Important

ಅಂಕೋಲಾದಬಾಳೇಗುಳಿ ಬೊಗ್ರಿಬೈಲಿನಲ್ಲಿ ಶ್ರೀ ಉದ್ಭವ ನಾಗಚೌಡೇಶ್ವರಿ–ವೀರಾಂಜನೇಯ ದೇವರ ಚತುರ್ಥ ವರ್ಧಂತಿ ಮಹೋತ್ಸವ

Share
  • ಏಪ್ರಿಲ್ 25–27ರವರೆಗೆ ವಿಜೃಂಭಣೆಯ ಧಾರ್ಮಿಕ ಮಹೋತ್ಸವ
  • ನವಚಂಡಿ ಹವನ, ಪೂರ್ಣಾಹುತಿ, ಅನ್ನಸಂತರ್ಪಣೆ
  • ಪಲ್ಲಕಿ ಸಮೇತ ಅಗ್ನಿಪ್ರವೇಶ, ಕೆಂಡದ ಬಸವೇಶ್ವರ ಅಲಂಕೃತ ಬಸವ ಆಗಮನ
  • ಭಕ್ತರಿಗೆ ವಿಶೇಷ ಆಶೀರ್ವಾದ

ಅಂಕೋಲಾ: ತಾಲೂಕಿನ ಬಾಳೇಗುಳಿ ಬೊಗ್ರಿಬೈಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಉದ್ಭವ ನಾಗಚೌಡೇಶ್ವರಿ ಅಮ್ಮನವರು ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವರುಗಳ ಚತುರ್ಥ ವಾರ್ಷಿಕ ವರ್ಧಂತಿ ಉತ್ಸವ ಮತ್ತು ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಏಪ್ರಿಲ್ 25ರಿಂದ 27ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಏಪ್ರಿಲ್ 25ರಂದು ಶ್ರೀ ಚೌಡೇಶ್ವರಿ ಅಮ್ಮನವರು ಮತ್ತು ಆಂಜನೇಯ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಏಪ್ರಿಲ್ 26ರಂದು ಬೆಳಿಗ್ಗೆ ನವಚಂಡಿ ಹವನ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಹಾಗೂ ದೇವರ ಪೂಜೆ, ಸವಾಲು ಕಾರ್ಯಕ್ರಮಗಳ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಎಲ್ಲ ಭಕ್ತರು ಪಾಲ್ಗೊಂಡು ಶ್ರೀ ದೇವರ ಅನ್ನ ಪ್ರಸಾದ ಸ್ಪೀಕರಿಸಿ ಪುನೀತರಾಗಲು ಕೋರಲಾಗಿದೆ.

ಉತ್ಸವದ ವಿಶೇಷ ಆಕರ್ಷಣೆ

ಈ ದಿನ ಕರಾವಳಿ ಭಾಗದ ಭಕ್ತರನ್ನು ಹರಸಲು ವಿಶೇಷ ವಾದ್ಯದೊಂದಿಗೆ ಕೆಂಡದ ಬಸವೇಶ್ವರ ಸ್ವಾಮಿಯ ಅಲಂಕೃತ ಬಸವ ಆಗಮಿಸುವುದು ಉತ್ಸವದ ವಿಶೇಷ ಆಕರ್ಷಣೆಯಾಗಲಿದೆ. ಏಪ್ರಿಲ್ 27ರಂದು ಅಮ್ಮನವರ ಗದ್ದುಗೆ ಪೂಜೆ ನಡೆಯಲಿದ್ದು, ಸಂಜೆ ದೇವರುಗಳ ಪಲ್ಲಕಿ ಸಮೇತ ಅಗ್ನಿಪ್ರವೇಶ ಕಾರ್ಯಕ್ರಮ ಭಕ್ತರ ಮನ ಸೆಳೆಯಲಿದೆ.

ಉತ್ಸವದ ಅಂಗವಾಗಿ ದೇವರ ಸನ್ನಿಧಿಯಲ್ಲಿ ವಾದ್ಯಸೇವೆ, ಅನ್ನದಾನ ಸೇವೆ, ಅಲಂಕಾರ ಸೇವೆ, ತುಲಾಭಾರ ಸೇವೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಊರ ನಾಗರಿಕರು ಹಾಗೂ ದೇವಾಲಯದ ಆಡಳಿತ ಸಮಿತಿಯವರು ಮನವಿ ಮಾಡಿದ್ದಾರೆ.

ಶ್ರೀ ಕ್ಷೇತ್ರವನ್ನು ನಂಬಿ ಬರುವ ಸದ್ಭಕ್ತರಿಗೆ ದೇವರು ಇಷ್ಟಾರ್ಥಗಳನ್ನು ಕರುಣಿಸಿ, ಅವರ ಕುಟುಂಬಗಳಿಗೆ ಆಯುರ್ ಆರೋಗ್ಯ ಮತ್ತು ಸಕಲ ಸೌಭಾಗ್ಯಗಳನ್ನು ನೀಡಲಿ ಎಂದು ಅರ್ಚಕರು ಪ್ರಾರ್ಥಿಸಿದ್ದು, ಎಲ್ಲ ಭಕ್ತರನ್ನು ಚತುರ್ಥ ವರ್ಧಂತಿ ಮಹೋತ್ಸವಕ್ಕೆ ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Share

📢 Stay Updated!

Join our official WhatsApp group to get instant news updates, alerts, and exclusive stories – right on your phone.

💬 Join our WhatsApp Group

Don't Miss

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ ಸಾಧ್ಯತೆ ಇರುತ್ತದೆ. ಆದರೆ ಹೋಮಿಯೋಪತಿ ಚಿಕಿತ್ಸೆಯು ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸುವುದಲ್ಲದೆ, ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ...

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಶಿಕ್ಷಕರು ಬೇಕಾಗಿದ್ದಾರೆ

ಕುಮಟಾ : ಅಂಕೋಲಾದ ಕೆನರಾ ವೆಲ್ಫೇರ್ ಟ್ರಸ್ಟ್ ನ ಕುಮಟಾ ಧಾರೇಶ್ವರದ ದಿನಕರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ಸಹಾಯಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. BSc, B.Ed (PCM) ಅರ್ಹತೆ ಹೊಂದಿದವರಿಗೆ...

🌐 📺 Visit Our Media Partner Site

ಉತ್ತರಕನ್ನಡ ಸುದ್ದಿ Update ಪಡೆಯಿರಿ

🔗 Go to Vismaya TV
Related Articles

ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಪಿಯು ಕಾಲೇಜಿನಲ್ಲಿ ನೇಮಕಾತಿ: ಕೂಡಲೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ & ಆದಿಚುಂಚನಗಿರಿ...

ಹೋಮಿಯೋಪತಿ ಸಂಸ್ಥಾಪಕ ಹಾನಿಮ್ಯಾನ್ ಅವರ 271ನೇ ಜನ್ಮ ದಿನಾಚರಣೆ

ಅಂಕೋಲಾ: ಇಂಗ್ಲಿಷ್ ಔಷಧಿಗಳನ್ನು ಸೇವಿಸಿದಾಗ ತಾತ್ಕಾಲಿಕವಾಗಿ ಕಾಯಿಲೆ ವಾಸಿಯಾದಂತೆ ಅನ್ನಿಸಿದರೂ, ಕೆಲವೇ ದಿನಗಳಲ್ಲಿ ಅದು ಮರುಕಳಿಸುವ...

ಗೋಕರ್ಣಕ್ಕೆ ಆಗಮಿಸಲಿದೆ ವರದಹಳ್ಳಿಯ ಶ್ರೀಧರ ಸ್ವಾಮಿಗಳ ಪಾದುಕೆ: ದರ್ಶನ ಮತ್ತು ಫಲಸಮರ್ಪಣೆಗೆ ಸುವರ್ಣಾವಕಾಶ

ಗೋಕರ್ಣ: ವರದಹಳ್ಳಿಯ ಸದ್ಗುರು ಶ್ರೀಧರ ಸ್ವಾಮಿಗಳ ಪಾದುಕೆ ಇದೇ ಏಪ್ರಿಲ್ 8ರ ಬುಧರವಾರ ಮತ್ತು 9ರ...

ವಿಸ್ಮಯ ಟಿ.ವಿ ಹೆಸರಿನಲ್ಲಿ ಮೋಸ: ವೀಕ್ಷಕರ, ಜಾಹೀರಾತುದಾರರ ಗಮನಕ್ಕೆ

ಕುಮಟಾ: ಕಳೆದ 13 ವರ್ಷಗಳಿಂದ ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ವಿಸ್ಮಯ...

ಫೋಟೋಗ್ರಾಫರ್ ಪ್ರಶಾಂತ ವಿಧಿವಶ : ಪಚ್ಚು ಎಂದೇ ಚಿರಪರಿಚಿತನಾಗಿದ್ದ ಯುವಕ ಇನ್ನು ನೆನಪು ಮಾತ್ರ

ಅಂಕೋಲಾ : ಪಟ್ಟಣ ವ್ಯಾಪ್ತಿಯ ಲಕ್ಷ್ಮೇಶ್ವರ ಕುಂಬಾರಕೇರಿ ನಿವಾಸಿ, ಪ್ರಶಾಂತ (ಪಚ್ಚು ) ಕೆ ನಾಯ್ಕ...

ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ ಉತ್ಸವ: ಏ.ಸಿ ಮೇಲೆ ಬಂಪರ್ ಆಫರ್

ಕುಮಟಾ: ಉತ್ತರಕನ್ನಡ ಜಿಲ್ಲೆಯ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಯುಗಾದಿ...

ನರ್ಸ್ ವೃತ್ತಿ ಮತ್ತು ಕುಟುಂಬ ಜವಾಬ್ದಾರಿಗಳ ನಡುವೆಯೇ ಸಾಧನೆ ಮಾಡಿದ ಪೂಜಾ ನಾಯ್ಕ

ಕುಮಟಾ :- ತಾಲೂಕಿನ ಕಲಭಾಗ ಗ್ರಾಮ ನಿವಾಸಿ ಪೂಜಾ ಸಂತೋಷ ನಾಯ್ಕ ಅವರು 2024–26ನೇ ಸಾಲಿನ...