Important

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್: ಅಂಕೋಲಾದಲ್ಲಿ ಭವ್ಯ ಶುಭಾರಂಭ

Share

ಅಂಕೋಲಾ, ಆಗಸ್ಟ್ 24: ಪಟ್ಟಣದ ಬಂಡಿಬಜಾರ ಮುಖ್ಯ ರಸ್ತೆಯಂಚಿಗೆ ನವೀಕೃತಗೊಂಡಿರುವ ಭವ್ಯವಾದ ಕಟ್ಟಡದಲ್ಲಿ ಅಲಂಕಾರ ಜ್ಯುವೆಲರ್ಸ್ ನ ಬೃಹತ್ತ ಮಳಿಗೆ ಅಗಸ್ಟ್ 24 ರ ರವಿವಾರ ಶುಭ ಮುಹೂರ್ತದಲ್ಲಿ ಗ್ರಾಹಕರ ಸೇವೆಗೆ ತೆರೆದುಕೊಂಡಿದೆ.

  • ಬೆಳ್ಳಿ, ಬಂಗಾರ, ವಜ್ರಾಭರಣ, ಮುತ್ತು, ರತ್ನಾಭರಣ, ಹರಳುಗಳ ವಿಶೇಷ ಆಯ್ಕೆ
  • ಆಧುನಿಕ ಹವಾನಿಯಂತ್ರಿತ ಕಟ್ಟಡ, ಸುಂದರ ಒಳಾಂಗಣ ವಿನ್ಯಾಸ
  • ಪ್ರತಿಷ್ಠಿತ ಕಂಪನಿಗಳ ವಜ್ರಾಭರಣ ಮಾರಾಟದ ಅಧಿಕೃತ ಪರವಾನಿಗೆ

ಬೆಳ್ಳಿ ಬಂಗಾರ , ವಜ್ರಾಭರಣ , ಮುತ್ತು ,ರತ್ನ ,ಹರಳುಗಳ ವಿಶೇಷ ಆಯ್ಕೆಯ ಅವಕಾಶ ಕಲ್ಪಿಸಿ , ಆಧುನಿಕತೆಗೆ ತಕ್ಕಂತೆ ಹವಾನಿಯಂತ್ರಿತ ಕಟ್ಟಡ, ವಿಶಾಲವಾದ ಹಾಗೂ ಸುಂದರ ಒಳಾಂಗಣ ವಿನ್ಯಾಸದೊಂದಿಗೆ ಮತ್ತಷ್ಟು ಹೊಸತನದೊಂದಿಗೆ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಗ್ರಾಹಕರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಬಂಗಾರದ ಆಭರಣ ಉದ್ಯಮದಲ್ಲಿ ವಿಶ್ವಾಸ ಅತ್ಯಂತ ಮುಖ್ಯವಾಗಿದ್ದು ಅಂಕೋಲಾ ತಾಲೂಕಿನ ಗಣಪಯ್ಯ ಕುಡಾಳಕರ್ ಅವರ ಮನೆತನ ನೂರಾರು ವರ್ಷಗಳಿಂದ ತಾಲೂಕು ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನತೆಯ ವಿಶ್ವಾಸ ಗೆದ್ದುಕೊಂಡಿದೆ.

ವಿಶ್ವಾಸದ ಮತ್ತೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್

ನಾಡಿನ ಅತ್ಯಂತ ಯಶಸ್ವಿ ಸ್ವರ್ಣೋದ್ಯಮಗಳ ಸಾಲಿನಲ್ಲಿ ಒಂದೆoಬ ಹೆಗ್ಗಳಿಕೆ ಪಡೆದಿರುವ ಅಲಂಕಾರ ಜ್ಯುವೆಲರ್ಸ , ಪ್ರತಿಷ್ಠಿತ ಕಂಪನಿಗಳ ವಜ್ರಾಭರಣ ಮಾರಾಟದ ಅಧಿಕೃತ ಪರವಾನಿಗೆಯೊಂದಿಗೆ ಆಭರಣ ಪ್ರಿಯರಿಗೆ ಒಂದೇ ಶೋರೂಂನಲ್ಲಿ ಬೆಳ್ಳಿ – ಬಂಗಾರ – ವಜ್ರಾಭರಣ ದೊರೆಯುವಂತೆ ಪ್ರತ್ಯೇಕ ಪ್ರತ್ಯೇಕ ಕೌಂಟರ್ ಗಳನ್ನು ತೆರೆದು ನಗು ಮುಖದ ಹಾಗೂ ಗುಣಮಟ್ಟದ ಸೇವೆ ಮುಂದುವರಿಸಲು ನುರಿತ 10 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿಕೊಂಡಿದೆ.

ಮೂರು ಸಹೋದರರ ಪರಿಶ್ರಮ

ಗಣಪಯ್ಯ ಕುಡಾಳಕರ್ ಅವರು ಸತತ ಪರಿಶ್ರಮದೊಂದಿಗೆ ಕಟ್ಟಿ ಬೆಳಸಿದ ಅಲಂಕಾರದ ಕಿರೀಟಕ್ಕೆ, ಮೂರು ರತ್ನಗಳಂತೆ , ಗಣಪಯ್ಯ ಅವರ ಮಕ್ಕಳಾದ ಉದಯ, ಪ್ರಕಾಶ , ಮಧು ಕುಡಾಲಕರ ಸಹೋದರರು, ಗ್ರಾಹಕರ ಪ್ರೀತಿ ವಿಶ್ವಾಸವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದು ದಿನದಿಂದ ದಿನಕ್ಕೆ ಅಲಂಕಾರ ಜ್ಯುವೆಲರ್ಸ್ ಹೊಸ ಹೊಸ ಗ್ರಾಹಕರ ಮನ ಸೂರೆಗೊಳ್ಳುತ್ತಿದ್ದು , ಉದ್ಘಾಟನೆಯ ದಿನದಂದು ಅಲಂಕಾರ್ ಜ್ಯುವೆಲರ್ಸ್ ಭವ್ಯ ಕಟ್ಟಡದ ಪಕ್ಕದಲ್ಲಿ ನಮ್ಮ ಅಂಕೋಲಾ ಎಂಬ ಸುಂದರ ಲೈಟಿಂಗ್ ಬೋರ್ಡ್ ಅಳವಡಿಸಿದ್ದರಿಂದ, ಇದು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಡೆಯೂ ಸಖತ್ ವೈರಲ್ ಆಗುತ್ತಿದ್ದು,ನಮ್ಮ ಅಂಕೋಲಾ,ನಮ್ಮ ಅಲಂಕಾರ ಎಂದು ಹಲವರು ಹೆಮ್ಮೆಯಿಂದ ಶೇರ್ ಮಾಡುತ್ತಿದ್ದಾರೆ.

ಹೀಗಾಗಿ ಅಲಂಕಾರ ಜುವೆಲರ್ಸ್ ಮತ್ತೊಮ್ಮೆ ಮನೆಮಾತಾಗುತ್ತಿದೆ. ಗಣಪಯ್ಯ ಕುಡಾಳಕರ ಅವರು ತಮ್ಮ 11 ನೇ ವಯಸ್ಸಿನಲ್ಲೇ ಬಂಗಾರದ ಕೆಲಸವನ್ನು ಶೃದ್ಧೆಯಿಂದ ಕಲಿತು ಕರಗತ ಮಾಡಿಕೊಂಡರಲ್ಲದೇ, ಮನೆಯಲ್ಲೇ ಬಂಗಾರದ ಆಭರಣ ತಯಾರಿಕೆ ಕೆಲಸ ನಡೆಸಿ ಕಷ್ಟಕರವಾದ ಬದುಕಿನಲ್ಲಿ ಪರಿಶ್ರಮದಿಂದ ಹಂತ ಹಂತವಾಗಿ ಮೇಲಕ್ಕೆ ಏರಿದವರು.

ಆಭರಣ ತಯಾರಿಕೆಯಲ್ಲಿ ಇರುವ ನೈಪುಣ್ಯತೆ, ಗ್ರಾಹಕರೊಂದಿಗಿನ ಉತ್ತಮ ಭಾಂದವ್ಯ ಹಾಗೂ ಪ್ರೀತಿ ಮತ್ತು ಗ್ರಾಹಕರು ಅವರ ಮೇಲೆ ಇಟ್ಟ ನಿರಂತರ ವಿಶ್ವಾಸ ಅಂಕೋಲಾ ಸುತ್ತ ಮುತ್ತಲಿನ ಪರಿಸರದಲ್ಲಿ ಈ ಕುಟುಂಬಕ್ಕೆ ತನ್ನದೇ ಆದ ಹಿರಿತನ ಹಾಗೂ ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ.

ಮನೆಯಲ್ಲೇ ಬಂಗಾರದ ಆಭರಣ ತಯಾರಿಕೆ ಕೆಲಸ ಮಾಡುತ್ತಿದ್ದ ಗಣಪಯ್ಯ ಕುಡಾಳಕರ್ ಅವರು 1995 ರಲ್ಲಿ ಅಧಿಕೃತವಾಗಿ ಅಂಕೋಲಾದ ಬಂಡಿ ಬಾಜಾರದಲ್ಲಿ ಅಲಂಕಾರ ಜ್ಯುವೆಲರ್ಸ್ ಎಂಬ ಬಂಗಾರದ ಆಭರಣಗಳ ಅಂಗಡಿಯನ್ನು ಆರಂಭಿಸಿದ್ದರು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದರೂ ಕುಲ ಕಸುಬಿನಲ್ಲಿ ತಂದೆಯೊoದಿಗೆ ಕೈಜೋಡಿಸಿದ ಮೂವರೂ ಮಕ್ಕಳು ತಂದೆ ಕಾಲವಾದ ನಂತರ ಅವರು ಕಟ್ಟಿದ ಉದ್ಯಮದಲ್ಲೇ ಮುಂದುವರಿಯುವ ಮೂಲಕ ತಮ್ಮ ನಗು ಮುಖದ ಸೇವೆ ಮೂಲಕ ಇಂದು ಕೇವಲ ಅಂಕೋಲಾ ಅಷ್ಟೇ ಅಲ್ಲದೇ ದೇಶ ವಿದೇಶಗಳ ಕೆಲ ಗ್ರಾಹಕರನ್ನೂ ತನ್ನತ್ತ ಸೆಳೆದು ಯಶಸ್ವಿ ಸ್ವರ್ಣೋದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ.

ವಿಶ್ವಾಸಕ್ಕೆ ಇನ್ನೊಂದು ಹೆಸರೇ ಅಲಂಕಾರ ಜ್ಯುವೆಲರ್ಸ್ ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಈ ಉದ್ಯಮದ ಯಶಸ್ಸಿನ ಹಿಂದೆ ತಮ್ಮ ತಂದೆ ಗಣಪಯ್ಯ ಕುಡಾಲಕರ್ ಅವರ ಪರಿಶ್ರಮ ಮತ್ತು ಗ್ರಾಹಕರ ಪ್ರೀತಿ ವಿಶ್ವಾಸ , ಕುಟುಂಬ ವರ್ಗ ಸೇರಿದಂತೆ ಸರ್ವರ ಸಹಕಾರ ಮತ್ತು ದೈವ ಕೃಪೆಯೇ ಮೂಲ ಕಾರಣ ಎಂದು ಧನ್ಯತೆಯಿಂದ ಸ್ಮರಿಸಿಕೊಳ್ಳುವ ಅಲಂಕಾರ ಜ್ಯುವೆಲರ್ಸ್ ನ ಪಾಲುದಾರರಾಗಿರುವ ಮೂವರೂ ಸಹೋದರರು , ತಮ್ಮ ಉದ್ಯಮವನ್ನು ಬೆಳೆಸಲು ಸರ್ವರೂ ನೀಡಿದ ಸಹಕಾರ, ಪ್ರೀತಿ ಹಾಗೂ ವಿಶ್ವಾಸವನ್ನು ಶೋರೂಮ್ ಉದ್ಘಾಟನೆ ಸಂದರ್ಭದಲ್ಲಿ ಮನಸಾರೆ ಸ್ಮರಿಸಿದ್ದಾರೆ.

ಕುಡಾಳಕರ ಕುಟುಂಬದ ಸೊಸೆಯಂದಿರು,ಮೊಮ್ಮಕ್ಕಳು ,ಬಂಧು ಬಾಂಧವರು ಶುಭ ಮತ್ತು ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರನ್ನು ಪ್ರೀತಿಯಿಂದ ಸ್ವಾಗತಿಸಿ,ಆದರಾತಿಥ್ಯ ನೀಡಿ,ತಮ್ಮ ಪ್ರೀತಿ ಹಾಗೂ ಗೌರವ ಹಂಚಿಕೊoಡಿದ್ದು,ಕುಟುoಬದ ನೂರಾರು ಹಿತೈಷಿಗಳು ಆಪ್ತರು,ಜುವೆಲರ್ಸ್ ನ ಗ್ರಾಹಕರು,ವಿವಿಧ ಸಮಾಜದ ಗಣ್ಯರು ಸೇರಿದಂತೆ ಹಲವರು ಆಗಮಿಸಿ ಶುಭ ಹಾರೈಸಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ ಗುರುವಾರ, 10ರ ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಲಿದೆ. ಏಪ್ರಿಲ್ 9 ರಂದು ರಥಬೀದಿಯಲ್ಲಿರುವ ರಾಮಚಂದ್ರ...

ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ

ಹೊನ್ನಾವರ: ರಾಜ್ಯದ ಪ್ರತಿ ಗ್ರಾಮದಲ್ಲಿ ಔಷಧಿ ಗಿಡಗಳ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ವಡ್ನಾಳ್ ಜಗದೀಶ್ ರವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ‘ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ’ ದಲ್ಲಿ ಹೇಳಿದರು....

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...

ಕಲೆ ಆತ್ಮ ಗೌರವದ ಸಂಕೇತ: ಮಂಕಾಳು ವೈದ್ಯ

ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ...