವಾನಂದ ಗಣಪತಿ ಮಹಾಲೆ (ಪದ್ದಣ್ಣ), ಶ್ರೀಧರ ಕುಮಟಾಕರ (ಅಂಕೋಲಿ), ರಾಘವೇಂದ್ರ ದಯಾನಂದ ಶೇಟ್, ಪ್ರಥ್ವಿರಾಜ್ ಹರಿಶ್ಚಂದ್ರ ನಾಯ್ಕ, ಗುರು ಗಜಾನನ ನಾಯ್ಕ ವಕ್ಕನಳ್ಳಿ (ದುರ್ಗಾ ಮೋಟರ್ಸ್), ಶ್ರೀನಿವಾಸ ನಾಯ್ಕ, ಪ್ರಾತೇಶ್ ನಂಬಿಯಾರ್ (ಪ್ರವೀಣ ವಾಚ್ ವರ್ಕ್ಸ್), ವಾಸು ಶಾಂಬಾ ಶೇಟ್, ಪವನ ಗುನಗಾ, ರಾಜುಗೋಪಾಲ ಅಡಿ ಗೋಕರ್ಣ, ಎನ್.ಬಿ. ನಾಯ್ಕ, ಹೆಗಡೆ, ವೆಂಕಟ್ರಮಣ ವಾಸುದೇವ ಶೇಟ್, ಶ್ರೇಯಾ, ಚಿನ್ಮಯಿ, ವೈಷ್ಣವಿ, ಚೈತ್ರ, ಛಾಯಾ, ತಾರಾ ಗಂಗಾಧರ ನಾಯ್ಕ, ಯಶವಂತ ನಾಯ್ಕ ಕೋನಳ್ಳಿ, ಸುಜಾತಾ ನಾಯ್ಕ ಕೋನಳ್ಳಿ, ನಾಗರಾಜ ಗುನಗಾ ಸಂಕೋಳ್ಳಿ ಮೊದಲಾದ ಅನೇಕರ ಭಕ್ತಿದಾನ ಕಾರಣವಾಗಿದೆ ಎಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲಕ್ಷ್ಮಣ ಮಾಧವ ನಾಯ್ಕ ತಿಳಿಸಿದ್ದಾರೆ.
ಇದೇ ವೇಳೆ, ಸೂರಜ್ ನಾಯ್ಕ ಸೋನಿ ಗೆಳೆಯರ ಬಳಗ, ಸುಬ್ರಾಯ ವಾಳ್ಕೆ, ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಕೃಷ್ಣ ಬಾಬಾ ಪೈ, ಲಕ್ಷ್ಮಣ ಮಾಧವ ನಾಯ್ಕ, ವೆಂಕಟ್ರಮಣ ವಾಸುದೇವ ಶೇಟ್, ರಾಜು ಕೃಷ್ಣ ಗುನಗಾ, ಎಂ.ಟಿ. ನಾಯ್ಕ, ಟೋನಿ ರೋಡ್ರಗೀಸ್ ಹಾಗೂ ಗುಡಿಗಾರಗಲ್ಲಿ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸಂಭ್ರಮ ಸಮಿತಿಯವರು ಸಹಯೋಗದಲ್ಲಿ, ಈ ವರ್ಷ ಶಾಲೆಯ ಎದುರಿಗೆ ಇಂಟರ್ಲಾಕ್ ಅಳವಡಿಕೆ ಕಾರ್ಯಕ್ಕೆ ಸಹಕರಿಸಿದ್ದಾರೆ.
ಇದರಿಂದ ಶಾಲೆಯ ದೀರ್ಘಕಾಲದ ಕನಸು ನನಸಾಗಿದೆ ಎಂದು ಶಾಲೆಯ ಮುಖ್ಯಾಧ್ಯಾಪಕರು ಸಂತಸ ವ್ಯಕ್ತಪಡಿಸಿದ್ದಾರೆ. ಭಕ್ತರ ಸಾಮೂಹಿಕತೆ ಮತ್ತು ಸಮಾಜಮುಖಿ ಸೇವೆ ಮಿಶ್ರಣಗೊಂಡ ಈ ಗಣೇಶೋತ್ಸವ ಪ್ರಯತ್ನವು, ಗುಡಿಗಾರಗಲ್ಲಿ ಗಣಪತಿಯ ಆರಾಧನೆಗೆ ಇನ್ನಷ್ಟು ಕೀರ್ತಿಯನ್ನು ತಂದಿದೆ.
ವಿಸ್ಮಯ ನ್ಯೂಸ್, ಕುಮಟಾ